ಸೇತುವೆಯಿಂದ ಟೆಂಪೋ ಉರುಳಿ ನಾಲ್ವರ ಸಾವು
ಕ.ಪ್ರ.ವಾರ್ತೆ ಸಕಲೇಶಪುರ ಅ.17
ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಇರುವ ಕೆಂಪುಹೊಳೆ ಸೇತುವೆ ಮೇಲಿಂದ ಟೆಂಪೋ ಟ್ರಾವೆಲ್ಸ್ ಉರುಳಿ ಬಿದ್ದ ಪರಿಣಾಮ ನಾಲ್ವರು ಮೃತಪಟ್ಟು, 11 ಜನರು ಮಾರಣಾಂತಿಕವಾಗಿ ಗಾಯಗೊಂಡ ಘಟನೆ ಗುರುವಾರ ನಡೆದಿದೆ.
ಮೈಸೂರು ನಗರದ ಬೆಮಲ್ ಬಡಾವಣೆ ಸಮೀಪದ ಶ್ರೀರಾಂಪುರ ನಿವಾಸಿಗಳಾದ ರಮಾಮಣಿ (60)ತನುಜಾ (32)ಇಸಾನ್ (2) ಹಾಗೂ ವಾಹನ ಚಾಲಕ ಮೈಸೂರಿನ ಬಸವೇಶ್ವರ ನಗರ ಬಡಾವಣೆಯ ಮೂರ್ತಿ (48)ಮೃತಪಟ್ಟ ದುರ್ದೈವಿಗಳು.
ರಾಜೇಶ್ವರಿ (50) ಕೇಶವಮೂರ್ತಿ (60) ಇಂಚರ(18), ಶ್ರವಣಿ (30), ಸವಿತಾ (30), ಗೋಪಿನಾಥ್ (42), ಪಲ್ಲವಿ (12), ಪೂರ್ಣಿಮಾ (45), ಬಾಲಸುಬ್ರಮಣ್ಯ (60), ಶ್ರೀಮತಿ (65), ನಂದಕುಮಾರ್ (42) ತೀವ್ರವಾಗಿ ಗಾಯಗೊಂಡಿದ್ದಾರೆ.
ಮೃತರಲ್ಲಿ ಮೂವರು ಅತ್ತೆ, ಸೊಸೆ ಹಾಗೂ ಮೊಮ್ಮಗುವಾಗಿದ್ದು, ಗುರುವಾರ ಮುಂಜಾನೆ ಧರ್ಮಸ್ಥಳಕ್ಕೆ ತೆರಳಲೆಂದು ಬಾಲಸುಬ್ರಮಣ್ಯ ಅವರ ಕುಟುಂಬ ಟೆಂಪೂದಲ್ಲಿ ಪ್ರಯಾಣ ಆರಂಭಿಸಿದ್ದರು.
ಘಟನಾ ಸ್ಥಳದ ಸಮೀಪ ಮೊಬೈಲ್ ಟವರ್ ಇಲ್ಲದ ಕಾರಣ ಸುಮಾರು 15 ಕಿ.ಮಿ ದೂರದ ಮಾರನಹಳ್ಳಿ ಗ್ರಾಮಕ್ಕೆ ಬಂದು ಪೊಲೀಸ್ ಹಾಗೂ ಅಂಬುಲೆನ್ಸ್ಗಳಿಗೆ ಹೆದ್ದಾರಿಯಲ್ಲಿ ಸಾಗುವವರು ಸುದ್ದಿ ಮುಟ್ಟಿಸಿದರು.
ಸ್ಥಳಕ್ಕೆ ಪೊಲೀಸರು ಆಗಮಿಸುವ ವೇಳೆಗೆ ಮಾರನಹಳ್ಳಿ ಗ್ರಾಮದಲ್ಲಿ ಗ್ಯಾರೇಜ್ ನಡೆಸುತ್ತಿರುವ ಪಟ್ಟಣದ ಕುಶಾಲನಗರ ಬಡಾವಣೆಯ ಮೂಹಿದ್,ಇಮ್ತಿಯಾಜ್, ಮೂಸ ಎಂಬುವವರ ಘಟನ ಸ್ಥಳಕ್ಕೆ ತೆರಳಿ ಪ್ರಪಾತಕ್ಕೆ ಇಳಿದು ಗಾಯಗೊಂಡವರನ್ನು ಮೇಲಕ್ಕೆ ಎತ್ತಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನಗಳಲ್ಲಿ ಆಸ್ಪತ್ರೆಗೆ ಕಳುಹಿಸಿಕೊಡುವ ಮೂಲಕ ಮಾನವೀಯತೆ ಮೆರೆದರು.
ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ಗಾಯಾಳುಗಳನ್ನು ಕರೆತಂದ ಸಂದರ್ಭದಲ್ಲಿ ಡಿ. ಗ್ರೂಪ್ ನೌಕರರಿಲ್ಲದೇ ಆಸ್ಪತ್ರೆ ವೈದ್ಯರ ನೆರವಿಗೆ ಜಯಕರ್ನಾಟಕ ಸಂಘಟನೆಯ ಯುವಕರು ನೆರವಾದರು.
ಕ್ರಾಫರ್ಡ್ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಎಚ್.ಕೆ ಕುಮಾರಸ್ವಾಮಿ ಹಾಗೂ ಎಸ್ಪಿ ರವಿ.ಡಿ ಚನ್ನಣ್ಣನವರ್, ಡಿವೈಎಸ್ಪಿ ಕುಮಾರಸ್ವಾಮಿ, ತಹಸೀಲ್ದಾರ್ ಪರ್ವತಿ ಗಾಯಾಳುಗಳನ್ನು ವಿಚಾರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

