ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹ
ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ಸರ್ಕಾರ ರೈತರ ಹಿತದೃಷ್ಟಿಯಿಂದ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಆಗ್ರಹಿಸಿದರು.
ಅವರು ನುಗ್ಗೇಹಳ್ಳಿ ಎನ್.ಬಿ. ರೇಣುಕಪ್ಪ ಅವರ ಜಮೀನಿನಲ್ಲಿ ನಡೆದ 2013-14ನೇ ಸಾಲಿನ ಭೂಚೇತನ ಯೋಜನೆಯ ತಾಲೂಕು ಮಟ್ಟದ ರಾಗಿ ಬೆಳೆಯ ಕ್ಷೇತ್ರೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೈತ ಶ್ರಮಪಟ್ಟು ರಾಸಾಯನಿಕ ಗೊಬ್ಬರ ಹಾಕಿ ಬೆಳೆದ ಬೆಳೆಗಳಿಂದ ಲಾಭ ಬರುತ್ತಿಲ್ಲ. ಇದರಿಂದ ರೈತರಿಗೆ ಕೃಷಿಯಿಂದ ಲಾಭವಾಗುತ್ತಿಲ್ಲ. ಧನದ ಗೊಬ್ಬರ ಹಾಕಿ ಕೃಷಿ ಮಾಡುವುದರಿಂದ ಲಾಭವಾಗುತ್ತದೆ ಎಂದರು.
ಜಪಾನ್ ದೇಶದಲ್ಲಿ ಒಂದು ಗುಂಟೆ ಭೂಮಿಯನ್ನು ಬಿಡದೆ ಕೃಷಿ ಮಾಡಿ ಮನೆಗೆ ಬೇಕಾಗುವಷ್ಟು ಎಲ್ಲಾ ತರಹದ ತರಕಾರಿಗಳನ್ನು ಬೆಳೆದುಕೊಳ್ಳುತ್ತಿದ್ದಾರೆ. ಅಲ್ಲಿಯ ರೈತರ ಜಮೀನುಗಳಿಗೂ ಗುಣಮಟ್ಟದ ಡಾಂಬರು ರಸ್ತೆಗಳಿದೆ ಅಲ್ಲಿಯ ರೈತರು ಅಭಿವೃದ್ಧಿವೊಂದಿದ್ದಾರೆ ಎಂದರು.
ನಮ್ಮ ದೇಶದಲ್ಲಿ ರೈತರ ಸಮಸ್ಯೆಗಳು ಹೆಚ್ಚಿವೆ. ಒಳ್ಳೆಯ ಮನೋಭಾವನೆಯಿಂದ ರೈತರ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಬೇಕು. ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಹೇಳಿದರು.
ಮರಳು ದಂಧೆಯಿಂದ ಪೊಲೀಸರು ರೆವಿನ್ಯೂ ಇಲಾಖೆಗೆ ಮಾಮೂಲು ಹೋಗುವಂತ ಸ್ಥಿತಿ ಬಂದಿದೆ. ಸರ್ಕಾರ ಕೂಡಲೇ ಹೊಸ ನೀತಿ ರೂಪಿಸಿ ಮರಳು ದಂಧೆ ತಡೆಯಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಡಾ. ಜಯರಾಂ ಮಾತನಾಡುತ್ತ ಲಘು ಪೋಷಕಾಂಶವುಳ್ಳ ಸಾವಯವ ಗೊಬ್ಬರ ಬೆಳೆಗಳಿಗೆ ಹಾಕುವುದರಿಂದ ಭೂಮಿಯ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು. ಕಾರ್ಯಕ್ರಮದಲ್ಲಿ ಮಾದರಿ ರೈತ ಎನ್.ಬಿ. ರೇಣುಕಪ್ಪ ಅವರನ್ನು ಶಾಸಕ ಸಿ. ಎನ್. ಬಾಲಕೃಷ್ಣ ಸನ್ಮಾನಿಸಿದರು.
ಸಮಾರಂಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಕೆ.ಎಂ. ಮಲ್ಲೇಶಗೌಡ, ತಾಲೂಕು ಜಲಾನಯನ ಕೃಷಿ ಅಧಿಕಾರಿ ಡಿ.ಆರ್. ಕೇಶವೇಗೌಡ ನುಗ್ಗೇಹಳ್ಳಿ ಕೃಷಿ ಅಧಿಕಾರಿ ಶ್ರೀನಿವಾಸ, ಬಾಗೂರು ಕೃಷಿ ಅಧಿಕಾರಿ ಕೆ. ಆದರ್ಶ, ಉದಯಪುರ ರಶ್ಮಿ, ಜಗದೀಶ್, ಸಾಮಾಜಿಕ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್ ಕಂಟೆ, ಎಚ್ಡಿಸಿಸಿ ಮಾಜಿ ಉಪಾಧ್ಯಕ್ಷ ಕೆಂಪನಂಜೇಗೌಡ, ಎಪಿಎಂಸಿ ಮಾಜಿ ಅದ್ಯಕ್ಷ ಬಿ.ಆರ್. ದೊರೆಸ್ವಾಮಿ, ಎಪಿಎಂಸಿ ನಿರ್ದೇಶಕ ಎಚ್.ಬಿ. ಶಿವಣ್ಣ, ಗ್ರಾಪಂ ಅಧ್ಯಕ್ಷೆ ಶೋಭಾ ರಾಜಶೇಕರ್, ಎನ್.ಎನ್. ಪುಟ್ಟಸ್ವಾಮಿ, ಗ್ರಾಪಂ ಸದಸ್ಯ ಎನ್.ಆರ್. ಮಹೇಶ್, ರಾಜೇಶ್ವರಿ, ಚನ್ನಮಲ್ಲಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

