ಗೋಹತ್ಯೆ ತಡೆಯಲು ಮುಂಜಾಗ್ರತಾ ಕ್ರಮ ಅಗತ್ಯ
ಅರಸೀಕೆರೆ: ಬಕ್ರೀದ್ ಹಬ್ಬದ ಹೆಸರಿನಲ್ಲಿ ನಿರಂತರವಾಗಿ ಗೋ ಹತ್ಯೆ ನಡೆಯುತ್ತಿದ್ದು, ತಾಲೂಕು ಆಡಳಿತ ಈ ಬಗ್ಗೆ ಕೂಡಲೇ ಗಮನ ಹರಿಸಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ತಾಲೂಕು ಭಾರತೀಯ ಗೋ ಪರಿವಾರದ ಮುಖಂಡರು ಉಪತಹಸೀಲ್ದಾರ್ ಭಾಗ್ಯ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮುಖಂಡ ಪಾರಸ್ ಜೈನ್ ಮಾತನಾಡಿ, ಪಟ್ಟಣದಲ್ಲಿ ಹಲವೆಡೆ ಅನಧಿಕೃತವಾಗಿ ಮನಬಂದಂತೆ ಕಸಾಯಿಖಾನೆಗಳನ್ನು ಆರಂಭಿಸಿ, ಗೋವುಗಳ ಹತ್ಯೆ ಮಾಡಲಾಗುತ್ತಿದೆ. ಈ ಸಂಬಂಧ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಗೋಹತ್ಯೆ ತಡೆಯಲು ತಾಲೂಕು ಆಡಳಿತ ಮುಂದಾಗಬೇಕೆಂದು ಆಗ್ರಹಿಸಿದರು. ನಾಗರಾಜ್ ಹೆಬ್ಬಾರ್, ವಸಂತಕುಮಾರ್, ಅರುಣ್ ಕುಮಾರ್ ಟಿ.ವಿ. ನವೀನ್ ಕಟ್ಟೆಹಳ್ಳಿ, ಹನುಮಾನ್ ಸಿಂಗ್ ಇದ್ದರು.
ಪಡಿತರ ಪದಾರ್ಥಗಳ ಬಿಡುಗಡೆ
ಹಾಸನ: ಚನ್ನರಾಯಪಟ್ಟಣ ತಾಲೂಕಿನ ಗ್ರಾಮಾಂತರ ಹಾಗೂ ಪಟ್ಟಣ ಪ್ರದೇಶದ ಎಎವೈ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಅಕ್ಟೋಬರ್ 2013ರ ಮಾಹೆಗೆ ಕೆಳಕಂಡಂತೆ ಆಹಾರ ಪಡಿತರ ಮತ್ತು ಸೀಮೆಎಣ್ಣೆ ಹಂಚಿಕೆ ಮಾಡಿದೆ. ಒಂದು ಯೂನಿಟ್ದಾರರಿಗೆ 9 ಕೆಜಿ ಅಕ್ಕಿ, 1 ಕೆಜಿ ಗೋಧಿ, ಎರಡು ಯೂನಿಟ್ದಾರರಿಗೆ 18 ಕೆಜಿ ಅಕ್ಕಿ, 2 ಕೆಜಿ ಗೋಧಿ, ಮೂರು, ನಾಲ್ಕು, ಐದು ಮತ್ತು ಹೆಚ್ಚಿನ ಯೂನಿಟ್ದಾರರಿಗೆ 27 ಕೆಜಿ ಅಕ್ಕಿ, 3 ಕೆಜಿ ಗೋಧಿ, ಅಂತ್ಯೋದಯ ಪಡಿತರ ಚೀಟಿದಾರರಿಗೆ 29 ಕೆಜಿ ಅಕ್ಕಿ, 6 ಕೆಜಿ ಗೋಧಿ, ಎಪಿಎಲ್ ಪಡಿತರ ಚೀಟಿದಾರರಿಗೆ ಆಹಾರ ಪಡಿತರ ಹಂಚಿಕೆ ಇರುವುದಿಲ್ಲ. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಅನಿಲರಹಿತ ಬಿಪಿಎಲ್, ಎಎವೈ, ಎಪಿಎಲ್ (ಗ್ಯಾಸ್ ಹೊಂದಿಲ್ಲದ) ಪಡಿತರ ಚೀಟಿದಾರರಿಗೆ 1 ಮತ್ತು 2 ಯೂನಿಟ್ದಾರರಿಗೆ 3 ಲೀಟರ್ ಸೀಮೆಎಣ್ಣೆಯಂತೆ ಹಾಗೂ 3, 4, 5 ಮತ್ತು ಹೆಚ್ಚಿನ ಯೂನಿಟ್ದಾರರಿಗೆ 5 ಲೀಟರ್ ಸೀಮೆಎಣ್ಣೆಯಂತೆ, ಗ್ಯಾಸ್ ಹೊಂದಿರುವ ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ಹಂಚಿಕೆ ಇರುವುದಿಲ್ಲ. ಆಹಾರ ಪಡಿತರ ಮತ್ತು ಸೀಮೆಎಣ್ಣೆ ದರದ ವಿವರ: ಬಿಪಿಎಲ್ ಅಕ್ಕಿ 1 ಕೆಜಿಗೆ ರು.1 ಮತ್ತು 1 ಕೆಜಿ ಗೋಧಿಗೆ ರು.1, ಅಂತ್ಯೋದಯ ಪಡಿತರ ಅಕ್ಕಿ 1 ಕೆಜಿಗೆ ರು.1ರಂತೆ, ಗೋಧಿ 1 ಕೆಜಿ ಗೆ 1.ರು ನಂತೆ, ಗ್ರಾಮಾಂತರ ಪ್ರದೇಶಕ್ಕೆ ಮತ್ತು ಪಟ್ಟಣ ಪ್ರದೇಶಕ್ಕೆ ಸೀಮೆಎಣ್ಣೆ 1 ಲೀಟರ್ಗೆ 16.50 ರು. ಪಡಿತರ ಚೀಟಿದಾರರು ಆಹಾರ ಪಡಿತರ ಮತ್ತು ಸೀಮೆಎಣ್ಣೆಯನ್ನು ಪ್ರಮಾಣ ಮತ್ತು ದರದಲ್ಲಿ ಪಡೆದುಕೊಳ್ಳತಕ್ಕದ್ದು. ದೂ: 08176-252493ಗೆ ದೂರು ಸಲ್ಲಿಸಬಹುದೆಂದು ತಹಸೀಲ್ದಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

