ಟಿಪ್ಪು ಸೇನೆ ಕಾರ್ಯಕರ್ತರಿಂದ ಬೃಹತ್ ಬೈಕ್ ರ್ಯಾಲಿ
ಕ.ಪ್ರ. ವಾರ್ತೆ ಹಾಸನ ನ. 10
ಕನ್ನಡ ರಾಜ್ಯೋತ್ಸವ ಹಾಗೂ ಟಿಪ್ಪುಸುಲ್ತಾನ್ ಜನ್ಮ ದಿನಾಚರಣೆ ಅಂಗವಾಗಿ ಭಾನುವಾರ ವೀರಕನ್ನಡಿಗ ಟಿಪ್ಪು ಸೇನೆಯ ಕಾರ್ಯಕರ್ತರು ಬೃಹತ್ ಬೈಕ್ ರ್ಯಾಲಿ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ ರ್ಯಾಲಿಗೆ ನಗರದ ಹಳೇ ಮಟನ್ ಮಾರುಕಟ್ಟೆಯ ಸಮೀಪ ಚಾಲನೆ ನೀಡಿದರು.
ಜಿಲ್ಲಾ ವೀರ ಕನ್ನಡಿಗ ಟಿಪ್ಪು ಸೇನೆ ಹಾಗೂ ಟಿಪ್ಪು ಸುಲ್ತಾನ್ ಅಭಿಮಾನಿಗಳ ಸಂಘದ ವತಿಯಿಂದ ಟಿಪ್ಪು ಸುಲ್ತಾನ್ ನಿರ್ಮಿಸಿರುವ ಮಂಜ್ರಾಬಾದ್ ಕೋಟೆಯನ್ನು ವೀಕ್ಷಿಸೋಣ ಬನ್ನಿ ಎಂಬ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲು ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ನಗರದ ಹೊಸಲೇನ್ ರಸ್ತೆಯಿಂದ ಮೆರವಣಿಗೆ ಹೊರಟ ಕಾರ್ಯಕರ್ತರು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಂತರ ಆಲೂರು, ಬಾಳ್ಳುಪೇಟೆ, ಸಕಲೇಶಪುರದ ದೋಣಿಗಾಲ್ನಲ್ಲಿರುವ ಐತಿಹಾಸಿಕ ಮುಂಜ್ರಾಬಾದ್ ಕೋಟೆವರೆಗೂ ಸಂಚರಿಸಿದರು.
ಟಿಪ್ಪು ಜಯಂತಿಗೆ ಸರ್ಕಾರಿ ರಜೆ ಘೋಷಿಸಬೇಕು. ಕನ್ನಡದ ಏಳಿಗೆಗಾಗಿ ಟಿಪ್ಪು ಮಾಡಿದ ಸಾಧನೆಗಳನ್ನು ಮರು ಪ್ರಚಾರ ಮಾಡಬೇಕು. ಹಾಗೂ ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣ ರಸ್ತೆಗೆ ಟಿಪ್ಪು ಹೆಸರು ಹಾಗೂ ಪುತ್ಥಳಿ ಅನಾವರಣ ಮಾಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಆನಂದ್, ಮುಖಂಡ ಡಿ.ಮಲ್ಲೇಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ, ಟಿಪ್ಪು ಸೇನೆ ಅಧ್ಯಕ್ಷ ಅಕ್ಮಲ್ ಜಾವೇದ್, ಆಜಂ ಖಾನ್, ಲಿಂಗರಾಜಗೌಡ, ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಮುಬಾಶೀರ್ ಅಹಮದ್, ರಣಜಿತ ಸಿಂಹನ್, ಮಹಂತೇಶ್, ವಿಜಯಕುಮಾರ್
ಫಜಲೂರು ರೆಹಮನ್, ಎಚ್.ಪಿ. ಮೋಹನ್, ಅಮೀರ್ಜಾನ್, ಕಡಾಕಡಿ ಪೀರ್ಸಾಹೇಬ್, ಬಾಲಶಂಕರ್, ರಫೀಕ್, ಸತೀಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

