ಹಾಸನ

'ನಮ್ಮ ನೀರು ಹಂಚಿಕೆಗೆ ನೆರೆ ರಾಜ್ಯಗಳ ದಬ್ಬಾಳಿಕೆ'

Published On :

ಕ.ಪ್ರ. ವಾರ್ತೆ ಅರಸೀಕೆರೆ ನ. 24
ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ನಮ್ಮ ನೆಲ ಜಲ ಹಾಗೂ ಖನಿಜ ಸಂಪತ್ತುಗಳ ಮೇಲೆ ಅನ್ಯ  ರಾಜ್ಯಗಳು ದಬ್ಬಾಳಿಕೆ ಮಾಡುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ತಾಲೂಕು ಕರವೇ ಅಧ್ಯಕ್ಷ ಹೇಮಂತಕುಮಾರ್ ವಿಷಾದಿಸಿದರು.
ತಾಲೂಕಿನ ಕಣಕಟ್ಟೆ ಗ್ರಾಮದಲ್ಲಿ ಕರವೇ ಘಟಕ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಏಕೀಕರಣಗೊಂಡು 58 ವರ್ಷಗಳೇ ಕಳೆದರೂ ನದಿ ಹಾಗೂ ನದಿ ನೀರು ಹಂಚಿಕೆ ವಿಷಯ ಇಂದಿಗೂ ಜೀವಂತವಾಗಿದ್ದು ನಮ್ಮ ನೆಲ ಹಾಗೂ ನಮ್ಮ ನೀರು ಹಂಚಿಕೆ ವಿಷಯದಲ್ಲೂ ನೆರೆ ರಾಜ್ಯಗಳು ದಬ್ಬಾಳಿಕೆ ಮನೋಭಾವ ತಾಳಿದ್ದರಿಂದ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಖಂಡಿಸಿದರು.
ಇದೇ ಪರಿಸ್ಥಿತಿ ಮುಂದುವರೆದರೆ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಕಾರ್ಯಕರ್ತರು ಎಂತಹ ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದರು.
ವಿದ್ಯಾರಣ್ಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಎ.ನಾಗೇಶ್‌ರಾವ್ ಮಾತನಾಡಿ ದೇಶದಲ್ಲೇ ವಿಶಿಷ್ಟ ಕಲೆ ಸಂಸ್ಕೃತಿ ಒಳಗೊಂಡಿರುವ ಕನ್ನಡ ನಾಡು ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ. ನಮ್ಮ ಕವಿಗಳು ಸಾಹಿತಿಗಳು ತಮ್ಮ ಪದಪುಂಜಗಳ ಮೂಲಕ ಭಾಷೆಯ ಶ್ರೀಮಂತಿಕೆಯನ್ನ ಜಗತ್ತಿಗೇ ಸಾರಿದ್ದಾರೆ ಎಂದು ಮೆಚ್ಚುಗೆ ಸಂತಸ ವ್ಯಕ್ತಪಡಿಸಿದರು.
ಕರವೇ ನಗರಾಧ್ಯಕ್ಷ ಕಿರಣಕುಮಾರ್, ಕೆ.ಸಿ.ಮಹೇಶ್, ಗ್ರಾಪಂ ಸದಸ್ಯ ಧನಂಜಯ್, ಗ್ರಾಮದ ಮುಖಂಡರಾದ ಕೆ.ಸತೀಶ್, ಸೋಮಶೇಖರ್, ಶಿಕ್ಷಕ ಲೋಕೇಶ್, ಉಮೇಶ್‌ಬಾಬು, ಹನುಮೇಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.