ಹಾಸನ

ನೆಲ, ನೆಲ ಸಂಸ್ಕೃತಿಗೆ ಧಕ್ಕೆ ಆದಲ್ಲಿ ಹೋರಾಟ: ಪೇಂಟರ್ ರವಿ

Published On :

ಬೇಲೂರು: ಕನಡ ನಾಡಿನಲ್ಲಿ ನೆಲ, ನೆಲ ಸಂಸ್ಕೃತಿಗೆ ಧಕ್ಕೆ ಉಂಟಾದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ತಾಲೂಕು ಕಾವಲು ಪಡೆ ಅಧ್ಯಕ್ಷ ಪೇಂಟರ್ ರವಿ ಎಚ್ಚರಿಕೆ ನೀಡಿದರು. ಕಾವಲು ಪಡೆ ನಡೆದು ಬಂದ ಹಾದಿ ಕುರಿತ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಪಟ್ಟಣದಲ್ಲಿ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಅವರು ದೃಶ್ಯ ಮಾಧ್ಯಮ, ಬೆಳ್ಳಿತೆರೆಯಲ್ಲಿ ನಾಡು ನುಡಿಯ ಬಗ್ಗೆ ಅಶ್ಲೀಲ ಸಾಹಿತ್ಯ ರಚನೆಯಿಂದ ಸಂಸ್ಕೃತಿಗೆ ಧಕ್ಕೆಯಾಗುತ್ತದೆ ಎಂದರು. ಬೇಲೂರು ವಿಶ್ವ ವಿಖ್ಯಾತ ಪ್ರವಾಸಿ ತಾಣವಾಗಿದೆ. ಆದರೆ ಕಳೆದ 6 ವರ್ಷದಿಂದ ಹೊಯ್ಸಳ ಮಹೋತ್ಸವ ಆಚರಣೆ ಮಾಡಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಹೊಯ್ಸಳ ಮಹೋತ್ಸವಕ್ಕೆ ಚಾಲನೆ ನೀಡದಿದ್ದಲ್ಲಿ ಉಗ್ರ ಹೊರಾಟ ನಡೆಸಲಾಗುತ್ತದೆ ಎಂದ ಅವರು ಕನಡ ನಾಡಿಗೆ ಪ್ರಥಮ ಶಾಸನ ನೀಡಿದ ತಾಲೂಕಿನ ಹಲ್ಮಿಡಿ ಗ್ರಾಮಕ್ಕೆ ಮೂಲ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು. ಏಜಾಸ್, ನಿಂಗರಾಜು, ರಾಜು, ರಘು, ಸಿದ್ದೇಶ್ ಮುಂತಾದವರು ಇದ್ದರು, ಸುಮಾರು 60 ಬೈಕ್‌ಗಳ ಮೂಲಕ ಕಾವಲು ಪಡೆ ಕಾರ್ಯಕರ್ತರು ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಿದರು.

ಈರುಳ್ಳಿ ಮತ್ತೆ ದುಬಾರಿ
ಜಾವಗಲ್: ಸಂತೆ ದಿನವಾದ ಭಾನುವಾರ ಈರುಳ್ಳಿ ವ್ಯಾಪಾರ ಭರಾಟೆ ಜೋರಾಗಿದ್ದು, ಈರುಳ್ಳಿ ಬೆಲೆ ಮತ್ತೆ ಗಗನಕ್ಕೇರಿದೆ. ಉತ್ತಮ ದರ್ಜೆಯ ಈರುಳ್ಳಿ ಕಿ.ಲೋ ಗೆ 60 ರು. ನಂತೆ ಮಾರಾಟವಾಯಿತು. ಗ್ರಾಹಕರು ಏರಿದ ಬೆಲೆ ಕಂಡು ನಿಬ್ಬೆರಗಾದರು.
ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ 6100 ರು.ಗಳಾಗಿತ್ತು. ತರಕಾರಿ ಬೆಲೆಗಳಲ್ಲಿಯೂ ಏರಿಕೆ ಕಂಡು ಬಂದಿತು. ಬೀನ್ಸ್ -1 ಕಿ.ಲೋಗೆ  30 ರು, ಕ್ಯಾರೆಟ್ 40 ರು, ಟೊಮೆಟೋ -30 ರು, ಬೆಳ್ಳುಳ್ಳಿ 40 ರು, ಮೂಲಂಗಿ 25 ರು, ಗೆಡ್ಡೆಕೋಸು 30 ರು. ಗಳಾಗಿತ್ತು.  ಮಳೆಯ ಅಭಾವದಿಂದ ನೀರಾವರಿ ಸೌಲಭ್ಯವಿಲ್ಲದೆ ಬೆಳೆಯುವುದು ಕಡಿಮೆಯಾಗಿರುವುದರಿಂದ ತರಕಾರಿ ಬೆಲೆಗಳಲ್ಲಿ ಮತ್ತೆ ಏರಿಕೆಯಾಗುತ್ತಿದ್ದು, ಗ್ರಾಹಕರು ಖರೀದಿಸಲು ಪರದಾಡಬೇಕಾಗಿದೆ. ಉತ್ತಮ ದರ್ಜೆ ತೆಂಗಿನಕಾಯಿ 1000ಕ್ಕೆ 10000 ರು. ಗಳಾಗಿತ್ತು. ಬೆಲೆ ಏರಿಕೆಯಿಂದಾಗಿ ಮಧ್ಯಮ ವರ್ಗ ಹಾಗೂ ಜನ ಸಾಮಾನ್ಯರು ಮಾರುಕಟ್ಟೆಯಲ್ಲಿ ತರಕಾರಿ ಮತ್ತು ಕಿರಾಣಿ ಪದಾರ್ಥಗಳ ಬೆಲೆ ಏರಿಕೆಯಿಂದ ಜೀವನ ನಡೆಸುವುದು ದುಸ್ತರವಾಗುತ್ತಿದೆ ಎಂದು ಅಳಲು ತೋಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.