ಹಾಸನ

ದೃಶ್ಯ ಮಾಧ್ಯಮಗಳಲ್ಲಿ ಜೈನರ ಬಗ್ಗೆ ಅವಹೇಳನ: ಅಸಮಾಧಾನ

Published On :

ಕನ್ನಡಪ್ರಭ ವಾರ್ತೆ೤ ಬೇಲೂರು೤ ಸೆ. 12
ಸಿನಿಮಾಗಳಲ್ಲಿ ಜೈನರನ್ನು ಅವಹೇಳನಕಾರಿ ಮಾಡಲಾಗುತ್ತಿದೆ. ಇಂಥ ಬೆಳವಣಿಗೆಯಿಂದ ಶಾಂತಿಗೆ ಹೆಸರಾದ ಜೈನರಿಗೆ ನೆಮ್ಮದಿ ಇಲ್ಲವಾಗಿದೆ ಎಂದು ಭಾರತೀಯ ಜೈನನ್ಮಿಲನ್ ಅಧ್ಯಕ್ಷ ಧರ್ಮಸ್ಥಳ ಸುರೇಂದಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 ದೇವಿಹಳ್ಳಿಯಲ್ಲಿ ಭಾರತೀಯ ಜೈನ್‌ಮಿಲನ್ ನೂತನ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಜೈನರನ್ನು  ಒಗ್ಗೂಡಿಸಿ ಸಾಮರಸ್ಯದಿಂದ ಜೀವನ ನಡೆಸುವಂತೆ ಮಾಡುವುದು ಭಾರತೀಯ ಜೈನಮಿಲನ್ ಧ್ಯೇಯ. ಆರೋಗ್ಯ ಹಾಗೂ ಶಿಕ್ಷಣದ ಸುಧಾರಣೆಗಾಗಿ ಮಿಲನ್ ಶ್ರಮಿಸುತ್ತಿದೆ. ಜೈನರು ಸಹಕಾರ ನೀಡಿದರೆ ವಿದ್ಯಾವಂತ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು. ನಿರ್ದೇಶಕ ಎಸ್.ಪಿ.ನಾಗ್‌ಕುಮಾರ್ ಮಾತನಾಡಿ, ಮತ್ತೊಬ್ಬರಿಗೆ ಕೆಡಕು ಮಾಡದಂತೆ ಬದುಕುಬೇಕು ಎಂದರು. ಮಹಿಳಾ ಘಟಕದ ಅಧ್ಯಕ್ಷೆ ಅನಿತ ಸುರೇಂದ್ರ ಕುಮಾರ್ ಮಾತನಾಡಿ, ಬಾಲ್ಯಾವಸ್ಥೆಯಲ್ಲಿ ಮಹಿಳೆಯರು ಮಕ್ಕಳಿಗೆ ಸಂಸ್ಕಾರ ನೀಡಿದರೆ, ಮಕ್ಕಳು ಉನ್ನತ ಪ್ರಜೆಗಳಾಗುತ್ತಾರೆ ಎಂದರು.  ರಾಜ್ಯಾಧ್ಯಕ್ಷ ಎಂ.ಎಸ್.ಮೃತ್ಯುಂಜಯ, ಕಾರ್ಯದರ್ಶಿ ಯುವರಾಜ ಭಂಡಾರಿ, ಎನ್.ಪ್ರಸನ್ನ ಕುಮಾರ್, ಭರತರಾಜು, ಕೆ.ಬಿ.ಅನಂತರಾಜು, ಸುಭಾಷ್, ಜಿನೇಂದ್ರ, ಬ್ರಹ್ಮೇಶ್, ಮಂಜುಳಾ, ಸುಭಾಷ್, ಕಾಂಚನಾಮಾಲ, ಜೀವನ್, ಕೀರ್ತಿ, ಹರೀಶ್, ದೇವರಾಜಯ್ಯ, ರಾಖೇಶ್ ಇದ್ದರು. ಕುಮುದ ನಾಗಭೂಷಣ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.