ಅಕ್ರಮ ಮರಳು ಸಾಗಣೆ; ಲಾರಿಗಳ ವಶ
ಹೊಳೆನರಸೀಪುರ: ತಾಲೂಕಿನ ನಾನಾ ಗ್ರಾಮಗಳ ಸಮೀಪದ ನದಿ ದಂಡೆಯಲ್ಲಿ ಅಕ್ರಮವಾಗಿ ಮರಳು ತೆಗೆದು ಸಾಗಿಸಲು ಮುಂದಾಗಿದ್ದ ಲಾರಿಗಳನ್ನು ಇಲ್ಲಿನ ತಹಸೀಲ್ದಾರ್ ಶಿವಶಂಕರಪ್ಪ ತಮ್ಮ ಸಿಬ್ಬಂದಿಗಳೊಂದಿಗೆ ಸೋಮವಾರ ದಿಢೀರ್ ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡಿದ್ದಾರೆ.
ತಾಲೂಕಿನ ಕಟ್ಟೇಬೆಳಗುಲಿ ಸಮೀಪದ ನದಿ ಪಾತ್ರದಲ್ಲಿ ಆಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿದ್ದ 4 ಮರಳು ತುಂಬಿದ ಲಾರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೇ ಪಟ್ಟಣದ ಅರಕಲಗೂಡು ರಸ್ತೆಯಲ್ಲಿನ ಹೊಸ ಸೇತುವೆ ಬಳಿಯಲ್ಲಿ ನದಿಯಿಂದ ಆಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿದ್ದ ಟ್ರಾಕ್ಟರ್ವೊಂದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಇದಲ್ಲದೇ ತಾಲೂಕಿನ ಮಾರಗೌಡನಹಳ್ಳಿ ಗ್ರಾಮದ ಬಳಿಯಲ್ಲಿನ ಹೇಮಾವತಿ ನದಿಯಲ್ಲಿ ಆಕ್ರಮವಾಗಿ ಮರಳು ತೆಗೆದು ಶೇಖರಿಸಿಡಲಾಗಿದ್ದ ಸುಮಾರು 40 ಸಾವಿರ ರು. ಮೌಲ್ಯದ ಮರಳನ್ನು ಸ್ಥಳದಲ್ಲೇ ಹರಾಜು ಹಾಕಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ. ಇದೇ ಗ್ರಾಮದಲ್ಲಿ ದಾಸ್ತಾನು ಮಾಡಲಾಗಿದ್ದ ಸುಮಾರು 5 ಲಾರಿಗಳಷ್ಟು ಮರಳನ್ನು ತಹಸೀಲ್ದಾರ್ ಅವರು ಪತ್ತೆಹಚ್ಚಿ, ಲೋಕೋಪಯೋಗಿ ಇಲಾಖೆಯವರ ವಶಕ್ಕೆ ನೀಡಿದ್ದಾಗಿ ತಿಳಿಸಿದರು. ವಶಪಡಿಸಿಕೊಂಡಿರುವ ಮರಳು ಮತ್ತು ಮರಳಿನ ಲಾರಿಗಳ ವಿವರ ಜಿಲ್ಲಾಧಿಕಾರಿಗೆ ನೀಡಲಾಗಿದ್ದು, ಅಕ್ರಮ ಮರಳು ಸಾಗಣೆಯ ಕುರಿತಂತೆ ಜಿಲ್ಲಾಧಿಕಾರಿಗಳು ದಂಢ ವಿಧಿಸಲಿದ್ದಾರೆ ಎಂದು ತಹಸೀಲ್ದಾರ್ ಶಿವಶಂಕರಪ್ಪ ಹೇಳಿದರು.
ವಸತಿ ಗೃಹಗಳಲ್ಲಿ ವೇಶ್ಯಾವಾಟಿಕೆ ದಂಧೆ: ಮಹಿಳೆ, ಮೂವರು ಪುರುಷರ ಬಂಧನ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಅ.22
ಪಟ್ಟಣದ ವಸತಿ ಗೃಹಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಎಎಸ್ಪಿ ವಿನಾಯಕ ಪಾಟೀಲ್ ಹಾಗೂ ನಗರ ಠಾಣೆ ಎಸ್ಐ ಶಿವಕುಮಾರ್ ಮತ್ತವರ ತಂಡವು ಇಲ್ಲಿನ ಎರಡು ವಸತಿ ಗೃಹಗಳ ಮೇಲೆ ಸೋಮವಾರ ದಿಢೀರ್ ದಾಳಿ ನಡೆಸಿ ಒಬ್ಬ ಮಹಿಳೆ ಹಾಗೂ ಮೂವರು ಪುರುಷರನ್ನು ಬಂಧಿಸಿದ್ದಾರೆ.
ಬಹಳ ದಿನಗಳಿಂದಲೂ ಇಲ್ಲಿನ ಕೆಲವು ವಸತಿ ಗೃಹಗಳಲ್ಲಿ ವೇಶ್ಯಾವಾಟಿಕೆ ಹಾಗೂ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎನ್ನುವ ಮಾಹಿತಿಯ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸ್ ಅಧಿಕಾರಿಗಳು ಪಟ್ಟಣದ ಬಸ್ ನಿಲ್ದಾಣ ಸಮೀಪವಿರುವ ವೆಂಕಟೇಶ್ವರ ಲಾಡ್ಜ್ ಹಾಗೂ ಸುಭಾಷ್ ವೃತ್ತದಲ್ಲಿನ ಚಂದ್ರ ಲಾಡ್ಜ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ.
ವೆಂಕಟೇಶ್ವರ ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಯಾವುದೇ ಪ್ರಕರಣ ಪತ್ತೆಯಾಗದ ಕಾರಣ ಹಿಂದಿರುಗಿದ ಪೊಲೀಸರು, ಕೂಡಲೇ ಇಲ್ಲಿನ ಸುಭಾಷ್ ವೃತ್ತದಲ್ಲಿನ ಚಂದ್ರ ಲಾಡ್ಜ್ ಮೇಲೆ ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮೂವರು ಪುರುಷರು ಹಾಗೂ ಒಬ್ಬ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದ್ದು, ನಂತರದಲ್ಲಿ ಪ್ರಕರಣದಲ್ಲಿ ಭಾಗಿಯಾಗಿದ್ದವರ ವಿವರ ದೊರೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

