ಹಾಸನ

ಬದಲಾದ ಜೀವನ ಶೈಲಿಯಿಂದ ವೃದ್ಧಾಶ್ರಮಕ್ಕೆ ಹೆತ್ತವರು!

Published On :

ಕ.ಪ್ರ. ವಾರ್ತೆ ಹಾಸನ ಅ.21
ಬದಲಾದ ಜೀವನ ಶೈಲಿ ಹಾಗೂ ವೈಯಕ್ತಿಕ ಬದುಕಿನ ಭ್ರಮೆಗಳಿಂದಾಗಿ ಕುಟುಂಬಗಳಿಂದ ಹೊರಹಾಕಲ್ಪಟ್ಟ ವಯಸ್ಸಾದ ಹಿರಿಯರು ವೃದ್ಧಾಶ್ರಮ ಸೇರುತ್ತಿದ್ದಾರೆ ಎಂದು ಪ್ರಾಂಶುಪಾಲ ಡಾ.ಡಿ.ಶ್ರೀನಿವಾಸ್ ತಿಳಿಸಿದರು.
ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವಿಕಸನ ವೇದಿಕೆಯಿಂದ  ಚೈತನ್ಯ ವೃದ್ಧಾಶ್ರಮದಲ್ಲಿ ಹಮ್ಮಿಕೊಂಡಿದ್ದ ಹಿರಿಯರ ನೆನಪಿನಂಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂಥ ಬೆಳವಣಿಗೆಯ ಪರಿಣಾಮವಾಗಿ ಬಾಲ್ಯದಲ್ಲಿ ಅಜ್ಜಿ ತಾತಂದಿರ ಪ್ರೀತಿ, ಮಮತೆ, ಒಡನಾಟ ಹಾಗೂ ಮಾರ್ಗದರ್ಶನದಿಂದ ವಂಚಿತರಾದ ಮಕ್ಕಳು ಮುಂದೆ ಸಮಾಜಕಂಟಕರಾಗಿ ಬೆಳೆಯುತ್ತಿದ್ದಾರೆ. ಇದನು ಸರಿಪಡಿಸಬೇಕಾದರೆ ಕುಟುಂಬದ ಹಿರಿಯರನು ಪ್ರೀತಿ ಗೌರವದಿಂದ ಕಾಣಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವಿಭಕ್ತ ಕುಟುಂಬದ ಸುರಕ್ಷಿತ ನೆಲೆಯಿಂದ ಹೊರಬಂದು ನಗರ ಜೀವನದ ಆಕರ್ಷಣೆಯ ಬಲೆಯೊಳಗೆ ಸಿಲುಕಿರುವ ಕೌಟುಂಬಿಕ ಬದುಕು ಇಂದು ಅನೇಕ ಬಗೆಯ ಒತ್ತಡಗಳಿಗೆ ಬಲಿಯಾಗುತ್ತಿದೆ. ಭಾವನಾತ್ಮಕ, ಮಾನವೀಯ ಸಂಬಂಧಗಳು ಯಾಂತ್ರಿಕ ಹಾಗೂ ಕೃತಕವಾಗುತ್ತಿವೆ. ಉದ್ಯೋಗದ ಒತ್ತಡದಿಂದಾಗಿ ಮಕ್ಕಳ ಬೆಳವಣಿಗೆಯ ಬಗೆಗೆ ಕಾಳಜಿ ವಹಿಸಲು ಪೋಷಕರಿಗೆ ಸಮಯವಿಲ್ಲ. ಹೀಗಾಗಿ ಮಕ್ಕಳು ಸಹ ಅನಾಥಪ್ರಜ್ಞೆಗೆ ಒಳಗಾಗುತ್ತಿದ್ದಾರೆ ಎಂದರು.
ಪೋಷಕರನು ಆರಾಧಿಸುವುದು ನಮ್ಮ ಸಂಸ್ಕೃತಿ:  ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಹಿರಿಯರ ಅಗತ್ಯ ಹೆಚ್ಚಾಗುತ್ತದೆ. ಪೋಷಕರನು ಆರಾಧಿಸುವುದು, ಹಿರಿಯರನು ಗೌರವಿಸುವುದು ನಮ್ಮ ಸಂಸ್ಕೃತಿ. ಆದರೆ ಇಂದು ಹೆತ್ತವರು ವೃದ್ಧರಾದಂತೆಲ್ಲ ಅವರು ಮಕ್ಕಳಿಗೆ ಭಾರವೆನಿಸುತ್ತಿದ್ದಾರೆ. ಅವರ ಭಾವನೆಗಳನು ಅರ್ಥಮಾಡಿಕೊಳ್ಳುವ ಸಂಯಮವಿರದ ಮಕ್ಕಳು ಅವರನು ವೃದ್ಧಾಶ್ರಮಗಳಿಗೆ ದೂಡುತ್ತಿದ್ದಾರೆ. ಅತ್ಯಂತ ಶ್ರೀಮಂತರು ಹಾಗೂ ವಿದ್ಯಾವಂತರಲ್ಲೇ ಈ ಮನೋಭಾವ ಹೆಚ್ಚು ಕಂಡು ಬರುತ್ತಿರುವುದು ಸಾಮಾಜಿಕ ದುರಂತ. ಇದು ನಮ್ಮ ಕೌಟುಂಬಿಕ ವ್ಯವಸ್ಥೆಯನೇ ಅಸ್ತವ್ಯಸ್ತಗೊಳಿಸಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ್ ಮಾತನಾಡಿ ಕುಟುಂಬದಿಂದ ನಿರ್ಲಕ್ಷಿಸಲ್ಪಟ್ಟ ವೃದ್ಧರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೇರೆ ಬೇರೆ ಕಾರಣಗಳಿಂದಾಗಿ ಇದು ಅನಿವಾರ್ಯ ಪ್ರಕ್ರಿಯೆಯಾಗಿ ಸಮಾಜದಲ್ಲಿ ಬೇರು ಬಿಟ್ಟಿದೆ. ಇಂತಹವರ ಪಾಲಿಗೆ ನೆಮ್ಮದಿಯ ತಾಣಗಳಾಗಿ ವೃದ್ಧಾಶ್ರಮಗಳು ಕಾರ್ಯನಿರ್ವಹಿಸುತ್ತಿವೆ. ವಿದ್ಯಾರ್ಥಿಗಳು ತಮ್ಮ ಪದವಿಯ ಜೊತೆಗೆ ಬಾಲ್ಯದಿಂದಲೇ ಸಮಾಜ ಸೇವಾಗುಣವನು ಬೆಳೆಸಿಕೊಂಡು ಬದುಕನು  ಸಾರ್ಥಕ ಗೊಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗ್ರಾಮೀಣ ಬದುಕನೂ ಆವರಿಸಿಕೊಂಡಿದೆ:   ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಪಿ.ಗೋಪಾಲ್ ಮಾತನಾಡಿ, ಪೋಷಕರು ಯಾವುದೇ ಕಾರಣಗಳನು ನೀಡಿ ತಮ್ಮ ಮಕ್ಕಳನು ಎಂದೂ ದೂರ ತಳ್ಳುವುದಿಲ್ಲ. ಆದರೆ ಮಕ್ಕಳು ದೊಡ್ಡವರಾದ ಮೇಲೆ ವಯಸ್ಸಾದ ತಾಯಿ ತಂದೆಯರನು ದೂರವಾಗಿಸಲು ಕಾರಣಗಳನು ಹುಡುಕಿ ಕೊಳ್ಳುತ್ತಿದ್ದಾರೆ. ನಗರದ ಈ ಧೋರಣೆ ಇತ್ತೀಚೆಗೆ ಗ್ರಾಮೀಣ ಬದುಕನು ಆವರಿಸಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಮಾದೇಗೌಡ ಮಾತನಾಡಿ, ಇಂದಿಗೂ ಕುಟುಂಬದ ಹಿರಿಯರನು ಅತ್ಯಂತ ಕಾಳಜಿ ಹಾಗೂ ಪ್ರೀತಿಯಿಂದ ಪೋಷಿಸುತ್ತಿರುವ ಅನೇಕ ಜನರಿದ್ದಾರೆ. ಇದು ಕರ್ತವ್ಯ ಮಾತ್ರವಲ್ಲ ನಮಗೆ ಜನ್ಮ ನೀಡಿದವರಿಗೆ ನಾವು ಅರ್ಪಿಸಬಹುದಾದ ಕನಿಷ್ಟ ಕೃತಜ್ಞತೆ. ಆದ್ದರಿಂದ ಸಮಾಜದ ಎಲ್ಲ ಹಿರಿಯರನು ಗೌರವಿಸುವ ಪಣ ತೊಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅಂತಿಮ ಬಿ.ಎ. ವಿದ್ಯಾರ್ಥಿ ಶಶಿ ಹಿರಿಯರ ಮಹತ್ವವನು ಕುರಿತು ಮಾತನಾಡಿದರು. ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಸಮಾಜಶಾಸ್ತ್ರ ಉಪನ್ಯಾಸಕ ಹರಿಪ್ರಸಾದ್ ಸ್ವಾಗತಿಸಿದರು. ಪವನ್‌ಕುಮಾರ್ ಪ್ರಾಸ್ತಾವಿಕ ನುಡಿಗಳನಾಡಿದರು. ಎಂ.ಮಾದೇಗೌಡ ವಂದಿಸಿದರು. ಕನಡ ಉಪನ್ಯಾಸಕ ಕಾಂತರಾಜ್ ನಿರೂಪಿಸಿದರು. ಹಿರಿಯರ ಮಹತ್ವವನು ಕುರಿತ ಕಿರುನಾಟಕವನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.