ಹಾಸನ

5 ಮಂದಿಗೆ ಪಾರಂಪರಿಕ ವೈದ್ಯ ರತ್ನ ಪ್ರಶಸ್ತಿ

Published On :

ಹಾಸನ: ರಾಷ್ಟ್ರೀಯ ಪಾರಂಪರಿಕ ವೈದ್ಯರ ಸಮ್ಮೇಳನದಲ್ಲಿ ಪಾರಂಪರಿಕ ವೈದ್ಯ ರತ್ನ ಪ್ರಶಸ್ತಿಯನ್ನು ನೀಡಲು 5 ಜನ ಪಾರಂಪರಿಕ ವೈದ್ಯರನ್ನು ಗುರುತಿಸಲಾಗಿದೆ. ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್, ಮತ್ತು  ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಆಯುಷ್ ಹಾಗೂ ಅರಣ್ಯ ಇಲಾಖೆ  ಆಶ್ರಯದಲ್ಲಿ  ಮಂಡ್ಯ ಜಿಲ್ಲೆಯ ನೆಲಮಂಗಲಪದ ಆದಿಚುಂಚನಗಿರಿ  ಮಠದಲ್ಲಿ  ಅ.21, 22 ಮತ್ತು 23 ರಂದು   ನಡೆಯಲಿರುವ ರಾಷ್ಟ್ರೀಯ ಪಾರಂಪರಿಕ ವೈದ್ಯರ ಸಮ್ಮೇಳನದಲ್ಲಿ  ವೈದ್ಯರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ನಿರ್ದೇಶಕ ಅನುಗನಾಳ್ ಕೃಷ್ಣಮೂರ್ತಿ ತಿಳಿಸಿದ್ದಾರೆ.
 1500ರಕ್ಕೂ ಹೆಚ್ಚು ಹೆರಿಗೆ ಮಾಡಿಸಿ ಇದೇ ತಿಂಗಳಿನಲ್ಲಿ ರಾಷ್ಟ್ರಪತಿಯವರಿಂದ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿರುವ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ನರಸಮ್ಮ, ಶಿವಮೊಗ್ಗ ಜಿಲ್ಲೆಯ ಶಿವಣ್ಣಗೌಡ, ಹುಬ್ಬಳಿ ಜಿಲ್ಲೆಯ ಕೃಷ್ಣಪ್ಪ ಪಡಿಸಾವಿಗೆ, ಉತ್ತರ ಕನ್ನಡ ಜಿಲ್ಲೆಯ ವಿ. ಎಸ್. ಶರ್ಮಾ ಮತ್ತು ಅರುಣಾಚಲ ಪ್ರದೇಶದ  ವೈ.ಜೆ. ಲೇಗೊ ಅವರಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.
  ಸಮ್ಮೇಳನದಲ್ಲಿ ವಾತ ಸಂಧಿಗತರೋಗ, ಹಳೇ ನೋವುಗಳು, ಶ್ವಾಸರೋಗ, ಸ್ತ್ರೀರೋಗ, ಚರ್ಮರೋಗ, ಮದುಮೇಹ, ಹೃದ್ರೋಗ, ಶಿರೋರೋಗ, ನೇತ್ರರೋಗ, ಉದರರೋಗ, ಕಿವಿ, ಮೂಗು, ಗಂಟಲುರೋಗ, ಬಾಲರೋಗ, ನರರೋಗ ಪಾರ್ಶ್ವವಾಯು, ಮರ್ಮಚಿಕಿತ್ಸೆ ಮತ್ತು ಗ್ಯಾಸ್ಟಿಕ್, ಅಸಿಡಿಟಿ ರೋಗಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೊರಲಾಗಿದೆ.   ಆಸಕ್ತ ಜಿಲ್ಲಾ ಮತ್ತು ರಾಜ್ಯ ಪಾರಂಪರಿಕ ವೈದ್ಯರು ಮತ್ತು ಸಾರ್ವಜನಿಕರು ಈ ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ ಮಾಹಿತಿಗಾಗಿ 9343431886 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.