ದೇಶದ ಆರ್ಥಿಕ ಮುನ್ನಡೆಗೆ ಮಹಿಳೆಯರ
ಕೊಡುಗೆ ಅಪಾರ: ಸರೋಜಿನಿದೇವಿ
ಕ.ಪ್ರ.ವಾರ್ತೆ ಹೊಳೆನರಸೀಪುರ ಮಾ 31
ಮಹಿಳೆ ಎಂದೂ ಅಬಲೆ ಅಲ್ಲ. ಆಕೆ ಪುರುಷರಂತೆ ಸರಿ ಸಮನಾಗಿ ದೇಶದ ಅಭ್ಯುದಯಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಫಲದಿಂದಲೇ ಇಂದು ದೇಶ ಆರ್ಥಿಕವಾಗಿ ಮುನ್ನಡೆಯಲು ಸಾಧ್ಯವಾಗಿದೆ ಎಂದು ಸರ್ಕಾರಿ ಶ್ರುಶೂಷ ಮಹಾವಿದ್ಯಾಲಯದ ಪ್ರಾಂಶುಪಾಲೆ ಸರೋಜಿನಿದೇವಿ ಅಭಿಪ್ರಾಯಪಟ್ಟರು.
ಪಟ್ಟಣದ ಸೀತಾವಿಲಾಸ್ ರಸ್ತೆಯಲ್ಲಿನ ಜೈನಬಸದಿಯಲ್ಲಿ ಪ್ರೇಮ ಮಹಿಳಾ ಸಮಾಜ ಮತ್ತು ಶ್ರೀಧ್ವನಿ ಮಹಿಳಾ ಸಂಘದ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಮುಕ್ತಾಯವಾಗದಂತೆ ನೋಡಿ ಕೊಳ್ಳಬೇಕೆಂದು ಕಿವಿ ಮಾತು ಹೇಳಿದ ಅವರು ಮಹಿಳೆ ಪುರುಷ ಪ್ರಧಾನ ಸಮಾಜದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾಳೆ. ಇದಕ್ಕೆ ಕಾರಣನಾದ ಪುರುಷನಿಗೆ ಬುದ್ದಿ ಕಲಿಸುವುದರ ಜತೆಗೆ ಮಾಡಿದ ಅಪರಾಧಕ್ಕೆ ತಕ್ಕ ಶಿಕ್ಷೆ ನೀಡುವ ಕಾನೂನು ತ್ವರಿತ ಜಾರಿಗೆ ಬರಬೇಕೆಂದು ನುಡಿದರು.
ನಿವೃತ್ತ್ತ ಶಿಕ್ಷಕಿ ರಮಾಮಣಿ ಅವರನ್ನು ಸನ್ಮಾನಿಸಲಾಯಿತು. ಪ್ರೇಮ ಮಹಿಳಾ ಸಮಾಜದ ಅಧ್ಯಕ್ಷೆ ಪ್ರೇಮಮಂಜುನಾಥ್, ಶ್ರೀಧ್ವ್ವನಿಮಹಿಳಾ ವಿವಿಧೋದ್ದೇಶ ಮಹಿಳಾ ಸಂಘದ ಅಧ್ಯಕ್ಷೆ ಅನಸೂಯ, ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಆಶಾ ಅರುಣ್ ಇದ್ದರು. ಗ್ರೀನ್ವುಡ್ ಇಂಗ್ಲಿಷ್ ಶಾಲೆ ಮುಖ್ಯೋಪಾಧ್ಯಾಯಿನಿ ಮಂಜುಳಾ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾ ಲೋಕೇಶ್ ಪ್ರಾರ್ಥಿಸಿದರು. ಲಕ್ಷ್ಮಿನಾಗರಾಜು ಸ್ವಾಗತಿಸಿದರು.
ಮಹದೇಶ್ವರ ಜಾತ್ರೆ ಪ್ರಯುಕ್ತ ಬೆಳ್ಳಿ ಪಲ್ಲಕ್ಕಿ ಉತ್ಸವ
ಕ.ಪ್ರ.ವಾರ್ತೆ ಅರಸೀಕೆರೆ ಮಾ 31
ಕೋಡಿಮಠದ ಮಹದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಕೋಡಿಮಠದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಿತು.
ಮಠದ ಸಂಪ್ರದಾಯದಂತೆ ರಾಜ ಮಹಾರಾಜರು ಹಾಗೂ ಹೈದರಾಲಿ ನೀಡಿದ್ದ ಬಿರುದು ಬಾವಲಿಗಳಿಂದ ಅಲಂಕೃತವಾದ ಬೆಳ್ಳಿ ಪಲ್ಲಕ್ಕಿ ಹಾಗೂ ಉತ್ಸವದಲ್ಲಿ ವೀರಗಾಸೆ, ಭಜನೆ, ಕರಡೆ ಮಜಲು ಈ ಉತ್ಸವಕ್ಕೆ ಮೆರಗು ನೀಡಿತು.
ಗ್ರಾಮ ತಳಿರು ತೋರಣಗಳಿಂದ ಅಲಂಕೃತಗೊಂಡಿದ್ದು ಮನೆ ಮುಂಭಾಗದಲ್ಲಿ ರಂಗೋಲಿ ಆಕರ್ಷಕವಾಗಿತ್ತು. ಸ್ವಾಮೀಜಿಗೆ ಮುಸ್ಲಿಂರು ಗ್ರಾಪಂನಿಂದ ಹಾಗೂ ಮನೆ ಮನೆ ಮುಂದೆ ಹಾರ ಫಲ ಸಮರ್ಪಿಸಿ ಭಕ್ತರು ಆಶೀರ್ವಾದ ಪಡೆದರು. ನಂತರ ಮಹದೇಶ್ವರ ಬೆಟ್ಟದಲ್ಲಿ ಗುಗ್ಗುಳ ಸೇವೆ, ಹೆಜ್ಜೆ ನಮಸ್ಕಾರ ಮುತ್ತೈದೆ ಸೇವೆ ನಡೆಯಿತು. ಮಹಾದಾಸೋಹ ಏರ್ಪಡಿಸಲಾಗಿತ್ತು. ಬೇರೆ ಬೇರೆ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

