ಹಾಸನ

ಫಲಾನುಭವಿಗಳಿಗೆ ನಿವೇಶನ ಹಂಚಿಕೆ

Published On :

ಹಾಸನ: ತಾಲೂಕಿನ ಸತ್ಯವಂಗಲ ಗ್ರಾಮದ ಸರ್ವೆ ನಂ.244 (ಹೊಸ ಸರ್ವೆ ನಂ. 254)ರಲ್ಲಿ 4.20 ಎಕರೆ ಪ್ರದೇಶವನ್ನು ಈ ಕಾರ್ಯಾಲಯದ ಆದೇಶ ಸಂ.ಎಲ್‌ಎನ್ ಡಿ (1)1320ಣ91-92 ನ.24,1955ರ ಆದೇಶದನ್ವಯ ಪರಿಶಿಷ್ಟ ಜಾತಿ, ಪಂಗಡದ ಅರ್ಹ ವ್ಯಕ್ತಿಗಳಿಗೆ ನಿವೇಶನಗಳನ್ನು ಮಂಜೂರಿ ಮಾಡಲು ಕಾಯ್ದಿರಿಸಿದ್ದು,  ಆಯ್ಕೆಯಾಗಿರುವ 148 ಫಲಾನುಭವಿಗಳು ಅಗತ್ಯ ದಾಖಲಾತಿಗಳೊಂದಿಗೆ ಅ.21, 2013ರ ಮಧ್ಯಾಹ್ನ 12 ಕ್ಕೆ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ಹಾಜರಾಗುವಂತೆ ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.

ಮಹಿಳೆಯರ ಸಾಧನೆ ಶ್ಲಾಘನೀಯ: ತಾರಾ ಎ.ಮಂಜು
ಅರಕಲಗೂಡು:
ಇಂದು ಹೆಣ್ಣು ಮಕ್ಕಳು ವಿದ್ಯಾಭಾಸದಲ್ಲಿ, ಸರ್ಕಾರಿ ಹಾಗೂ ಇನ್ನೀತರೆ ವೃತ್ತಿಯಲ್ಲಿ ಮುಂದೆ ಬರುತ್ತಿರುವುದು ಮೆಚ್ಚುಗೆಯ ವಿಷಯ ಎಂದು ಜಿಪಂ ಮಾಜಿ ಸದಸ್ಯೆ ಹಾಗೂ ಶಾಸಕ ಎ.ಮಂಜು ಪತ್ನಿ ತಾರಾ ಎ.ಮಂಜು ತಿಳಿಸಿದ್ದಾರೆ.
  ತಾಲೂಕಿನ ರಾಮನಾಥಪುರ ಹೋಬಳಿ ಹನ್ಯಾಳು ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ರಾಮನಾಥಪುರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಜನಸಾಮಾನ್ಯರಿಗೆ ನಾನಾ ಸೌಲಭ್ಯಗಳ ಬಗೆಗೆ ಅರಿವು ಮುಡಿಸುವ ಕೆಲಸ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.  ಶಾಸಕ ಎ. ಮಂಜು ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಭವಿಷ್ಯ ರೂಪಿಸಿ ಕೊಳ್ಳಬಹುದಾಗಿದೆ  ಎಂದರು.ರಾಮನಾಥಪುರ ಬಾಲಕಿಯರ ಸರ್ಕಾರಿ ಪಪೂ ಕಾಲೇಜು ಪ್ರಾಂಶುಪಾಲ ಬಿ.ಎಸ್. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಎಂ.ಸಿ. ಜಯದೇವ್,  ಡೆಲ್ವಿಕುಮಾರ್, ಐ.ಡಿ. ಸ್ವಾಮಿ ಇದ್ದರು.

ಆಧಾರ್ ಮಾಹಿತಿ
ಹಾಸನ:
2011ರ ಜನಗಣತಿಯನ್ವಯ ಜಿಲ್ಲೆಯಲ್ಲಿ 17,76,221 ಜನಸಂಖ್ಯೆ ಇದ್ದು, ಒಟ್ಟು 7,76,991 ನೋಂದಣಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ತಿಳಿಸಿದ್ದಾರೆ. ಬಾಕಿ ಇರುವ 9,99,230 ಜನ ನೋಂದಣಿಯಾಗಬೇಕಿದ್ದು ಈಗಾಗಲೇ ಹೋಬಳಿ, ತಾಲ್ಲೂಕು ಮಟ್ಟದಲ್ಲಿ ಬ್ಯಾಂಕ್ ಅಂಚೆ ಕಚೇರಿ ಸೇರಿದಂತೆ ವಿವಿಧ ಏಜೆನ್ಸಿಗಳ ಮೂಲಕ ಆಧಾರ್ ನೋಂದಣಿ  ನಡೆಯುತ್ತಿದ್ದು, 2014ರ ಮಾರ್ಚ್ ಅಂತ್ಯಕ್ಕೆ ಈ ಯೋಜನೆ ಕೊನೆಗೊಳ್ಳಲಿದ್ದು, ನೋಂದಣಿಯಾಗದೆ ಇರುವ ಜನತೆ ಆಧಾರ್ ನೋಂದಣಿ ಮಾಡಿಸಲು ತಿಳಿಸಿದ್ದಾರೆ.

ಲೆಕ್ಕಿಗರ ಸ್ಥಳ ಆಯ್ಕೆ
ಹಾಸನ:
ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಆಯ್ಕೆಗೊಂಡಿರುವ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ಮೂಲಕ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಜೇಷ್ಠತಾ ಆಧಾರದ ಮೇಲೆ ಅಭ್ಯರ್ಥಿಗಳು ತಾವು ಕೆಲಸ ಮಾಡಲಿಚ್ಚಿಸುವ ಸ್ಥಳಗಳನ್ನು ಆಯ್ಕೆಮಾಡಿಕೊಂಡರು. ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲ ಕೃಷ್ಣ, ಉಪವಿಭಾಗಾಧಿಕಾರಿ ಬಿ. ಶರತ್, ಜಿಲ್ಲಾಧಿಕಾರಿಯವರ ಕೇಂದ್ರ ಸಹಾಯಕ ಅಧಿಕಾರಿ  ರಂಜಿತಾ ಅವರ ಸಮ್ಮುಖದಲ್ಲಿ ಕೌನ್ಸೆಲಿಂಗ್ ನಡೆಸಲಾಯಿತು. ಮಾತನಾಡಿದ ಜಿಲ್ಲಾಧಿಕಾರಿ, ಅಂಕ ಗಳಿಕೆಯ ಜೇಷ್ಠತಾ ಆಧಾರದ ಮೇಲೆ ಅಭ್ಯರ್ಥಿಗಳಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಎಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.