ದೊಡ್ಡಮತಿಘಟ್ಟ ಬಳಿ ಬೈಕ್ಗೆ ಕಾರು ಡಿಕ್ಕಿ: ಬಾಲಕ ಸಾವು
ಚನ್ನರಾಯಪಟ್ಟಣ: ಬೈಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟ ಘಟನೆ ತಾಲೂಕಿನ ದೊಡ್ಡಮತಿಘಟ್ಟ ಕ್ರಾಸ್ ಬಳಿ ಭಾನುವಾರ ನಡೆದಿದೆ.
ತಾಲೂಕಿನ ದೊಡ್ಡಮತಿಘಟ್ಟ ಗ್ರಾಮದ ಶಿವರಾಜು ಎಂಬುವರ ಚಿಕ್ಕಪ್ಪನ ಮಗ ಗಗನ್ (5) ಮೃತಪಟ್ಟ ದುರ್ದೈವಿ ಬಾಲಕ.ಶಿವರಾಜು, ಗಗನ್ ಹಾಗೂ ಮೋಹನ್ಕುಮಾರ್ ಅವರು ಟಿವಿಎಸ್ ಮೋಟಾರ್ ಸೈಕಲ್ನಲ್ಲಿ ಬರಗೂರು ಹ್ಯಾಂಡ್ಪೋಸ್ಟ್ನಿಂದ ದೊಡ್ಡಮತಿಘಟ್ಟ ಕ್ರಾಸ್ನಲ್ಲಿ ಬೈಕನ್ನು ತಿರುಗಿಸಿದಾಗ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಜಖಂಗೊಂಡು ಬೈಕಿನ ಹಿಂಭಾಗ ಕುಳಿತಿದ್ದ ಗಗನ್ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಬಗ್ಗೆ ಶಿವರಾಜು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
14 ಜೂಜುಕೋರರ ಬಂಧನ: ಜಿಲ್ಲೆಯ ಪ್ರತ್ಯೇಕ ಸ್ಥಳದಲ್ಲಿ ಜೂಜಾಡುತ್ತಿದ್ದ 14 ಮಂದಿಯನ್ನು ಬಂಧಿಸಿರುವ ಪೊಲೀಸರು 60,650 ರು. ನಗದು ವಶಪಡಿಸಿಕೊಂಡಿದ್ದಾರೆ. ಅರಸೀಕೆರೆ ತಾ. ಎಂ.ವಿ.ಹಟ್ಟಿ ಪ್ಲೇಗಿನಮ್ಮ ದೇವಸ್ಥಾನ ಹಿಂಭಾಗದಲ್ಲಿ ಜೂಜಾಡುತ್ತಿದ್ದ ಗಂಗಾಧರ (31), ಚೌಡಬೋವಿ (29), ಪೂಜಾರಿನಾರಾಯಣ (37), ಶಿವಮೂರ್ತಿ (35), ಮೂರ್ತಿ (26), ಹರೀಶ (24), ಆನಂದ (26) ಸ್ವಾಮಿ(24) ಬಂಧಿತ ಆರೋಪಿಗಳು. ್ಲ ಪಣಕ್ಕಿಟ್ಟಿದ್ದ 24,850 ರು. ನಗದನ್ನು ವಶಪಡಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನುಗ್ಗೇಹಳ್ಳಿ ಕ್ರಾಸ್ ತೋಟದ ಮನೆಯ ಹಿಂಭಾಗದಲ್ಲಿ ಜೂಜಾಡುತ್ತಿದ್ದ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಮಹೇಶ (39), ರಾಜು (40), ರಾಘವೇಂದ್ರ (28), ಗೂರನಹಳ್ಳಿಯ ಯೋಗೀಶ (30), ಗೋಪಿ (36), ಗೋಪಾಲ (38) ಬಂಧಿತ ಆರೋಪಿಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

