ಹಾಸನ

'ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವ ಸಹಾಯ ಸಂಘಗಳಿಗೆ ಸಾಲ'

Published On :

ಚನ್ನರಾಯಪಟ್ಟಣ: ಜಾತಿ, ಮತ, ಭೇದವಿಲ್ಲದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದ 22 ಜಿಲ್ಲೆ ಗಳಲ್ಲಿ 2.60 ಲಕ್ಷ  ಪ್ರಗತಿ ಬಂದು ಸ್ವಸಹಾಯ ಸಂಘಗಳಿಗೆ 1,900 ಕೋಟಿ ಸಾಲ ನೀಡಿದೆ ಎಂದು ತಾಲೂಕು ಯೋಜನಾಧಿಕಾರಿ ಸಾವಿತ್ರಿ ಇಲ್ಲಿ ತಿಳಿಸಿದರು.
ಅವರು ಇಲ್ಲಗೆ ಸಮೀಪದ ಹೆಗ್ಗಡಿಗೆರೆಯಲ್ಲಿ ಇತ್ತೀಚೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತೆಂಗು ನಾಟಿ ನಿರ್ವಹಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರ ಆರ್ಥಿಕ ಸಮಸ್ಯೆಗೆ ಅನುಕೂಲ ಕಲ್ಪಿಸಲು 1982ರಲ್ಲಿ ಈ ಯೋಜನೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ  ಪ್ರಾರಂಭಿಸಿದ್ದಾರೆ ರು. 548ಕೋಟಿ ಹಣ ಉಳಿತಾಯವಾಗಿದೆ ಸಂಘಕ್ಕೆ ಸದಸ್ಯರಾಗಿ ಸಂಘದ ತಿಳುವಳಿಕೆ ತಿಳಿದು ನಿಮ್ಮ ಮಕ್ಕಳಿಗೆ ಶಿಕ್ಷಣಾ ನೀಡಲು ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯ ಧನ ಸಿಗುತ್ತದೆ ಪೆನ್ಷನ್, ಪಿಂಚಣಿ ಯೋಜನೆ ಇದೆ ಎಂದು ಸಲಹೆ ನೀಡಿದರು.
ತಾಲೂಕು ಕೃಷಿ ಅಧಿಕಾರಿ ವಿನಾಯಕ್ ಮಾತನಾಡಿ, ತೆಂಗಿನ ಸಸಿ ನೆಡಲು 1ತಿಂಗಳು ಮೊದಲು ಗುಂಡಿ ತೆಗೆದು ಮೇಲ್ಭಾಗದ ಮಣ್ಣು ಸಾವಯಾವ ಗೊಬ್ಬರ ಹಾಕಿ ನಾಟಿ ಮಾಡಿದರೆ ತೆಂಗಿಗೆ ಯಾವುದೆ ರೋಗ ಬರುವುದಿಲ್ಲ ಎಂದರು.
ವಲಯ ಮೇಲ್ವಿಚಾರಕ ರಾಘವೇಂದ್ರ, ಸೇವಾ ಪ್ರತಿನಿಧಿ ಗಿರಿಜಾ ನಾಗೇಶ್, ಪಂಚಾಕ್ಷರಯ್ಯ. ರಂಗಸ್ವಾಮಿ, ಪ್ರಕಾಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.