ಹಾಸನ

ಆಯುರ್ವೇದ ಬಗ್ಗೆ ಪ್ರಚಾರ ಅವಶ್ಯ: ಶಾಸಕ

Published On :

ಸಕಲೇಶಪುರ: ಆಯುರ್ವೇದ ಔಷಧದ ಕುರಿತು ಹೆಚ್ಚಿನ ಪ್ರಚಾರದ ಅವಶ್ಯಕತೆ ಇದೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.
  ಪಟ್ಟಣದ ಕ್ರಾಫರ್ಡ್ ಆಸ್ಪತ್ರೆ ಅವರಣದಲ್ಲಿ ಆಯುರ್ವೇದ ಆಸ್ಪತ್ರೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಶಾಸಕರು ಮಾತನಾಡಿದರು.
 ಗಿಡಮೂಲಿಕೆಗಳಿಂದಲೇ ಸಿದ್ಧಪಡಿಸುವ ಆಯುರ್ವೇದ ಔಷಧದ ತವರು ಭಾರತವಾದರೂ ಪಾಶ್ಚಾತ್ಯ ದೇಶಗಳಲ್ಲಿ ಈ ಔಷಧಿಯ ಬಳಕೆ ಹೆಚ್ಚಿದೆ.
 ಆದರೆ ನಮ್ಮ ದೇಶದಲ್ಲಿ ಇಂಗ್ಲಿಷ್ ಔಷಧಿ ವ್ಯಾಮೋಹಕ್ಕೆ ಸಿಲುಕಿ ಆಯುರ್ವೇದ ಮರೆಯುತ್ತಿದ್ದಾರೆ ಎಂದು ಹೇಳಿದರು. ಸರ್ಕಾರ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಆಯುರ್ವೇದ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದು, ಪಟ್ಟಣದಲ್ಲಿ 55 ಲಕ್ಷ ರು. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಆಯುರ್ವೇದ ಆಸ್ಪತ್ರೆಯ ಸೌಲಭ್ಯವನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
 ತಾಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ವೇದಾವತಿ, ಪುರಸಭೆ ಅಧ್ಯಕ್ಷ ಎಸ್.ಎನ್. ಸತೀಶ್, ಉಪಾಧ್ಯಕ್ಷ ಮುಖೇಶ್, ವೈದ್ಯಾಧಿಕಾರಿ ಇಂದುಶೇಖರ್ ಕ್ರಾಫರ್ಡ್ ಆಸ್ಪತ್ರೆ ಸಿಬ್ಬಂದಿ ಹಾಗೂ ಇನ್ನೂ ಮೊದಲಾದವರು ಉಪಸ್ಥಿತರಿದ್ದರು.

ಅರೋಗ್ಯದ ಮಹತ್ವ ಕುರಿತು ವಿಶೇಷ ಉಪನ್ಯಾಸ
ರಾಮನಾಥಪುರ: ಆರೋಗ್ಯವಂತ ಭಾರತದ ಅಭಿವೃದ್ಧಿಗೆ ಅರೋಗ್ಯವಂತ ಮನಸ್ಸು ಬೇಕು ಎಂದು ಡಾ. ದಿಲೀಪ್ ತಿಳಿಸಿದರು. ರಾಮನಾಥಪುರ ಹೋಬಳಿ  ಹನ್ಯಾಳು ಗ್ರಾಮದ ಪ್ರೌಢಶಾಲೆಯ ಆವರಣದಲ್ಲಿ ನಡೆದ ರಾಷ್ಟ್ರೀಯ ವಿಶೇಷ ಶಿಬಿರದ 3ನೇ ದಿನದ ಅರೋಗ್ಯದ ಮಹತ್ವ ಮತ್ತು ಜಾನುವಾರುಗಳ ಆರೋಗ್ಯ ತಪಾಸಣಾ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಜಾನುವಾರುಗಳಿಗೆ ಬರುವ ಕಾಲಿ-ಬಾಯಿ ರೋಗದ ಬಗ್ಗೆ ತಿಳಿಸಿ ಜಾನುವಾರುಗಳು ಆರೋಗ್ಯಕರವಾಗಿ ಬೆಳೆಯಲು ಹಾಗೂ ಅವುಗಳ ಆರ್ಥಿಕ ಪರಿಸ್ಥಿತಿಯನ್ನು ಅಭಿವೃದ್ಧಿ ಪಡಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಬಾಲಕಿಯರ ಸರ್ಕಾರಿ ಪದವಿ ಪೂರ್ವ  ಕಾಲೇಜು ಇತಿಹಾಸ ಉಪನ್ಯಾಸಕ ಸಂಪತ್ಗೌಡ ಅಧ್ಯಕ್ಷತೆ ವಹಿಸಿದ್ದರು. ರುದ್ರಪಟ್ಟಣ ಸರ್ಕಾರಿ ಅಸ್ಪತ್ರೆ  ವೈದಾಧಿಕಾರಿ ಡಾ. ಸತೀಶ್, ಪ್ರಾಂಶುಪಾಲ  ಬಿ.ಎಸ್. ಜಗದೀಶ್, ಉಪನ್ಯಾಸಕ ಎಂ.ಸಿ. ಜಯದೇವ್, ಉಪನ್ಯಾಸಕ ಡೆಲ್ವಿಕುಮಾರ್, ಉಪನ್ಯಾಸಕ  ಐ.ಡಿ. ಸ್ವಾಮಿ, ವಾಣಿಜ್ಯಶಾಸ್ತ್ರ ಉಪನ್ಯಾಸಕ ಶ್ರೀ ಕೃಷ್ಣ ಗ್ರಾಮದ ಮುಖಂಡ ನಂದೀಶ್, ಗಂಗೂರು ಮಂಜಣ್ಣಭಾಗವಹಿಸಿದ್ದರು. ಶಿಬಿರಾರ್ಥಿ ರಂಜಿತ್ ಸ್ವಾಗತಿಸಿದರು. ಬಿ.ಎನ್. ರಮ್ಯ ನಿರೂಪಿಸಿದರು. ಮಂಜುಳ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.