ಹಾಸನ

ರೈತಸಂಘ ನೇತೃತ್ವದಲ್ಲಿ ಪ್ರತಿಭಟನೆ

Published On :

ಕ.ಪ್ರ. ವಾರ್ತೆ ಹಾರನಹಳ್ಳಿ ಅ.22
ಹಾರನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ರೈತಸಂಘದ ವತಿಯಿಂದ ಅರಸೀಕೆರೆಯಿಂದ ದುದ್ದ ವರೆಗೆ ನಡೆಯುತ್ತಿರುವ ರಸ್ತೆ ದುರಸ್ತಿ ಕಾಮಗಾರಿ ವಿಳಂಬ ಖಂಡಿಸಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.
ರೈತಸಂಘದ ಮುಖಂಡ ಕನ್ನಕಂಚೇನಹಳ್ಳಿ ಪ್ರಸನ್ನ ಕುಮಾರ್ ಮಾತನಾಡಿ, ರಸ್ತೆ ದುರಸ್ತಿಗೆ ಟೆಂಡರ್ ಕರೆದು 3 ತಿಂಗಳು ಕಳೆದರೂ ತ್ವರಿತಗತಿಯಲ್ಲಿ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರು ನಡೆಸುತ್ತಿಲ್ಲ, ಹಳೇ ರಸ್ತೆ ಬಗೆದು ರಸ್ತೆ ಪಕ್ಕದ ಮರಗಳನ್ನು ಕಡಿಯದೆ ಬೇಕಾಬಿಟ್ಟಿ ರಸ್ತೆ ಕಾಮಗಾರಿ ಮಾಡುತ್ತಿದ್ದಾರೆ.
 ಬೋರನಕೊಪ್ಪಲು, ಯಳವಾರೆ ತನಕ ಹಳೇ ರಸ್ತೆಯ ಡಾಂಬರ್ ತೆಗೆದು ಪಕ್ಕಕ್ಕೆ ಹಾಕಿ ಆದರ ಮೇಲೆ ಮಣ್ಣು ಹಾಕಿ ಮೆಲ್ಲಿಂಗ್ ಮಾಡಿದ್ದಾರೆ ಎಂದು ದೂರಿದರು.
ಹಾರ್ನಳ್ಳಿಯಿಂದ ಕೋಡಿಮಠದವರೆಗೆ ಡಬಲ್ ರಸ್ತೆ ಮಾಡಿ ಡಿವೈಡರ್ ಹಾಕಬೇಕು ಹಾಗೂ ಹಾರ್ನಳ್ಳಿ ಇಕ್ಕೆಲಗಳಲ್ಲಿ ಡ್ರೈನೇಜ್ ನಿರ್ಮಾಣ ಮಾಡಬೇಕು, ಹಾರ್ನಳ್ಳಿ ಕೆರೆ ಏರಿ ಪಕ್ಕ ಕೆರೆ ಸೀಪೇಜ್ ನೀರು ಇಳಿಯುವ ಹಾಗೂ ಮೋರಿ ಹಾಗೂ ತಡೆಗೋಡೆ ನಿರ್ಮಿಸಬೇಕು. ಅಲ್ಲದೇ ಶೀಘ್ರವಾಗಿ ರಸ್ತೆ ಕೆಲಸ ಪ್ರಾರಂಭಿಸಿ ಮುಗಿಸಬೇಕೆಂದು ಒತ್ತಾಯಿಸಿದರು. ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಬಸವರಾಜ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಇನ್ನು ಆರು ತಿಂಗಳಲ್ಲಿ ರಸ್ತೆ ಕಾಮಗಾರಿ ಮುಗಿಸುವುದಾಗಿ ತಿಳಿಸಿದರಲ್ಲದೆ ಹಾರನಹಳ್ಳಿ ಕೆರೆ ಅಗಲೀಕರಣದ ಬಗ್ಗೆ ತಡೆಗೋಡೆ ನಿರ್ಮಾಣ ಬಗ್ಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು. ಪ್ರತಿಭಟನೆಯಲ್ಲಿ ತರಕಾರಿ ಮಹೇಶ್, ನಾಗರಾಜ್, ಸಚಿನ್, ಮಧು ಹಾರ್ನಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.

ರಸ್ತೆ ದುರಸ್ತಿಗೆ ಟೆಂಡರ್ ಕರೆದು 3 ತಿಂಗಳು ಕಳೆದರೂ ತ್ವರಿತಗತಿಯಲ್ಲಿ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರು ನಡೆಸುತ್ತಿಲ್ಲ, ಹಳೇ ರಸ್ತೆ ಬಗೆದು ರಸ್ತೆ ಪಕ್ಕದ ಮರಗಳನ್ನು ಕಡಿಯದೆ ಬೇಕಾಬಿಟ್ಟಿ ರಸ್ತೆ ಕಾಮಗಾರಿ ಮಾಡುತ್ತಿದ್ದಾರೆ. ಬೋರನಕೊಪ್ಪಲು, ಯಳವಾರೆ ತನಕ ಹಳೇ ರಸ್ತೆಯ ಡಾಂಬರ್ ತೆಗೆದು ಪಕ್ಕಕ್ಕೆ ಹಾಕಿ ಆದರ ಮೇಲೆ ಮಣ್ಣು ಹಾಕಿ ಮೆಲ್ಲಿಂಗ್ ಮಾಡಿದ್ದಾರೆ
-ಕನ್ನಕಂಚೇನಹಳ್ಳಿ ಪ್ರಸನ್ನ ಕುಮಾರ್, ರೈತಸಂಘದ ಮುಖಂಡ  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.