ಸರತಿ ಸಾಲಿನಲ್ಲಿ ನಿಂತು ಹಾಸನಾಂಬೆ ದರ್ಶನ...
ಕ.ಪ್ರ.ವಾರ್ತೆ ಹಾಸನ ಅ.25
ವರ್ಷಕ್ಕೊಮ್ಮೆ ದರ್ಶನ ಭಾಗ್ಯ ನೀಡುವ ಹಾಸನಾಂಬೆಯ ದರ್ಶನ ಎರಡನೇ ದಿನ ಶುಕ್ರವಾರ ಮುಂದುವರೆದಿದೆ. ಈ ಬಾರಿ 13 ದಿನಗಳ ಕಾಲ ದೇವಿಯ ದರ್ಶನ ಭಾಗ್ಯ ಲಭ್ಯ ಆಗಿರುವುದರಿಂದ ದೇವಿಯ ದರ್ಶನಕ್ಕೆ ಬೆಳಗ್ಗೆ ಮಂದಗತಿಯಲ್ಲಿ ದೇವಿಯ ದರ್ಶನ ನಡೆಯಿತು. ನಂತರ ಆಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹಾಸನಾಂಬೆ ದರ್ಶನ ಮಾಡಿದರು.
ಜಿಲ್ಲೆಯ ಅಧಿ ದೇವತೆ ಹಾಸನಾಂಬ ದೇವರ ದರ್ಶನ ಆಶ್ವಿಜ ಮಾಸದ ಮೊದಲ ಗುರುವಾರ 12.30ರಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರತಿ ವರ್ಷದಂತೆ ಅರಸು ವಂಶಸ್ಥ ನರಸಿಂಹರಾಜ ಅರಸ್ ಅವರು ಹಾಸನಾಂಬ ದೇವರ ಗರ್ಭಗುಡಿಯ ಮುಂಭಾಗದಲ್ಲಿ ಬನ್ನಿ ಮರಕ್ಕೆ ಶಾಸ್ತ್ರೋಕ್ತವಾಗಿ ಪೂಜೆ ಪುನಸ್ಕಾರಗಳನ್ನು ನೆರವೇರಿಸಿ ಹಾಸನಾಂಬೆ ದೇವಾಲಯದ ಬಾಗಿಲನ್ನು ತೆರೆಯಲಾಗಿತ್ತು. ದೇವಾಲಯದ ಬಾಗಿಲನ್ನು ತೆರೆದ ಮೊದಲ ದಿನ ಭಕ್ತರು ದೇವಿಯ ದರ್ಶನ ಮಾಡಲು ಜಮಾಯಿಸಿದ್ದರು. ಎರಡನೇ ದಿನವಾದ ಇಂದು ದೇವಿಯ ದರ್ಶನಕ್ಕೆ ಅಷ್ಟಾಗಿ ಭಕ್ತರು ಬೆಳಗ್ಗೆ ಆಗಮಿಸಿರಲಿಲ್ಲ. ಯಾವುದೇ ನೂಕು ನುಗ್ಗಲಿಲ್ಲದೆ ದೇವಿಯನ್ನು ದರ್ಶನವನ್ನು ಭಕ್ತರು ಪಡೆದರು. ಹೊತ್ತು ಕಳೆಯುತ್ತಿದ್ದಂತೆ ದೇವಾಲಯದ ಆವರಣಕ್ಕೆ ಭಕ್ತರು ಜಮಾಯಿಸಿ ದೇವಿಯ ದರ್ಶನ ಪಡೆದರು. ಎರಡನೇ ದಿನ ದೇವರಿಗೆ ಅಲಂಕಾರ ಮತ್ತು ಜಿಲ್ಲಾ ಖಜಾನೆಯಿಂದ ತಂದಿದ್ದ ಆಭರಣಗಳಿಂದ ದೇವಿಗೆ ಅಲಂಕಾರ ಮಾಡಲಾಯಿತು. ನಿನ್ನೆಯಿಂದಲೇ ಭಕ್ತರು ದೇವಿಯ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು. ಆದರೆ ಎರಡನೇ ದಿನ ಸರದಿ ಸಾಲಿನಲ್ಲಿ ದೇವರ ದರ್ಶನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ದೇವಾಲಯದಲ್ಲಿ ಸೂಕ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

