ಹಾಸನ

83 ರಾಸುಗಳಿಗೆ ಕಾಲುಬಾಯಿ ರೋಗ

Published On :

ಅರಸೀಕೆರೆ: ರಾಜ್ಯದ ಎಲ್ಲೆಡೆ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದು, ತಾಲೂಕಿನ 14 ಗ್ರಾಮಗಳಲ್ಲಿ 83 ಜಾನುವಾರುಗಳಿಗೆ ರೋಗದ ಲಕ್ಷಣಗಳು ಕಂಡು ಬಂದಿದ್ದು, ಒಂದು ಕರು ಮಾತ್ರ ಮೃತಪಟ್ಟಿದ್ದು, ಇನ್ನುಳಿದ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಲಾಗುತ್ತಿದೆ ಎಂದು ತಾಲೂಕಿನ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ  ಡಾ. ಡಿ.ಬಿ.ಮಂಜುನಾಥ್ ಶುಕ್ರವಾರ ತಿಳಿಸಿದರು.
ಪಟ್ಟಣದಲ್ಲಿನ ಪಶುಪಾಲನಾ ಇಲಾಖೆಯ ಆಸ್ಪತ್ರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ತಾಲೂಕಿನಲ್ಲಿ ಒಟ್ಟಾರೆ 1.36.000 ಜಾನುವಾರುಗಳು ಇದ್ದು, ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಅ.10 ಅವಧಿಯಲ್ಲಿ 1.26.059 ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ ಹಾಕಲಾಗಿದೆ ಎಂದರು.
ತಾಲೂಕಿನ ಪಟ್ಟಣ ಪ್ರದೇಶವು ಸೇರಿದಂತೆ ಮುದ್ದನಹಳ್ಳಿ, ನಾಗೇನಹಳ್ಳಿ, ಪನ್ನಸಮುದ್ರ, ಶಶಿವಾಳ, ಡಿ.ಎಂ.ಕುರ್ಕೆ, ಹರಳಕಟ್ಟಾ, ಉರಗಲವಾಡಿ, ಗಂಡಸಿ, ಹೆಗ್ಗಟ್ಟ, ಹಾರನಹಳ್ಳಿ, ನಾಗವೇದಿ, ಬ್ಯಾಲದಕೆರೆ ಹಾಗೂ ಜೆ.ಸಿ.ಪುರ ಸೇರಿದಂತೆ 14 ಗ್ರಾಮಗಳಲ್ಲಿ 83 ಜಾನುವಾರುಗಳಿಗೆ ಕಾಲುಬಾಯಿ ಜ್ವರದ ರೋಗ ಲಕ್ಷಣಗಳು ಕಂಡು ಬಂದಿದ್ದು, ಅದರಲ್ಲಿ ಜೆ.ಸಿ.ಪುರ ಗ್ರಾಮದ ಸಿದ್ದಪ್ಪ ಎಂಬುವರ 5 ಜಾನುವಾರುಗಳಲ್ಲಿ 3 ಜಾನುವಾರುಗಳಿಗೆ ರೋಗ ಕಂಡು ಬಂದು ಸೂಕ್ತ ಚಿಕಿತ್ಸೆಯನ್ನು ನೀಡಲಾಗಿದೆ. ಅದರಲ್ಲಿ ಸಣ್ಣ ಕರುವು ಮಾತ್ರ ಮೃತಪಟ್ಟಿದ್ದು, ಎರಡು ಜಾನುವಾರುಗಳು ಚೇತರಿಸಿಕೊಳ್ಳುತ್ತಿವೆ ಎಂದು ತಿಳಿಸಿದರು.ತಾಲೂಕಿನ ಗಂಡಸಿ, ಕಲ್ಲುಸಾದರಹಳ್ಳಿ ಹಾಗೂ ಪಟ್ಟಣದಲ್ಲಿ ನಡೆಯುವ ಸಂತೆಗಳಲ್ಲಿ ಮಾರಾಟವಾಗುತ್ತಿರುವ ಜಾನುವಾರುಗಳಲ್ಲಿ ಈ ರೋಗದ ಲಕ್ಷಣಗಳು ಹೆಚ್ಚಾಗಿ ಕಂಡು ಬಂದಿರುವ ಕಾರಣ ಪ್ರತಿಯೊಂದು ಸಂತೇಯಲ್ಲಿ ಲಸಿಕೆಗಳನ್ನು ಹಾಕಲಾಗುತ್ತಿದ್ದು, ಇದುವರೆಗೆ ಗಂಡಸಿ ಸಂತೆಯಲ್ಲಿ 800, ಕಲ್ಲುಸಾದರಹಳ್ಳಿ ಸಂತೆಯಲ್ಲಿ 272, ಅರಸೀಕೆರೆ ಪಟ್ಟಣದ ಸಂತೆಯಲ್ಲಿ 371 ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆಹಾಕಲಾಗಿದೆ ಎಂದು  ಹೇಳಿದರು.  
ಸಹಾಯಕ್ಕೆ ಇಲಾಖೆ ಸದಾ ಮುಂದು:ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತವು ರೋಗದ ನಿಯಂತ್ರಣಕ್ಕೆ ಸರ್ವ ಸನ್ನಧವಾಗಿದ್ದು, ಅಗತ್ಯವಾದ ರೋಗ ನಿರೋಧಕ ಲಸಿಕೆಗಳನ್ನು ಈಗಾಗಲೇ ಸರ್ಕಾರ ಸರಬರಾಜು ಮಾಡಿದೆ. ಅಲ್ಲದೆ ಅಗತ್ಯ ವೈದರುಳ್ಳ 3 ಸಂಚಾರಿ ಚಿಕಿತ್ಸಾ ವಾಹನಗಳ ಸೌಲಭ್ಯಗಳನ್ನು ನೀಡಿರುವ ಕಾರಣ ತಾಲೂಕಿನ ಯಾವುದೇ ಗ್ರಾಮದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಕ್ಷಣಗಳಾದ ಜ್ವಲ್ಲು ಸೋರುವಿಕೆ, ಕಾಲು ಕುಂಟುವುದು, ಮೇವು ತಿನ್ನದಿರುವುದು, ಜ್ವರ ಕಾಣಿಸುವುದು, ಕಂಡು ಬಂದಲ್ಲಿ ಸಹಾಯಕ ದೂರವಾಣಿ ಸಂಖ್ಯೆ 08174- 231154 ಸಂಪರ್ಕಿಸಲು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.