ಬೇಡಿಕೆಗಳಿಗೆ ಮಿನರ್ವ ಕಾರ್ಮಿಕರು ಬೀದಿಗೆ
ಕನಡಪ್ರಭ ವಾರ್ತೆ ಹಾಸನ ಅ. 21
ಕಾಯಂ ನೇಮಕಾತಿ ಸೇರಿದಂತೆ ನಾನಾ ಬೇಡಿಕೆಗಳನು ಈಡೇರಿಸುವಂತೆ ಆಗ್ರಹಿಸಿ ನ್ಯೂ ಮಿನರ್ವ ಮಿಲ್ ಕಾರ್ಮಿಕರು ಸೋಮವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ನಗರದ ಹೊರವಲಯದಲ್ಲಿರುವ ನ್ಯೂ ಮಿನರ್ವ ಮಿಲ್ ಮುಂದೆ ಧರಣಿ ನಡೆಸಿ ಕಾರ್ಖಾನೆ ವಿರುದ್ಧ ಘೋಷಣೆ ಕೂಗಿದರು.
ಕಾರ್ಖಾನೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಸುಮಾರು 600 ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಈ ಹಿಂದೆಯೇ ಕಾರ್ಮಿಕರನು ಕಾಯಂ ನೇಮಕಾತಿ ಮಾಡುವುದಾಗಿ ಆಡಳಿತ ಮಂಡಳಿ ತಿಳಿಸಿತ್ತು. ಆದರೆ ಇದುವರೆಗೂ ಕಾರ್ಮಿಕರನು ಕಾಯಂಗೊಳಿಸುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ವರ್ಷದಿಂದ ಕಾಯಂ ಮಾಡುವಂತೆ ಒತ್ತಾಯಿಸುತ್ತಿದ್ದರೂ ಕಾರ್ಮಿಕರ ಬೇಡಿಕೆಗೆ ಸರ್ಕಾರ ಕಿವಿಗೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲದೆ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸರಿಯಾಗಿ ವೇತನ ಸಹ ನೀಡುತ್ತಿಲ್ಲ. ನೇಮಕಾತಿ ಸಂದರ್ಭದಲ್ಲಿ ಎನ್ಟಿಸಿ ನಿಯಮ ಪ್ರಕಾರ ವೇತನ ನೀಡುವುದಾಗಿ ಹೇಳಿ, ಈವರೆಗೂ ಕನಿಷ್ಠ ವೇತನವನೂ ನೀಡಿಲ್ಲ. ಎನ್ಟಿಸಿ ನಿಯಮದಂತೆ ವೇತನ ನೀಡಬೇಕೆಂಬ ಕಾನೂನು ಇದ್ದರೂ ಕಾರ್ಮಿಕರಿಗೆ ವೇತನ ನೀಡದೆ ವಂಚಿಸಲಾಗುತ್ತಿದೆ. ಇದರಿಂದ ಕಾರ್ಮಿಕರು ಬೀದಿಗೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ತಮ್ಮ ಪ್ರಾಣ ಒತ್ತೆಯಿಟ್ಟು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಜೀವಕ್ಕೆ ಕಾರ್ಖಾನೆಯಲ್ಲಿ ಯಾವುದೇ ರೀತಿಯ ಭದ್ರತೆ ಇಲ್ಲ. ಕೆಲಸದ ವೇಳೆ ಏನಾದರೂ ಅನಾಹುತ ಸಂಭವಿಸಿದರೆ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಇಲ್ಲವಾಗಿದೆ. ಜೊತೆಗೆ ಉದ್ಯೋಗ ಭದ್ರತೆ ಇಲ್ಲದೆ ಕಾರ್ಮಿಕರ ಕಡು ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಯಾವ ಸಂದರ್ಭದಲ್ಲಾದರೂ ಕಾರ್ಮಿಕರನು ಕೆಲಸದಿಂದ ತೆಗೆಯುವಂತಹ ವ್ಯವಸ್ಥೆ ಇರುವುದರಿಂದ ಕೂಡಲೇ ಕಾರ್ಮಿಕರಿಗೆ ತಕ್ಕ ಭದ್ರತೆ ಒದಗಿಸಲೇ ಬೇಕು ಎಂದು ಒತ್ತಾಯಿಸಿದರು.
ಕಾರ್ಖಾನೆಯಲ್ಲಿ ಮೂಲಭೂತ ಸೌಕರ್ಯದ ವ್ಯವಸ್ಥೆ ಇಲ್ಲದೆ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾರ್ಖಾನೆಯಲ್ಲಿ ಪ್ರಥಮ ಚಿಕಿತ್ಸೆ ವ್ಯವಸ್ಥೆ, ಹಾಸ್ಟೆಲ್ ವ್ಯವಸ್ಥೆ ಇಲ್ಲದೆ ನರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರ್ಖಾನೆ ಕೇಂದ್ರ ಸರ್ಕಾರದ್ದೆಂದು ಹೇಳುವುದನು ಬಿಟ್ಟರೆ ಇಲ್ಲಿ ಇನಾವುದೇ ರೀತಿಯ ಮೂಲಭೂತ ಸೌಕರ್ಯಗಳಿಲ್ಲ ಎಂದು ದೂರಿದರು. ಇನಾದರೂ ಕಾರ್ಮಿಕರ ಬೇಡಿಕೆಗಳನು ಸಂಬಂಧ ಪಟ್ಟವರು ಈಡೇರಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೇಶವ್, ಡಿ.ಎಸ್.ರಘು, ನವೀನ್ಕುಮಾರ್, ಮಂಜುನಾಥ್, ನಾಗರಾಜು, ಮುರಳಿ, ಪ್ರವೀಣ್, ಸಂತೋಷ್ಕುಮಾರ್, ಪ್ರಕಾಶ್, ಸುನೀಲ್, ವೆಂಕಟೇಶ್, ಕುಮಾರ್, ಸಾಗರ್, ಪುರುಷೋತ್ತಮ್, ರಾಜು, ರಾಮಚಂದ್ರ, ಚಂದ್ರಶೇಖರ್, ಕಿರಣ್, ಸವಿತಾ, ರಾಣಿ, ಮಂಜುಳಾ, ಸುಜಾತ, ಸೌಮ್ಯ, ರಶ್ಮಿ, ಕವಿತಾ, ಗೌರಿ ಇತರರು ಭಾಗವಹಿಸಿದ್ದರು.
ಕಾಲುಬಾಯಿ ರೋಗ: ಅಗತ್ಯ ಔಷಧಿ ದಾಸ್ತಾನು
ಬೇಲೂರು: ರಾಜ್ಯದಲ್ಲಿ ಜಾನುವಾರುಗಳಿಗೆ ಕಾಣಿಸಿಕೊಂಡಿರುವ ಕಾಲುಬಾಯಿ ರೋಗ ನಿವಾರಣೆ ಸಂಬಂಧ ಅನುಸರಿಸಬೇಕಾದ ಅಗತ್ಯ ಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಮ್ಮನು ಸಂಪರ್ಕಿಸ ಬೇಕೆಂದು ತಹಸೀಲ್ದಾರ್ ರವಿಚಂದ್ರ ನಾಯಕ್ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾಲುಬಾಯಿ ರೋಗದಿಂದ ಜಾನುವಾರುಗಳು ಮರಣ ಹೊಂದುತ್ತಿರುವ ವಿಷಯ ಸರ್ಕಾರದ ಗಮನಕ್ಕೆ ಬಂದಿದೆ. ರೋಗ ನಿರೋಧಿಸುವ ಔಷಧಿ ಮತ್ತು ಚುಚ್ಚುಮದ್ದುಗಳನು ಪಶು ವೈದ್ಯ ಆಸ್ಪತ್ರೆಯಲ್ಲಿ ದಾಸ್ತಾನು ಮಾಡಲಾಗಿದೆ. ಪಶುಗಳಿಗೆ ರೋಗ ಲಕ್ಷಣ ಕಂಡ ತಕ್ಷಣ ಪಶು ವೈದ್ಯ ಶಾಲೆಯಲ್ಲಿ ಚಿಕಿತ್ಸೆ ನೀಡುವುದು. ಹಾಗೂ ಜಾನುವಾರುಗಳು ಕಾಲುಬಾಯಿ ರೋಗದಿಂದ ಮೃತಪಟ್ಟಿದ್ದರೆ ಸರ್ಕಾರದಿಂದ ಪರಿಹಾರ ನೀಡಲು ಆದೇಶವಾಗಿದ್ದು ಅದರ ಅನ್ವಯ ಸದರಿ ಕಾಯಿಲೆಯಿಂದ ಮರಣ ಹೊಂದುವ ಜಾನುವಾರುಗಳ ಬಗ್ಗೆ ಮಾಹಿತಿಯನು ಮತ್ತು ಮರೋಣೋತ್ತರ ಪರೀಕ್ಷಾ ವರದಿಯೊಂದಿಗೆ ಹತ್ತಿರದ ಪಶು ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸ ಬಹುದಾಗಿದೆ. ಪಶು ವೈದ್ಯಾಧಿಕಾರಿ ವರದಿ ಆಧರಿಸಿ ಪರಿಹಾರ ಮಂಜೂರು ಮಾಡಲಾಗುವುದು. ಮಾಹಿತಿಗಾಗಿ 08177-222371, 222378, 222234 ಸಂಪರ್ಕಿಸಲು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

