ರು. 53 ಕೋಟಿ ತಂಬಾಕು ವಹಿವಾಟು
ಕ.ಪ್ರ. ವಾರ್ತೆ ರಾಮನಾಥಪುರ ಅ.14
ಸುಬ್ರಹ್ಮಣ್ಯನಗರದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ 30 ದಿವಸಗಳಲ್ಲಿ 53 ಕೋಟಿ 18 ಲಕ್ಷ 11 ಸಾವಿರ 970 ರು. ವಹಿವಾಟು ನಡೆದಿದೆ ಎಂದು ತಂಬಾಕು ಮಂಡಳಿ ಹರಾಜು ಮಾರುಕಟ್ಟೆಯ ಪ್ಲಾಟ್ಫಾರಂ 7ರ ಅಧೀಕ್ಷಕ ಮಂಜುನಾಥ್ ಹಾಗೂ 63ರ ಹರಾಜು ಅಧೀಕ್ಷಕ ರಮೇಶ್ ತಿಳಿಸಿದ್ದಾರೆ.
ಇಲ್ಲಿಯ ಫ್ಲಾಟ್ಫಾರಂ 7 ಹಾಗೂ 63ರ ಎರಡು ತಂಬಾಕು ಹರಾಜು ಮಾರುಕಟ್ಟೆಗೆ ಪ್ರತಿನಿತ್ಯ ರೈತರು ಹೊಗೆಸೊಪ್ಪು ತರುತ್ತಿದ್ದು, ಕನಿಷ್ಠ 60 ರಿಂದ ಗರಿಷ್ಟ 170.20 ರು.ಗೆ ಮಾರಾಟವಾಗುತ್ತಿದೆ. 30 ದಿವಸಗಳಲ್ಲಿ 53 ಕೋಟಿ 18 ಲಕ್ಷ 11 ಸಾವಿರ 970 ರು. ವಹಿವಾಟು ನಡೆದಿದ್ದು, 36 ಲಕ್ಷ 2 ಸಾವಿರ 31 ಕೆ.ಜಿ. ಮಾರಾಟವಾಗಿ ಪ್ರತಿ ಕೆ.ಜಿ. 145. 70 ರು. ಸರಾಸರಿ ದರ ರೈತರಿಗೆ ದೊರಕುತ್ತಿದೆ ಎಂದು ವಿವರಿಸಿದರು.
ಮಾರುಕಟ್ಟೆಗೆ ತಮ್ಮ ತಮ್ಮ ವ್ಯಾಪ್ತಿಯ ಕ್ಲಟ್ಟರ್ ತಂಬಾಕು ಬೇಲ್ಗಳನ್ನು ಪ್ರತಿ ದಿವಸ ಬೆಳಿಗ್ಗೆ 5.30ರಿಂದ ತಂಬಾಕು ಬೇಲ್ಗಳ ತೂಕ ಆರಂಭಿಸಿದ ನಂತರ 9 ಗಂಟೆಯಿಂದ ಹರಾಜು ಪ್ರಾರಂಭಿಸಲಾಗುತ್ತಿದೆ. ರೈತರು ಸಸ್ಯಸ್ಥಾನ ವರ್ಗೀಕರಣಕ್ಕೆ ತಕ್ಕಂತೆ ಗ್ರೇಡ್ ಮಾಡಿಸಿ, ತಂಬಾಕಿನಲ್ಲಿ ಅನ್ಯ ಪದಾರ್ಥಗಳು ಸೇರದ ಹಾಗೆ ಎಚ್ಚರವಹಿಸಿ ಬೇಲುಗಳನ್ನು ಮಾರುಕಟ್ಟೆಗೆ ತರಬೇಕೆಂದು ಹರಾಜು ಅಧೀಕ್ಷಕ ಮಂಜುನಾಥ್ ಹಾಗೂ ರಮೇಶ್ ಮನವಿ ಮಾಡಿದ್ದಾರೆ.
ತಂಬಾಕಿಗೆ ಉತ್ತಮ ಬೆಲೆ - ರೈತರ ಆಗ್ರಹ: ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಕೊಳ್ಳುವ ಕಂಪನಿಯವರು ಪ್ರಥಮ ಎಕ್ಸ್ ದರ್ಜೆಯಿಂದ 5ನೇ ದರ್ಜೆವರೆಗಿನ ತಂಬಾಕು ಸೊಪ್ಪು ಕೊಳ್ಳುವಂತೆ ತಂಬಾಕು ಬೆಳೆಗಾರರರು ಒತ್ತಾಯಿಸಿದರು.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ 2020ಕ್ಕೆ ಹಂತ ಹಂತವಾಗಿ ತಂಬಾಕು ಬೆಳೆ ನಿಷೇಧ ಮಾಡುತ್ತೇವೆ ಎನ್ನುವ ಕೇಂದ್ರ ತಂಬಾಕು ಮಂಡಳಿಯವರು ರೈತರಿಗೆ ಬೇರೆ ಪರ್ಯಾಯ ಮಾರ್ಗ ಸೂಚಿಸದೇ ರೈತರನ್ನು ಇಕ್ಕಟಿಗೆ ಸಿಲುಕಿಸುತ್ತಿದ್ದಾರೆ. ಲೈಸನ್ಸ್ದಾರರಿಗೆ ತಂಬಾಕಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಕರ್ನಾಟಕ ಹಾಗೂ ಆಂಧ್ರ ರೈತರ ನಡುವೆ ಬೆಲೆಯಲ್ಲಿ ತಾರತ್ಯಮ ನಡೆಯುತ್ತಿದೆ. ಇದರ ಹಿಂದಿನ ಒಳಮರ್ಮವೇನು ಎಂದು ಪ್ರಶ್ನಿಸಿದ್ದಾರೆ. ಹಾಲಿ ಇರುವ ಲೈಸನ್ಸ್ದಾರರಿಗೆ ಬೆಲೆಯನ್ನು ಕಡಿಮೆ ನೀಡುತ್ತಾರೆ. ಮತ್ತೆ ಹೊಸದಾಗಿ ಬೆಳೆಗಾರರಿಗೆ ಕಾರ್ಡ್ ಕೊಟ್ಟು ತಂಬಾಕು ಕೊಳ್ಳುತ್ತಾರೆ. ಹಾಗೂ ಹೆಚ್ಚುವರಿ ತಂಬಾಕು ಹರಾಜು ಮಾರುಕಟ್ಟೆ ಮಾಡುತ್ತೇವೆ ಎನ್ನುತ್ತಾರೆ ಇದರ ಒಳ ಮರ್ಮವೇನು ಎಂಬುದು ರೈತರಿಗೆ ತಿಳಿಯುತ್ತಿಲ್ಲ. ಇದರಿಂದ ತಂಬಾಕು ಬೆಳೆಗಾರ ಲೈಸನ್ಸ್ ದಾರರಿಗೆ ಬಹಳ ಅನ್ಯಾಯವಾಗುತ್ತಿದೆ ಎನ್ನುತಾರೆ ರೈತರು. ಪ್ರತಿ ವರ್ಷ ಪ್ರಾರಂಭದಲ್ಲಿ ಪ್ರಥಮ ದರ್ಜೆ ತಂಬಾಕು ಸೊಪ್ಪನ್ನು ಮಾತ್ರ ತಂಬಾಕು ಮಂಡಳಿಯವರು ರೈತರಲ್ಲಿ ಮಾರುಕಟ್ಟೆಗೆ ತಂದು ವಹಿವಾಟು ಮಾಡಿಸುತ್ತಾರೆ. ಕೆಳದರ್ಜೆಯ ಸೊಪ್ಪನ್ನು ಮಾರುಕಟ್ಟೆಯ ಮುಗಿಯುವ ವೇಳೆಗೆ ತರಿಸಿಕೊಂಡು ಬೇಕಾಬಿಟ್ಟಿ ಹರಾಜು ಮಾಡಿಕೊಂಡು ಮಾರುಕಟ್ಟೆಯಲ್ಲಿ ಇದರಿಂದ ರೈತರಿಗೆ ಭಾರಿ ಅನ್ಯಾಯವಾಗುತ್ತಿದೆ ಎಂದು ರೈತರು ದೂರಿದರು.
ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ ತಂಬಾಕಿಗೆ ಕನಿಷ್ಠ 200 ರು. ನಿಂದ ಗರಿಷ್ಠ 300 ರು ಬೆಲೆ ನೀಡಬೇಕು ಹಾಗೂ ಪ್ರತಿ ಕೆ.ಜಿ. ತಂಬಾಕಿಗೆ ಸರಾಸರಿ 200 ರು. ದರವನ್ನು ತಂಬಾಕು ಸೊಪ್ಪಿಗೆ ಬೇಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ತಂಬಾಕು ವ್ಯವಸಾಯಕ್ಕೆ ಮಾಡಿರುವ ಬ್ಯಾಂಕ್ ಹಾಗೂ ಕೈ ಸಾಲ ಹಾಗೂ ಮನೆಯಲ್ಲಿರುವ ವಡವೆ ವಸ್ತ್ರವನ್ನು ಅಡವಿಟ್ಟು ಮಾಡಿದ ಸಾಲದ ಹೊರೆ ಹೆಚ್ಚಾದಂತೆ ತಂಬಾಕು ರೈತರು ಸಾಲ ತೀರಿಸಲಾಗದೆ, ಅತ್ಮಹತ್ಯೆ ಪ್ರಕರಣಗಳಾಗುವ ಮುಂಚೆ ಸರ್ಕಾರ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ತಂಬಾಕು ಮಂಡಳಿ ರೈತರ ಸಂಕಷ್ಟ ನಿವಾರಿಸಬೇಕು. ರೈತರು ಮಾಡಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ವಾಣಿಜ್ಯ ಬ್ಯಾಂಕ್, ಸಹಕಾರ ಬ್ಯಾಂಕ್ಗಳ ಸಾಲ ಮನ್ನಾ ಮಾಡಬೇಕೆಂದು ಹೊಗೆಸೊಪ್ಪು ಬೆಳೆಗಾರರು ಒತ್ತಾಯಿಸಿದ್ದಾರೆ.
ಪ್ರತಿ ವರ್ಷ ಪ್ರಾರಂಭದಲ್ಲಿ ಪ್ರಥಮ ದರ್ಜೆ ತಂಬಾಕು ಸೊಪ್ಪನ್ನು ಮಾತ್ರ ಮಂಡಳಿಯವರು ವಹಿವಾಟು ಮಾಡುತ್ತಾರೆ. ಕೆಳದರ್ಜೆಯ ಸೊಪ್ಪನ್ನು ಮಾರುಕಟ್ಟೆ ಮುಗಿಯುವ ವೇಳೆಗೆ ತರಿಸಿಕೊಂಡು ಬೇಕಾಬಿಟ್ಟಿ ಹರಾಜು ಮಾಡುತ್ತಾರೆ. ಇದರಿಂದ ಭಾರಿ ಅನ್ಯಾಯವಾಗುತ್ತಿದೆ ಎಂದು ತಂಬಾಕು ಬೆಳೆಗಾರರು ದೂರುತ್ತಾರೆ.
ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ ತಂಬಾಕಿಗೆ ಕನಿಷ್ಠ 200 ರು. ನಿಂದ ಗರಿಷ್ಠ 300 ರು ಬೆಲೆ ನೀಡಬೇಕು ಹಾಗೂ ಪ್ರತಿ ಕೆ.ಜಿ. ತಂಬಾಕಿಗೆ ಸರಾಸರಿ 200 ರು. ದರವನ್ನು ತಂಬಾಕು ಸೊಪ್ಪಿಗೆ ಬೆಲೆ ನಿಗದಿ ಮಾಡಬೇಕು ಎಂಬುದು ಬೆಳೆಗಾರರ ಆಗ್ರಹ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

