ಸರ್ಕಸ್ಗೆ ಸರ್ಕಾರದ ಪ್ರೋತ್ಸಾಹ ಬೇಕು:ಜಂಬೂ ನಟೇಶನ್
ಚನ್ನರಾಯಪಟ್ಟಣ: ಸರ್ಕಸ್ ಪ್ರದರ್ಶನಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಜಂಬೂ ಸರ್ಕಸ್ ವ್ಯವಸ್ಥಾಪಕ ಕೆ.ನಟೇಶನ್ ತಿಳಿಸಿದರು. ಪಟ್ಟಣದಲ್ಲಿ ಸರ್ಕಸ್ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಸರ್ಕಸ್ನಿಂದ ಅನುಕೂಲವಾಗಲಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಿ ಪ್ರೋತ್ಸಾಹ ನೀಡುವತ್ತಾ ಮುಂದಾಗಬೇಕು ಎಂದರು.
ಹಿಂದೆ ಸರ್ಕಸ್ ಪ್ರಾಣಿಗಳು ಹಾಗೂ ಮನುಷ್ಯರಿಂದ ಕಷ್ಟಕರವಾದ ಪ್ರದರ್ಶನ ನೋಡಲು ಜನತೆ ಆಸಕ್ತಿಯಿಂದ ಸೇರುತ್ತಿದ್ದರು. ಸರ್ಕಾರದ ಆದೇಶದಂತೆ ಕೆಲ ಪ್ರಾಣಿಗಳ ಪ್ರದರ್ಶನವನ್ನು ನಿಷೇಧಿಸಿರುವುದರಿಂದ ಆನೆ, ಕುದುರೆ, ನಾಯಿ ಹಾಗೂ ಒಂಟೆಗಳಿಂದ ಹಲವು ಪ್ರದರ್ಶನ ನೀಡಲಾಗುತ್ತಿದೆ. ತಮ್ಮ ಸರ್ಕಸ್ನಲ್ಲಿ 4 ಆನೆಗಳಿದ್ದು, ಪ್ರತಿ ಆನೆಗೆ ದಿನಕ್ಕೆ 1.500 ರು. ಖರ್ಚಾಗುತ್ತಿದೆ ಎಂದು ವಿವರಿಸಿದರು.
ಪಟ್ಟಣದಲ್ಲಿ ಸೆ.30ರವರಗೆ ಪ್ರದರ್ಶನಗೊಳ್ಳಲಿರುವ ಜಂಬೂ ಸರ್ಕಾಸ್ ಹೆಚ್ಚಾಗಿ ವೀಕ್ಷಿಸಲು ಕೋರಿದ ಅವರು ಸರ್ಕಸ್ ಕಂಪನಿ ನಡೆಸುವುದು ಇತ್ತೀಚಿನ ದಿನಗಳಲ್ಲಿ ಕಷ್ಟಕರವಾಗಿದೆ. ರಾಜ್ಯದಲ್ಲಿ ಪ್ರದರ್ಶಿಸುವ ಪ್ರತಿ ಸ್ಥಳದ ಒಪ್ಪಿಗೆ ಪಡೆಯವ ಜತೆಗೆ ಪ್ರಾಣಿಗಳು ಹಾಗೂ ಅಗ್ನಿ ಶಾಮಕ ದಳದ ಪರವಾನಗಿ ಅತ್ಯಗತ್ಯವಾಗಿದೆ ಎಂದರು.
1977ರಲ್ಲಿ ಪ್ರಾರಂಭವಾದ ಸರ್ಕಸ್ ಕಂಪನಿ ಅಸ್ಸಾಂ ಕಾಶ್ಮೀರ ಹೊರತುಪಡಿಸಿ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಹಲವು ಪ್ರದರ್ಶನಗಳನ್ನು ನೀಡಿದೆ.ಅಂದಿನಿಂದಲೂ 250ಕ್ಕೂ ಹೆಚ್ಚು ಮಂದಿಗೆ ಕಂಪನಿ ಆಶ್ರಯ ನೀಡುತ್ತಾ ಬಂದಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

