25 ರಂದು ಜಿಲ್ಲಾ ಯುವ ಜನೋತ್ಸವ
ಹಾಸನ: ಜಿಲ್ಲಾ ಮಟ್ಟದ ಯುವ ಜನೋತ್ಸವ ಅ. 25 ರಂದು ಬೆಳಗ್ಗೆ 9 ರಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಸಲಾಗುವುದು ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶಿವಾನಂದ್ ತಿಳಿಸಿದ್ದಾರೆ.
ಯುವ ಜನೋತ್ಸವದಲ್ಲಿ ಜಿಲ್ಲೆಯ 15 ರಿಂದ 35 ವರ್ಷ ಒಳಪಟ್ಟ ಎಲ್ಲಾ ನೊಂದಾಯಿತ ಮತ್ತು ನೊಂದಾಯಿತ ವಲ್ಲದ ಯುವಕ ಸಂಘಗಳು, ಮಹಿಳಾ ಸಂಘಗಳು ಮತ್ತು ಮಹಿಳಾ ಮಂಡಳಿಗಳ ಸದಸ್ಯರು, ಕಾಲೇಜು ವಿದ್ಯಾರ್ಥಿಗಳು, ಸಂಗೀತ ಮತ್ತು ನೃತ್ಯ ಶಾಲೆಯ ಕಲಾವಿದರು ಭಾಗವಹಿಸಲು ಅರ್ಹರು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ಸ್ಪರ್ಧಿಗಳನ್ನು ರಾಜ್ಯ ಯುವಜನೋತ್ಸವದಲ್ಲಿ ಭಾಗವಹಿಸಲು ಕಳುಹಿಸಲಾಗುವುದು.
ಸ್ಪರ್ಧಿಗಳು ಕಡ್ಡಾಯವಾಗಿ ತಮ್ಮ ಜನ್ಮ ದಿನಾಂಕದ ದೃಢೀಕರಣದ ಬಗ್ಗೆ ಎಸ್ಎಸ್ಎಲ್ಸಿ ಅಂಕಪಟ್ಟಿ ಶಾಲೆಯ ಮುಖ್ಯೋಪಾಧ್ಯಾಯರು ನೀಡಿದ ಜನ್ಮ ದಿನಾಂಕದ ಪ್ರಮಾಣಪತ್ರ ಹೊಂದಿರತಕ್ಕದ್ದು, ಮತ್ತು ಸಮವಸ್ತ್ರ ತಾವೇ ತರತಕ್ಕದ್ದು.
ಸ್ಪರ್ಧೆಗಳ ವಿವರ - (ಯುವಕ ಯುವತಿಯರಿಗೆ ಪ್ರತ್ಯೇಕ ಸ್ಪರ್ಧೆ ಇರುವುದಿಲ್ಲ) ಜಾನಪದ ನೃತ್ಯ, (ಗುಂಪು ಸ್ಪರ್ಧೆ) ( 20 ಜನರ ತಂಡ)- 15 ನಿಮಿಷ, ಜಾನಪದ ಗೀತೆ, (ಗುಂಪು ಸ್ಪರ್ಧೆ) ( 10 ಜನರ ತಂಡ) - 7 ನಿಮಿಷ, ಏಕಾಂಕ ನಾಟಕ (ಹಿಂದಿ ಅಥವಾ ಇಂಗ್ಲಿಷಿನಲ್ಲಿ) (ಗುಂಪು ಸ್ಪರ್ಧೆ)(12 ಜನ) ಶಾಸ್ತ್ರೀಯ ಗಾಯನ - ಹಿಂದೂಸ್ತಾನಿ ಮತ್ತು ಕರ್ನಾಟಕ (ವೈಯಕ್ತಿಕ) 15 ನಿಮಿಷ, ಶಾಸ್ತ್ರೀಯ
ವಾದ್ಯಗಳು - ಸಿತಾರ್,ತಬಲ, ಕೊಳಲು, ವೀಣೆ, ಮೃದಂಗ(ವೈಯಕ್ತಿಕ) 15 ನಿಮಿಷ, ಹಾರ್ಮೋನಿಯಂ, (ವೈಯಕ್ತಿಕ) 10 ನಿಮಿಷ, ಗಿಟಾರ್, (ವೈಯಕ್ತಿಕ) 10 ನಿಮಿಷ, ಶಾಸ್ತ್ರೀಯ ನೃತ್ಯ-ಭರತನಾಟ್ಯ, ಕಥಕ್, ಕೂಚಿಪುಡಿ, ಮಣಿಪುರಿ,ಓಡಿಸ್ಸಿ (ವೈಯಕ್ತಿಕ)15 ನಿಮಿಷ, ಆಶುಭಾಷಣ (ಹಿಂದಿ ಅಥವಾ ಇಂಗ್ಲಿಷಿನಲ್ಲಿ) (ವೈಯಕ್ತಿಕ) 4 ನಿಮಿಷ ಭಾಗವಹಿಸುವ ಸ್ಪರ್ಧಿಗಳು ಅಕ್ಟೋಬರ್ 25 ರಂದು ಬೆಳಿಗ್ಗೆ 9 ಕ್ಕೆ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ವರದಿ ಮಾಡಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಸನ ಇವರನ್ನು ಖುದ್ದಾಗಿ ಅಥವಾ ದೂ 246056 ಸಂಪರ್ಕಿಸಲು ಕೋರಿದೆ.
ಪಶುವೈದ್ಯ ಕೋರ್ಸ್: ದಾಖಲಾತಿ ಯಾವಾಗ?
ಹಾಸನ: ಷರತ್ತುಬದ್ಧ ಮಾನ್ಯತೆ ಗಳಿಸಿರುವ ಬೀದರ್, ಹಾಸನ, ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜುಗಳಿಗೆ ಸಾಮಾನ್ಯ ಸಿ.ಇ.ಟಿ. ಮೂಲಕ ಪಶುವೈದ್ಯ ಕೋರ್ಸ್ಗೆ ಈ ವರ್ಷ ದಾಖಲಾತಿ ನಡೆಸಲು ಭಾರತೀಯ ಪಶುವೈದ್ಯ ಪರಿಷತ್ತು ಒಪ್ಪಿಗೆ ನೀಡಿದ್ದರೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಬೀದರಿನ ಪಶು ವೈದ್ಯಕೀಯ ವಿಶ್ವವಿದ್ಯಾಲಯಗಳು ಈ ಕುರಿತು ಕಿಂಚಿತ್ತೂ ಕಾಳಜಿ ವಹಿಸಿದಂತೆ ಕಾಣುತ್ತಿಲ್ಲ ಎಂದು ಸಮಾಜ ಸೇವಾಕರ್ತ ಬೇಂದ್ರೆ ಮಂಜುನಾಥ್ ವಿಷಾದಿಸಿದ್ದಾರೆ. ಬೆಂಗಳೂರಿನ ಪಶುವೈದ್ಯ ಕಾಲೇಜಿನಲ್ಲಿ ಕೋರ್ಸ್ ಆರಂಭಗೊಂಡು ಎರಡೂವರೆ ತಿಂಗಳು ಕಳೆದಿರುವುದರಿಂದ ಈಗ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡರೆ ಆಡ್ ಬ್ಯಾಚ್ ಆಗುತ್ತದೆ ಎನ್ನುವ ಕಾರಣಕ್ಕೆ ವಿಶ್ವವಿದ್ಯಾಲಯ ಆಸಕ್ತಿ ವಹಿಸುತ್ತಿಲ್ಲ. ಪಶುವೈದ್ಯಕೀಯ ಕೋರ್ಸ್ನ 180 ಸೀಟುಗಳಿಗೆ ದಾಖಲಾತಿ ಇಲ್ಲದೆ ಈ ವರ್ಷ ಬಾಗಿಲು ಮುಚ್ಚುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ದಾಖಲಾತಿ ಆರಂಭವಾಗುತ್ತದೆ ಎನ್ನುವುದು ಸುಳ್ಳುಸುದ್ದಿಯೇ. ಸಚಿವರು ಮತ್ತೊಮ್ಮೆ ಸುಳ್ಳು ಹೇಳಿದರೇ, ದಾಖಲಾತಿ ನಿಜವಾಗಿಯೂ ಆರಂಭವಾಗುವುದೇ ಎಂದು ಪ್ರಶ್ನಿಸಿರುವ ಅವರು, ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿದ್ದಾರೆ.
ಬಂಜಾರ ಚೈತನ್ಯ ಸಮಾವೇಶ
ಅರಸೀಕೆರೆ: ತಾಲೂಕಿನ ಲಂಬಾಣಿ ತಾಂಡಗಳ ಗಮನಕ್ಕೆ ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ಆಶ್ರಯದಲ್ಲಿ ಅ.17ರಂದು ಗುರುವಾರ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬುಡಕಟ್ಟು ಜನಾಂಗದ ಐತಿಹಾಸಿಕ ಬಂಜಾರ ಚೈತನ್ಯ ಸಮಾವೇಶ ನಡೆಯಲಿದೆ ಎಂದು ಯುವ ಮುಖಂಡ ಅವಿನಾಶ್ ನಾಯ್ಕ್ ಮನವಿ ಮಾಡಿದ್ದಾರೆ. ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳ ಬಯಸುವವರು ಮೊ. 7411646319 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

