ವಿಷ ಸೇವಿಸಿ ತಾಯಿ, ಮಗು ಸಾವು
ಹಾಸನ: ತಾಯಿ ಮಗು ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಬೇಲೂರು ತಾಲೂಕಿನ ಬಿಟ್ಟರವಳ್ಳಿ ಕೊಪ್ಪಲು ಗ್ರಾಮದ ಸಮೀಪ ಸೋಮವಾರ ನಡೆದಿದೆ. ರಂಜಿತಾ (25), ನವ್ಯಶ್ರೀ (1.5 ವರ್ಷ) ವಿಷ ಸೇವಿಸಿ ಮೃತ ದುರ್ದೈವಿಗಳಾಗಿದ್ದಾರೆ. ಹಾಸನ ತಾಲೂಕಿನ ವೀರಾಪುರ ಗ್ರಾಮದ ರಂಜಿತಾ ಎಂಬವರು ಅರಸೀಕೆರೆ ತಾಲೂಕಿನ ಲಕ್ಕೇನಹಳ್ಳಿ ಗ್ರಾಮದ ಹರೀಶ್ ಎಂಬುವವರೊಂದಿಗೆ 3 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಭಾನುವಾರ ಬಿಟ್ರವಳ್ಳಿ ಕೊಪ್ಪಲು ಗ್ರಾಮದಲ್ಲಿ ತಮ್ಮ ಸಂಬಂಧಿಕರ ಮನೆಗೆ ಹಬ್ಬಕ್ಕೆ ಅಗಮಿಸಿದ್ದರು.
ಸೋಮವಾರ ಬೆಳಗ್ಗೆ 10 ಗಂಟೆ ವೇಳೆಗೆ ಗ್ರಾಮದ ಸಮೀಪವಿರುವ ಚಿಕ್ಕಹಳ್ಳದ ಹತ್ತಿರ ರಂಜಿತಾ ತನ್ನ ಮಗಳು ನವ್ಯಶ್ರೀಗೆ ವಿಷ ಕುಡಿಸಿ ತಾನು ಕುಡಿದು ಅತಹತ್ಯೆಗೆ ಯತ್ನಿಸಿದ್ದಾಳೆ. ಚಿಕ್ಕಹಳ್ಳದ ಹತ್ತಿರ ಅಸ್ವಸ್ಥರಾಗಿದ್ದ ತಾಯಿ, ಮಗುವನ್ನು ಸಾರ್ವಜನಿಕರು ಸರ್ಕಾರಿ ಅಸ್ಪತ್ರೆಗೆ ಕರೆತಂದು ದಾಖಲು ಮಾಡಿದ್ದರು. ಆದರೆ ರಂಜಿತಾ ಬೇಲೂರು ಸರ್ಕಾರಿ ಅಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನವ್ಯಶ್ರೀಯನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಹಾಸನದಲ್ಲಿ ಮೃತಪಟ್ಟಿದ್ದಾಳೆ. ಆತ್ಮಹತ್ಯೆಗೆ ಕಾರಣ ಏನೆಂಬುದು ಪೊಲೀಸರ ತನಿಖೆಯ ನಂತರ ಬೆಳಕಿಗೆ ಬರಬೇಕಾಗಿದೆ. ಬೇಲೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದರೋಡೆಕೋರರಿಗೆ 5 ವರ್ಷ ಜೈಲು
ಹಾಸನ: ಬಸ್‌ಗಾಗಿ ಕಾಯುತ್ತಿದ್ದ ಸಾರಿಗೆ ಸಂಸ್ಥೆ ಚಾಲಕರನ್ನು ಕ್ವಾಲಿಸ್ ವಾಹನದಲ್ಲಿ ಕರೆದುಕೊಂಡು ಹೋಗಿ ಹಣ, ಆಭರಣ ಅಪಹರಿಸಿದ್ದ ಆರೋಪಿಗಳಿಗೆ ಇಲ್ಲಿನ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಮೇ 25, 2009ರ ರಾತ್ರಿ 10.30ರಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಚಾಲಕ ಬಿ.ಎಂ. ಶಂಕರ್ ಅವರು ಗೊರೂರಿಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಬಂದ ಅಪರಾಧಿಗಳಾದ ಹರೀಶ್, ಯೋಗೀಶ್, ಕಾಂತರಾಜು, ಶಿವರಾಜು ಮತ್ತು ಮಂಜುನಾಥ್ ಎಂಬುವರು ಟಯೋಟೊ ಕ್ವಾಲಿಸ್ ವಾಹನದಲ್ಲಿ ಹತ್ತಿಸಿಕೊಂಡು ಸ್ವಲ್ಪ ದೂರ ಕರೆದುಕೊಂಡು ಹೋಗಿ, ವಾಹನದ ಕಿಟಕಿ ಗ್ಲಾಸ್‌ಗಳನ್ನು ಮುಚ್ಚಿ ಚಾಕು ತೋರಿಸಿ ರು. 3000 ಹಣ ಹಾಗೂ ಚಿನ್ನದ ಉಂಗುರ, ಮೊಬೈಲ್ ದರೋಡೆ ಮಾಡಿ ಎಟಿಎಂ ಕಾರ್ಡ್ ಕಿತ್ತುಕೊಂಡು ರು. 1200 ಡ್ರಾ ಮಾಡಿಕೊಂಡು ದರೋಡೆ ಮಾಡಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉದ್ಧಾರ್, ಆರೋಪ ಸಾಬೀತಾದ್ದರಿಂದ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಮಂಡ್ಯ ಇನ್ಸ್‌ಪೆಕ್ಚರ್ ಜೆ. ಮಾರುತಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಪ್ರಕರಣ ಅರಕಲಗೂಡು ಠಾಣೆಗೆ ವರ್ಗಾವಣೆಗೊಂಡು, ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಜೆ. ಕುಮಾರಸ್ವಾಮಿ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ಸರ್ಕಾರದ ಪರವಾಗಿ ಪ್ರಭಾರ ಸರ್ಕಾರಿ ಅಭಿಯೋಕ ಆನಂದ ಎಂ. ಹೊಸಮನಿ ವಾದಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

