ಜೂಡೋ ಚಾಂಪಿಯನ್ಶಿಪ್ಗೆ ಚಾಲನೆ
ಕನ್ನಡಪ್ರಭವಾರ್ತೆ ಹೊಳೆನರಸೀಪುರ ಅ.15
ತಾಲೂಕಿನ ಮಾವಿನಕೆರೆ ಬಳಿಯಲ್ಲಿನ ಜವಾಹರ್ ನವೋದಯ ಕೇಂದ್ರೀಯ ವಿದ್ಯಾಲಯದಲ್ಲಿ, ರಾಜ್ಯ ಜೂಡೋ ಅಕಾಡೆಮಿ ನೇತೃತ್ವದಲ್ಲಿ 35ನೇ ಕರ್ನಾಟಕ ಜೂಡೋ ಚಾಂಪಿಯನ್ಶಿಪ್ ಪಂದ್ಯಾವಳಿಗಳು ಇತ್ತೀಚೆಗೆ ನಡೆದವು. ರಾಜ್ಯ ಜೂಡೋ ಅಕಾಡೆಮಿ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ರಾಜ್ಯದ ನಾನಾ ಕೇಂದ್ರೀಯ ವಿದ್ಯಾಲಯಗಳಿಂದ 280ಜೂಡೋ ಸ್ಪರ್ಧಿಗಳು ಭಾಗವಹಿಸಿದ್ದರು. ಪಂದ್ಯಾವಳಿಯನ್ನು ಹೊಳೆನರಸೀಪುರ ಆರಕ್ಷಕ ಉಪ-ವಿಭಾಗದ ಎಎಸ್ಪಿ ವಿನಾಯಕ್ ಪಾಟೀಲ್ ಉದ್ಘಾಟಿಸಿದರು. ಹಿರಿಯ ಪ್ರಾಥಮಿಕದಿಂದ ಪಿಯುಸಿಯವರೆಗಿನ 12ರಿಂದ 17ವರ್ಷ ವಯೋವುತಿಯವರೆಗೆ ಸಬ್ಜೂನಿಯರ್, ಜ್ಯೂನಿಯರ್ ಯೂತ್ ಸೀನಿಯರ್ನಂತೆ ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕವಾಗಿ 44ರಿಂದ 81 ಕಿಲೋವರೆಗಿನ ಪಂದ್ಯಾಟಗಳು ನಡೆದವು. ವಿವಿಧ ವಿಭಾಗಗಳು: ಪಂದ್ಯಾವಳಿಯಲ್ಲಿ ಬೆಳಗಾವಿ ಡಿವೈಇಎಸ್ನ 55ರಿಂದ 60 ಕಿಲೋ ವಿಭಾಗದಲ್ಲಿ ಕುಶಾಲ್ ಲಾಹೋರ್, 50 ಕೆ.ಜಿ ತೂಕದವರೆಗಿನ ವಿಭಾಗದಲ್ಲಿ ಬಿ. ನಾಗೇಶ್, ಕೆ.ಡಿ. ಗೀತ, 60ರಿಂದ 66 ಕೆ.ಜಿ ವಿಭಾಗದಲ್ಲಿ ಕೆ.ಶುಭ, ಮೋಹನ್ ಗೌರವ್, 48 ರಿಂದ 52 ಕೆ.ಜಿ ವಿಭಾಗದಲ್ಲಿ ಎನ್.ಆರತಿ, ಬೆಸ್ಟೋರಾಣಿ, 52ರಿಂದ 57ಕೆ.ಜಿ ವಿಭಾಗದಲ್ಲಿ ಕೋಮಲ್, 57ರಿಂದ 63ಕೆ.ಜಿ ವಿಭಾಗದಲ್ಲಿ ಪೂಜಾಗವಾಡೆ ಮತ್ತು ಎ. ಪಾರ್ವತಿ ಪ್ರಥಮ ಸ್ಥಾನ ಗಳಿಸಿದರು. ಬೆಳಗಾವಿ ಮಲ್ಲಿಕಾರ್ಜುನ್, ಪಲ್ಲವಿ ಪಾಟೀಲ್, ಕೆ. ಸಂಜನಾ, ಟಿ. ಅನಿತಾ, ಹಸೀನಾ, ಪ್ರಫುಲ್, ಪಿ. ಜಾನ್ಸನ್ ದ್ವಿತೀಯ ಸ್ಥಾನ ಗಳಿಸಿದರೆ, 50 ರಿಂದ 55ಕೆ.ಜಿ ವಿಭಾಗದಲ್ಲಿ ಮಾವಿನಕೆರೆ ನವೋದಯ ಜೆಎನ್ವಿ ವಿದ್ಯಾರ್ಥಿ ಬಿ.ಎ. ಮನೋಜ್, ಸುದರ್ಶನ್ ದ್ವಿತೀಯ ಸ್ಥಾನ ಪಡೆದರು. ವಿಜೇತರು: ರಾಜ್ಯ ಜೂಡೋ ಅಕಾಡೆಮಿಯ ಸದಾಶಿವ, ಶಂಕರ್ ಸಿಂಗ್, ಎಸ್. ಲಿಖಿತ್, ಆರ್. ಲಾವಣ್ಯ ಪ್ರಥಮ, ಡೇವಿಡ್, ರೇಣುಕಾಸ್ವಾಮಿ, ಪವಿತ್ರ, ದೊರೆಯಪ್ಪ, ಎನ್.ಶ್ರೀಧರ್, ಲಿಲ್ಲಿ ಮಾರ್ಗರೇಟ್, ಶಿಲ್ಪಾ ದ್ವಿತೀಯ ಸ್ಥಾನ ಪಡೆದರು. 90 ಕೆ.ಜಿ ವಿಭಾಗದಲ್ಲಿ ನಿಪ್ಪಾಣಿಯ ನಿನದ್ ವಕಾರಿಯಾ ಪ್ರಥಮ ಸ್ಥಾನ ಗಳಿಸಿದರೆ, 48 ಕೆ.ಜಿಗಿಂತ ಕಡಿಮೆ ತೂಕದ ವಿಭಾಗದಲ್ಲಿ ಮಂಗಳೂರಿನ ತನುಜಾ ದ್ವಿತೀಯ ಸ್ಥಾನ ಗಳಿಸಿದರು. ಪಂದ್ಯಾವಳಿಯಲ್ಲಿ ಸ್ಟೇಟ್ ಚಾಂಪಿಯನ್ಶಿಪ್ಗಾಗಿ ಮಾಸ್ಟರ್ ಆರ್.ಎನ್. ಕಾಂಬ್ಲೇ ಸ್ಮಾರಕ ಟ್ರೋಫಿ, ಪುರುಷರ ವಿಭಾಗದಲ್ಲಿ ಬೊಮ್ಮನಾಯಕನಹಳ್ಳಿ ಹನುಮೇಗೌಡ ಸ್ಮಾರಕ ಟ್ರೋಫಿ, ಮಹಿಳೆಯರ ವಿಭಾಗದಲ್ಲಿ ಜೆಎನ್ವಿ ಟ್ರೋಫಿ, ಬಾಲಕರ ವಿಭಾಗಕ್ಕೆ ಬೊಮ್ಮನಾಯಕನಹಳ್ಳಿ ಕಂಟ್ರಾಕ್ಟರ್ ರಾಮಕೃಷ್ಣ ಟ್ರೋಫಿ, ಬಾಲಕಿಯರ ವಿಭಾಗಕ್ಕೆ ಎನ್.ಆರ್. ಮುರಳಿ ಟ್ರೋಫಿಗಳನ್ನು ಪ್ರದಾನ ಮಾಡಲಾಯಿತು. ಪಂದ್ಯಾವಳಿಗಳ ನಂತರ ಹಿರಿಯ ಜೂಡೋ ತರಬೇತುದಾರರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಉಸ್ತುವಾರಿಯನ್ನು ಮಾವಿನಕೆರೆ ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲೆ ಮಾಧುರಿ ಉದಯಶಂಕರ್ ವಹಿಸಿದ್ದರು. ರಾಜ್ಯ ಜೂಡೋ ಅಕಾಡೆಮಿ ಕಾರ್ಯದರ್ಶಿ ಎಸ್.ಆರ್. ಶಿವಾನಂದ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

