ಸಂಸ್ಥೆಯಿಂದ ಮಹಿಳಾ ಸಬಲೀಕರಣಕ್ಕೆ ಉತ್ತೇಜನ: ಆಂಥೋನಿ
ಕನ್ನಡಪ್ರಭ ವಾರ್ತೆ ರಾಮನಾಥಪುರ ಅ.19
ಸಮೀಪದ ಹೊನಗನಹಳ್ಳಿಯ ಸರ್ಕಾರಿ ಶಾಲಾ ಆವರಣದಲ್ಲಿ ಸಿಎಂಎಸ್ಎಸ್ ಸೇವಾ ಸಂಸ್ಥೆ ಮತ್ತು ಸಮೃದ್ಧಿ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾಪಂಚಾಯ್ತಿ ಆಶ್ರಯದಲ್ಲಿ ಗ್ರಾಮದ ಮಹಿಳೆಯರಿಂದ ತಯಾರಿಸಲ್ಪಟ್ಟ ಹಪ್ಪಳ, ಊದುಬತ್ತಿ, ಉಪ್ಪಿನಕಾಯಿ ಕಿರು ಉದ್ದಿಮೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮರಿಯನಗರ ಧರ್ಮಕೇಂದ್ರ ಗುರುಗಳಾದ ಫಾದರ್ ಡೇವಿಡ್ ಅಂಥೋನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಿಎಂಎಸ್ಎಸ್ ಸಂಸ್ಥೆಯವರು ಮಹಿಳೆಯರನ್ನು ಸಬಲೀಕರಣಗೊಳಿಸಲು ಕುರಿ ಸಾಕಾಣಿಕೆ, ಹಸು ಸಾಕಾಣಿಕೆ, ಹಪ್ಪಳ, ಊದುಬತ್ತಿ ತಯಾರಿಸುವ ಕಿರು ಉದ್ದಿಮೆಗಳಲ್ಲಿ ಸಕ್ರಿಯಗೊಳಿಸುವುದರ ಮೂಲಕ ಉತ್ತೇಜಿಸಲಾಗುತ್ತಿದೆ.
ಗ್ರಾಮದ ಮಹಿಳೆಯರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ಬಿಡುವು ಮಾಡಿಕೊಂಡು ಈ ರೀತಿ ಕಿರುಉದ್ದಿಮೆಗಳಲ್ಲಿ ತೊಡಗಿಸಿಕೊಂಡಿರುವುದು ನಿಜಕ್ಕೂ ಹೆಮ್ಮೆ ವಿಷಯ ನೀವು ಮಾಡುತ್ತಿರುವ ಕೆಲಸದಲ್ಲಿ ಶ್ರದ್ದೆ ತೋರಿ ರಾಜ್ಯಕ್ಕೆ ದೇಶಕ್ಕೆ ಒಳ್ಳೆ ಹೆಸರು ಕೀರ್ತಿ ತನ್ನಿ ಎಂದು ನುಡಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಇ. ಜಗದೀಶ್ ಮಾತನಾಡಿ, ಹೊನಗಾನಳ್ಳಿ ಚಿಕ್ಕ ಗ್ರಾಮವಾದರೂ ಇಲ್ಲಿನ ಮಹಿಳೆಯರು ಸಾಮರಸ್ಯದಿಂದ ಒಂದುಗೂಡಿ ಕಿರು ಉದ್ದಿಮೆ ಆರಂಭಿಸಿರುವುದು ಇತರ ಗ್ರಾಮದವರಿಗೆ ಮಾದರಿ ಎಂದು ಹೇಳಿದರು.
ಗ್ರಾಮದ ಅಂಗವಿಕಲೆ ಗುಣ (26) ಅವರಿಗೆ ಕೊಣನೂರು ಲಯನ್ಸ್ನಿಂದ ವೀಲ್ ಚೇರ್ ನೀಡಲಾಯಿತು. ಕಿರುಉದ್ದಿಮೆ ಕ್ಷೇತ್ರ ಸಂಯೋಜಕ ನೀರಕ್ಷ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ರಘುನಂದನ, ಹಂಡ್ರಂಗಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಶ್ರೀನಾಥ, ಲೂಸಿಯ, ಶುಭಜ್ಯೋತಿ ಮಹಾಸಂಘ ಅಧ್ಯಕ್ಷೆ ಜಯಮ್ಮ, ಸೋಮಶೇಖರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

