ಮಗ್ಗೆ ಕ್ಯಾಂಪ್ಗೆ ಬಂತು ಗಜಪಡೆ
-ಪಿ.ರವಿಕುಮಾರ್
ಹಾಸನ: ದಶಕಗಳಿಂದ ಇರುವ ಕಾಡಾನೆಗಳ ಮತ್ತು ಮನುಷ್ಯನ ನಡುವಿನ ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಒಟ್ಟಿಗೆ 30 ಕಾಡಾನೆಗಳನು ಹಿಡಿಯಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಅರಣ್ಯ ಇಲಾಖೆ ಈಗಾಗಲೇ ಕ್ಯಾಂಪ್ ಸಿದ್ಧಪಡಿಸಿದೆ.
30 ಕಾಡಾನೆಗಳನು ಹಿಡಿದು ಬೇರೆಡೆ ಸ್ಥಳಾಂತರಿಸುವ ಸಾಹಸಕ್ಕೆ ಸರ್ಕಾರ ಕೈಹಾಕಿರುವುದರಿಂದ ಸಾಮಾನ್ಯವಾಗಿಯೇ ಈ ಕಾರ್ಯಾಚರಣೆ ಯಶಸ್ವಿಯಾಗುವುದೇ ಅನೋ ಅನುಮಾನ ಎಲ್ಲರಲ್ಲಿ ಕಾಡುತ್ತಿದೆ. ಜನರ ಅನುಮಾನ ಹುಸಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಆನೆಗಳ ಸೆರೆ ಕಾರ್ಯಾಚರಣೆ ಭರದ ಸಿದ್ಧತೆ ನಡೆಸುತ್ತಿದೆ.
ಜಿಲ್ಲೆಯ ಸಕಲೇಶಪುರ, ಆಲೂರು, ಅರಕಲಗೂಡು ತಾಲೂಕುಗಳಲ್ಲಿ ರೈತರ ಪ್ರಾಣಹಾನಿ ಹಾಗೂ ಬೆಳೆಗಳನು ನಾಶ ಮಾಡುತ್ತಿರುವ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೈಕೋರ್ಟ್ ಸೂಚನೆ ಮೇರೆಗೆ ಸರ್ಕಾರ ಪುಂಡಾಟ ನಡೆಸುತ್ತಿರುವ ಆನೆಗಳ ಹಿಂಡನು ಹಿಡಿಯಲು ತಯಾರಿ ನಡೆಸುತ್ತಿರುವುದರಿಂದ ಈ ಭಾಗದ ಜನರಲ್ಲಿ ಒಂದು ಕಡೆ ಆತ್ಮವಿಶ್ವಾಸದ ಜೊತೆಗೆ ಆತಂಕವೂ ಕೂಡ ಉಂಟಾಗಿದೆ.
ಈ ಹಿಂದೆ ಹೇಮಾವತಿ ಜಲಾಶಯ ನಿರ್ಮಾಣವಾದ ನಂತರ ಅಲ್ಲಿದ್ದ ಆನೆ ಕಾರಿಡಾರ್ ಹಿನಿರಿನಲ್ಲಿ ಮುಳುಗಿ ಹೋಗಿದ್ದರಿಂದ ಆನೆಗಳು ಒಂದೆಡೆಯಿಂದ ಮತ್ತೊಂದೆಡೆ ಹೋಗುವ ಮಾರ್ಗ ತಪ್ಪಿತು. ಇದರಿಂದ ಆನೆಗಳ ಚಲನವಲನಕ್ಕೆ ಕಡಿವಾಣ ಬಿದ್ದಂತಾಯಿತು.
ಇದರಿಂದ ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ಪ್ರಾರಂಭವಾಯಿತು. ಜೊತೆಗೆ ಹಲವು ಬಾರಿ ಆನೆಗಳನು ಹಿಡಿಯುವುದಾಗಿ ಹೇಳಿದ್ದ ಸರ್ಕಾರದ ಯೋಜನೆ ಅರ್ಧಕ್ಕೆ ನಿಂತು ಹೋಗಿದ್ದರಿಂದ ಕಾಡಾನೆಗಳ ಮತ್ತು ಮನುಷ್ಯನ ನಡುವಿನ ಸಂಘರ್ಷಕ್ಕೆ ಎಡೆಮಾಡಿ ಕೊಟ್ಟಂತಾಗಿತ್ತು.
ಶ್ರೀಲಂಕಾ ಮಾದರಿ ಕ್ಯಾಂಪ್: ರಾಜ್ಯ ಸರ್ಕಾರ 30 ಕಾಡಾನೆಗಳನು ಹಿಡಿದು ಸ್ಥಳಾಂತರಿಸುವುದಾಗಿ ಹೇಳಿದ್ದರಿಂದ ಈ ಸಮಸ್ಯೆಗೆ ಸ್ಪಲ್ವಮಟ್ಟಿಗೆ ಪರಿಹಾರ ಸಿಕ್ಕಿದಂತಾಗುತ್ತದೆ. ಹಿಡಿಯುವ ಕಾಡಾನೆಗಳನು ಬಿಡಲು ಶ್ರೀಲಂಕಾ ಮಾದರಿಯಲ್ಲಿ ಆನೆಧಾಮಗಳನು ಮಾಡುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ಸಮಸ್ಯೆ ಸಮಸ್ಯೆಯಾಗಿಯೇ ಉಳಿಯಲಿದೆ. ಒಟ್ಟಿಗೆ ಆನೆಗಳನು ಹಿಡಿಯಲು ಸಾಕಷ್ಟು ಪೂರ್ವ ಸಿದ್ಧಗಳನು ನಡೆಸಿ ಕಾರ್ಯಾಚರಣೆ ನಡೆಸುವುದು ಆನೆಗಳ ಸುರಕ್ಷತೆಯಿಂದ ಒಳಿತು ಎಂದು ಮಲೆನಾಡು ಜನಪರ ಹೋರಾಟ ಸಮಿತಿಯ ಕಿಶೋರ್ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಪ್ರಸ್ತುತ 50ಕ್ಕೂ ಹೆಚ್ಚು ಕಾಡಾನೆ: ಜಿಲ್ಲೆಯಲ್ಲಿ ಪ್ರಸ್ತುತ 50ಕ್ಕೂ ಹೆಚ್ಚು ಕಾಡಾನೆಗಳಿದ್ದು, ಈ ಪೈಕಿ ಪುಂಡಾಟ ನಡೆಸುತ್ತಿರುವ ಸುಮಾರು 30 ಆನೆಗಳನು ಹಿಡಿಯಲು ಸರ್ಕಾರ ತಯಾರಿ ನಡೆಸುತ್ತಿದೆ. ಹಿಂದೆ ಈ ಸಮಸ್ಯೆ ಪರಿಹಾರಕ್ಕಾಗಿ ರಚಿಸಿದ್ದ ಸಮಿತಿಗಳು ಒಂದೆರಡು ಆನೆಗಳನು ಹಿಡಿದು ಸ್ಥಳಾಂತರಿಸುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಆದ್ದರಿಂದ ಆಲೂರು ಮತ್ತು ಸಕಲೇಶಪುರ ತಾಲೂಕಿನಲ್ಲಿ ಬೀಡು ಬಿಟ್ಟಿರುವ ಸುಮಾರು 30 ಕಾಡಾನೆಗಳನು ಒಟ್ಟಿಗೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಿದರೆ ಅವುಗಳು ಮತ್ತೆ ಬರುವುದಿಲ್ಲ ಎಂದು ತಿಳಿಸಿತ್ತು. ಇದಕ್ಕೆ ನ್ಯಾಯಾಲಯ ಸಮ್ಮತಿ ನೀಡಿದ್ದರಿಂದ ಕಾಡಾನೆಗಳ ಸೆರೆಗೆ ಹಂತ ಹಂತವಾಗಿ ತಯಾರಿ ನಡೆಯುತ್ತಿದೆ.
ಮಧುಮಲೈ ಅರಣ್ಯಕ್ಕೆ: ಹಿಂದೆ ಒಂದು ಆನೆಯನು ಹಿಡಿದು ಅದಕ್ಕೆ ರೇಡಿಯೋ ಕಾಲರ್ ಹಾಕಿ ಮಧುಮಲೈ ಅರಣ್ಯಕ್ಕೆ ಬಿಡಲಾಗಿತ್ತು. ಆದರೆ ಆ ಆನೆ ಮತ್ತೇ ಸಕಲೇಶಪುರ, ಆಲೂರು ತಾಲೂಕಿಗೆ ವಾಪಸಾಗಿತ್ತು. ಇದ್ದರಿಂದ ಈ ಭಾಗದ ಆನೆಗಳನು ಹಿಡಿದು ಬೇರೆಡೆ ಸ್ಥಳಾಂತರಿಸಿದರೂ ಮತ್ತೆ ಈ ಭಾಗಕ್ಕೆ ಬರುತ್ತವೆ ಅನೋ ಅಂಶ ಇಲ್ಲಿನ ಜನರನು, ರೈತರನು ತೀವ್ರವಾಗಿ ಕಾಡುತ್ತಿದೆ. ಅದಕ್ಕಾಗಿ ಸರ್ಕಾರ ಸೆರೆ ಹಿಡಿಯುವ ಕಾಡಾನೆಗಳನು ಸ್ಥಳಾಂತರಿಸಲು ಕುಶಾಲನಗರದ ದುಬಾರೆ ಹಾಗೂ ಸಕ್ಕರೆಬೈಲಿನಲ್ಲಿ ಆನೆ ಶಿಬಿರಗಳನು ಸ್ಥಾಪಿಸುವುದಾಗಿ ಹೇಳಿದೆ. ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಅನೋದು ನೋಡಬೇಕಿದೆ.
ಮಗ್ಗೆಯಲ್ಲಿ ಕ್ಯಾಂಪ್ ಪ್ರಾರಂಭ: ಆನೆಗಳನು ಹಿಡಿಯುವ ಸಲುವಾಗಿ ಕೊಡಗಿನ ಕುಶಾಲನಗರದ ದುಬಾರೆ ಶಿಬಿರದಿಂದ ಎರಡು ಆನೆಗಳು ಮತ್ತು ಬೇರೆಡೆಯಿಂದ 2 ಆನೆಗಳನು ಆಲೂರು ತಾಲೂಕಿನ ಮಗ್ಗೆ ಗ್ರಾಮದ ಮಾಗಡಿಹಳ್ಳಿಯಲ್ಲಿ ಕ್ಯಾಂಪ್ ಮಾಡಿದ್ದು, ಕಾಡಾನೆಗಳನು ಸೆರೆ ಹಿಡಿಯಲು ಈ ಗಜಪಡೆಗಳು ತಯಾರಿಯನು ನಡೆಸುತ್ತಿವೆ. ಈ ಕಾರ್ಯಾಚರಣೆಗೆ ಮತ್ತೆರಡು ಆನೆಗಳು ಬರಲಿದ್ದು, ಅವುಗಳ ನಿರೀಕ್ಷೆಯಲ್ಲಿ ಅರಣ್ಯ ಇಲಾಖೆಯಲ್ಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಣ್ ತಿಳಿಸಿದ್ದಾರೆ.
ಆನೆಗಳನು ಹಿಡಿಯುವ ಸಲುವಾಗಿ ಕೊಡಗಿನ ಕುಶಾಲನಗರದ ದುಬಾರೆ ಶಿಬಿರದಿಂದ ಎರಡು ಆನೆಗಳು ಮತ್ತು ಬೇರೆಡೆಯಿಂದ 2 ಆನೆಗಳನು ಆಲೂರು ತಾಲೂಕಿನ ಮಗ್ಗೆ ಗ್ರಾಮದ ಮಾಗಡಿಹಳ್ಳಿಯಲ್ಲಿ ಕ್ಯಾಂಪ್ ಮಾಡಿದ್ದು, ಕಾಡಾನೆಗಳನು ಸೆರೆ ಹಿಡಿಯಲು ಈ ಗಜಪಡೆಗಳು ತಯಾರಿಯನು ನಡೆಸುತ್ತಿವೆ. ಈ ಕಾರ್ಯಾಚರಣೆಗೆ ಮತ್ತೆರಡು ಆನೆಗಳು ಬರಲಿದ್ದು, ಅವುಗಳ ನಿರೀಕ್ಷೆಯಲ್ಲಿ ಅರಣ್ಯ ಇಲಾಖೆಯಲ್ಲಿದೆ
-ಲಕ್ಷ್ಮಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

