ಹಾಸನ

ನಾಗದೇವತಾ ಪ್ರತಿಷ್ಠಾಪನೆ

Published On :

ಸಕಲೇಶಪುರ: ತಾಲೂಕಿನ ಬಾಳ್ಳುಪೇಟೆಯ ಬಸವೇಶ್ವರ ನಗರ ಬಡಾವಣೆಯಲ್ಲಿನ ಬೃಹತ್ ಅರಳಿ ಕಟ್ಟೆಯ ನಾಗಬನದಲ್ಲಿ ನಾಗದೇವತಾ ಪ್ರತಿಷ್ಠಾಪನೆ ಅ 27 ಹಾಗೂ 28 ರಂದು ನಡೆಯಲಿದೆ. ಪುರೋಹಿತ ಪಾವಂಜೆ ಮಾಧವರಾಯ ಅವರ ನೇತೃತ್ವದಲ್ಲಿ ಜೂನ್ 5 ರಂದು ನಾಗದೇವತೆ ವಿಗ್ರಹವನ್ನು ವಿಧಿನಿಯಮಗಳಂತೆ ಪೂಜಿಸಿ ಜಲವಾಸದಲ್ಲಿರಿಸಲಾಗಿದೆ. ನಾಗದೇವತೆ ಪ್ರತಿಷ್ಠಾಪನೆ ಅ.27 ಹಾಗೂ 28ರಂದು ಆಶ್ಲೇಷ ನಕ್ಷತ್ರದಲ್ಲಿ ಗಣಹೋಮ, ಸುದರ್ಶನ ಹೋಮಗಳೊಂದಿಗೆ ಧಾರ್ಮಿಕ ವಿಧಾನಗಳನ್ವಯ ನಡೆಯಲಿದೆ. ಹಾಗೂ ಪೂರ್ಣ ಕುಂಭ ಮೆರವಣಿಗೆ ಹಮ್ಮಿಕೊಂಡಿದೆ. ಕುಂಭ ಹೊರಲು ಬಯಸುವ ಆಸಕ್ತ ಮಹಿಳೆಯರು ಕುಂಭೋತ್ಸವ ಸಮಿತಿ ಅಧ್ಯಕ್ಷೆ ಶಾಂತಮ್ಮ ಮೊ. 8970508017 ಸಂಪರ್ಕಿಸುವಂತೆ ಕೋರಲಾಗಿದೆ.

ನದಿಯಲ್ಲಿ ತೇಲಿಬಂದ ಮಹಿಳೆ ಶವ    
ರಾಮನಾಥಪುರ: ಇಲ್ಲಿನ ಕಾವೇರಿ ನದಿಯ ಗಾಯತ್ರಿ ಶಿಲೆ ಹತ್ತಿರದ ಕಡಲಲ್ಲಿ 65 ವಯಸ್ಸಿನ ಅಪರಿಚಿತ ಮಹಿಳೆ ಶವ ಇತ್ತೀಚೆಗೆ ಪತ್ತೆಯಾಗಿದೆ. ರಾಮನಾಥಪುರ ಸುಬ್ರಹ್ಮಣ್ಯ ದೇವಸ್ಥಾನದ ಕಾವೇರಿ ನದಿಯಲ್ಲಿ ಶವ ತೇಲಿ ಬಂದಿದೆ. ತಕ್ಷಣ ಸ್ಥಳೀಯರು ಶವ ಕಂಡು ಕೊಣನೂರು ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಮೇಲಕ್ಕೆತ್ತಿ ಪರಿಶೀಲನೆ ಮಾಡಿದಾಗ, ಮಹಿಳೆಯ  ಮೈಮೇಲೆ 48 ಚಿನ್ನದ ಗುಂಡು ಹಾಗೂ ಸರ, 2 ಕಾಲುಂಗರ, ಮೂಗುತಿ, ಬಾಸಿಂಗ ಇದ್ದು, ಕೆಂಪು ಬಣ್ಣದ ಸೀರೆ ತೊಟ್ಟಿದ್ದಾರೆ. ಈ ಮಹಿಳೆ ಬಗ್ಗೆ ವಿವರ ತಿಳಿದು ಬಂದಿಲ್ಲ. ಬಹುಶ: ಕಾಲು ಜಾರಿ ನದಿಗೆ ಬಿದ್ದಿರಬಹುದು ಎಂದು ಕೊಣನೂರು ಪೊಲೀಸರು ಶಂಕಿಸಿದ್ದಾರೆ. ವಾರಸುದಾರರಿದ್ದಲ್ಲಿ ಮಾಹಿತಿಗೆ ಕೊಣನೂರು ಠಾಣೆ ಸಂಪರ್ಕಿಸಲು ಕೋರಿದೆ.

ಅಂಗವಿಕಲರಿಗೆ ಉಚಿತ ಅನಿಲ ಸಂಪರ್ಕ ಸೌಲಭ್ಯ
ಚನ್ನರಾಯಪಟ್ಟಣ: ಪಟ್ಟಣ ಪುರಸಭೆಯಿಂದ ಅಂಗವಿಕಲರಿಗೆ ಪಜಾ ಮತ್ತು ಪರಿಶಿಷ್ಟ ಪಂಗಡದವರಿಗೆ ಉಚಿತ ಅನಿಲ ಸಂಪರ್ಕವನ್ನು ವಿತರಿಸಲಾಯಿತು. ಪುರಸಭೆ ಕಮಿನಿಟಿ ಅಧಿಕಾರಿ ಶಾರದಮ್ಮ ಮಾತನಾಡಿ 2012-13ನೇ ಸಾಲಿನ ಫಲಾನುಭವಿಗಳಿಗೆ ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೂರು, ಅಂಗವಿಕಲರಿಗೆ ಇಪ್ಪತ್ತು ಇತರೆ ಜಾತಿಗೆ 23 ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ ಎಂದರು. ಪುರಸಭೆ ಅಧ್ಯಕ್ಷ ಸಿ.ಜಿ. ಮಂಜುನಾಥ್, ಮುಖ್ಯಾಧಿಕಾರಿ ಚಂದ್ರಶೇಖರ್, ನಾಗರಾಜ್, ಮಂಜುನಾಥ್, ಗೋಪಾಲಕೃಷ್ಣ, ಮೀನಾಕ್ಷಿ ರಂಗಸ್ವಾಮಿ ಇದ್ದರು.

ವಿದ್ಯಾರ್ಥಿ ವೇತನ ಸದ್ಬಳಕೆಗೆ ಸೂಚನೆ
ಚನ್ನರಾಯಪಟ್ಟಣ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಸತಿ ಯೋಜನೆ ಮತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ನೇಕಾರ ಸಮುದಾಯ ಒಕ್ಕೂಟದ ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ಪುಟ್ಟಣ್ಣ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.