ಜಾತಿ ರಹಿತ ಪ್ರಬುದ್ಧ ಭಾರತ ನಿರ್ಮಿಸೋಣ
ಕ.ಪ್ರ. ವಾರ್ತೆ ಅರಸೀಕೆರೆ ಅ.14
ಬಸವ, ಬುದ್ಧ, ಅಂಬೇಡ್ಕರ್ ತತ್ವ, ಆದರ್ಶಗಳನ್ನು ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಸಮಾನತೆ ಸಾರುವ ಅಗತ್ಯವಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.
ಸೋಮವಾರ ಸರ್ಕಾರಿ ನೌಕರರ ಸಂಘದ ಕಚೇರಿ ಆವರಣದಲ್ಲಿ ಬೌದ್ಧ ಮಹಾಸಭಾ ಹಾಸನ ಘಟಕದ ವತಿಯಿಂದ 2284ನೇ ಅಶೋಕ ವಿಜಯದಶಮಿ ಮಹತ್ವ ಸಾರುವ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಶಾಸಕರು ಮಾತನಾಡಿದರು.
ಬಸವ, ಬುದ್ಧ ಅಂಬೇಡ್ಕರ್ ಆಶಯದಂತೆ ಪ್ರೀತಿ, ಕರುಣೆ ಸಮಾನತೆಯಿಂದ ಕೂಡಿದ ಜಾತಿ ರಹಿತ ಪ್ರಬುದ್ಧ ಭಾರತವನ್ನು ಕಟ್ಟಲು ನಾವೆಲ್ಲರೂ ಪಣ ತೊಡಬೇಕಿದೆ ಎಂದರು.
ಆಸೆಯೇ ದು:ಖಕ್ಕೆ ಮೂಲ ಎಂಬುದನ್ನು ಅರಿತು ಅದನ್ನು ಬದುಕಿನಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳುವ ಮೂಲಕ ಜಗತ್ತಿಗೆ ಶಾಂತಿ ಸಂದೇಶ ಸಾರಿದ ಬುದ್ಧನ ತತ್ವವನ್ನು ಅನುಸರಿಸಿದಾಗ ಮಾತ್ರ ಶಾಂತಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಉಪಾಸಕ ನರಸಿಂಹಯ್ಯ ಮಾತನಾಡಿ, ಅಂಬೇಡ್ಕರ್ ಬೋಧಿಸಿದ ಸಮಾನತೆ, ಭ್ರಾತೃತ್ವ ವೈಚಾರಿಕತೆ, ವೈಜ್ಞಾನಿಕತೆ ಹಾಗೂ ಮಾನವೀಯತೆಯಿಂದ ಕೂಡಿದ ಬದುಕನ್ನು ಅನುಸರಿಸಿದಾಗ ಮಾತ್ರ ಅವರ ಆಶಯಕ್ಕೆ ಸಾರ್ಥಕತೆ ದೊರೆಯಲಿದೆ. ದೇಶಕ್ಕೆ ಸಂವಿಧಾನ ರೂಪಿಸಿಕೊಟ್ಟ ಡಾ. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿ ಬೋದಿಸತ್ವರಾದ ಐತಿಹಾಸಿಕ ಹಾಗೂ ಪವಿತ್ರ ದಿನವಾಗಿರುವ ಇಂದು ಮಹಾತ್ಮರನ್ನು ಸ್ಮರಿಸಬೇಕಿರುವುದು ಪ್ರತಿ ಬೌದ್ಧ ಧರ್ಮಾಭಿಮಾನಿಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರು ಪ್ರಯತ್ನಿಸಬೇಕೆಂದು ಕಿವಿ ಮಾತು ಹೇಳಿದರು.
ಹಾಸನ ಘಟಕ ಅಧ್ಯಕ್ಷ ಎನ್.ಬಿ. ವೀರಭದ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಉಪಾಸಕ ಬಿ.ಎನ್. ರಂಗನಾಥ್, ಮಹಾಬೋದಿ ಸೊಸೈಟಿಯ ಕೆ. ಕುಮಾರ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಪ್ರಕಾಶಮೂರ್ತಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

