ತವರಲ್ಲಿ ದಾಂಧಲೆ ನಡೆಸಿ ಚಿನ್ನಾಭರಣ ದೋಚಿದ ಪುತ್ರಿಯರು
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಅ.17
ವಿವಾಹಿತ ಮೂವರು ಮಹಿಳೆಯರು ತವರು ಮನೆಯಲ್ಲಿ ದಾಂಧಲೆ ಮಾಡಿ, ಮನೆಯಲ್ಲಿದ್ದ ನಗದು ಹಣ ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿ ಆಗಿರುವ ಘಟನೆ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಬುಧವಾರ ಸಂಜೆ ನಡೆದಿದೆ. ಹಲ್ಲೆಗೊಳಗಾದ ಕವಿತ ಮತ್ತು ಗಿಡ್ಡಮ್ಮ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂಬೇಡ್ಕರ್ ನಗರದ ರಂಗಸ್ವಾಮಿ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು ರಂಗಸ್ವಾಮಿ ಅವರ ಪುತ್ರಿಯರಾದ ಗಿರಿಜ, ತ್ರಿವೇಣಿ ಹಾಗೂ ರಾಧಾ ಎಂಬುವವರೇ ಈ ಕೃತ್ಯ ಎಸಗಿದವರು ಎಂದು ರಂಗಸ್ವಾಮಿ ಅವರ ಪುತ್ರ ಕಿಶೋರ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬುಧವಾರ ಸಂಜೆ 4 ರಲ್ಲಿ ರಂಗಸ್ವಾಮಿ ಅವರ ಮನೆಗೆ ಆಗಮಿಸಿದ ಈ ಮೂವರು ಹೆಣ್ಣು ಮಕ್ಕಳು ತಮ್ಮ ತಾಯಿ ಗಿಡ್ಡಮ್ಮ ಮತ್ತು ಅತ್ತಿಗೆ ಕವಿತ ( ಕಿಶೋರನ ಹೆಂಡತಿ) ಮೇಲೆ ದಬಾವಣೆ ನಡೆಸಿ ಮನೆಯಲ್ಲಿದ್ದ 20 ಸಾವಿರ ನಗದು ಎರಡು ಜತೆ ಚಿನ್ನದ ಓಲೆಯನ್ನು ಕಿತ್ತು ಕೊಂಡು ಹೋದರೆಂದು ದೂರಿನಲ್ಲಿ ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಿಶೋರ್, ಘಟನೆ ನಡೆದ ವೇಳೆ ತಾವು ತಮ್ಮ ನೆಂಟರೊಬ್ಬರ ಮನೆಯಲ್ಲಿನ ಸಾವಿಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿರುವ ಅವರು ಘಟನೆಯ ಹಿನ್ನೆಲೆ ಏನೆಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ.
ಆದರೆ ಒಂದು ಮೂಲದ ಪ್ರಕಾರ ವಿವಾಹಿತ ಈ ಮೂವರು ಹೆಣ್ಣು ಮಕ್ಕಳು ತಮ್ಮ ತವರು ಮನೆಯಲ್ಲಿನ ಅಸ್ತಿ ತಮಗೂ ಸೇರಬೇಕೆಂಬ ಉದ್ದೇಶದಿಂದ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಆದರೆ ಈ ಘಟನೆಗೆ ವಿವಾಹಿತ ಪುತ್ರಿಯರಿಗೆ ತಂದೆ ರಂಗಸ್ವಾಮಿ ಅವರ ಬೆಂಬಲದಿಂದ ಈ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ. ದೂರು ದಾಖಲಿಸಿಕೊಂಡಿರುವ ನಗರ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿರುವುದಾಗಿ ನಗರಠಾಣಾ ಪಿಎಸ್ಐ ಶಿವಕುಮಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

