ಭೂಸ್ವಾಧೀನ ವಿಧೇಯಕ: ಮಾಲೀಕರಿಗೆ ಅನುಕೂಲ
ಕನ್ನಡಪ್ರಭ ವಾರ್ತೆ ಹಾಸನ ಸೆ.20
ಸರ್ಕಾರ ಜಾರಿಗೆ ತಂದಿರುವ ಭೂಸ್ವಾಧೀನ ವಿಧೇಯಕದಲ್ಲಿ ಭೂಮಾಲಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದ್ದು, ಭೂ ಮಾಲೀಕರು ಭೂಮಿ ಕಳೆದುಕೊಳ್ಳುವ ಸಂದರ್ಭದಲ್ಲಿ ಅವರಿಗೆ ಹೆಚ್ಚಿನ ಪರಿಹಾರ ದೊರೆಯುತ್ತದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರಾಚಪ್ಪ ಹೇಳಿದರು.
ಕೇಂದ್ರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ವಾರ್ತಾ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಸಿ.ಎಂ.ಎಸ್.ಎಸ್ ಸೇವಾ ಸಂಸ್ಥೆ, ಶ್ರೀಗಂಧ ಸೇವಾ ಸಂಸ್ಥೆ, ಹೆರಗು ಗ್ರಾಮ ಪಂಚಾಯಿತಿ, ಆಶ್ರಯದಲ್ಲಿ ಮಂಗಳವಾರ ತಾಲೂಕಿನ ಹೆರಗು ಗ್ರಾಪಂ ಆವರಣದಲ್ಲಿ ಏರ್ಪಡಿಸಲಾಗಿದ್ದ ಭಾರತ ನಿರ್ಮಾಣ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತ ಪ್ರಚಾರಾಂದೋಲನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ಕೈಗಾರಿಕೀಕರಣ, ನಗರೀಕರಣ ಹಾಗೂ ಹೆದ್ದಾರಿ ವಿಸ್ತರಣೆಗೆ ಕೃಷಿ ಭೂಮಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಭೂಮಾಲೀಕರ ಒಪ್ಪಿಗೆ ಪಡೆದೆ ಭೂಮಿ ಸ್ವಾಧೀನಪಡಿಸಿ ಕೊಳ್ಳಬೇಕಾಗಿದ್ದು, ಗ್ರಾಮೀಣ ಪ್ರದೇಶದಲ್ಲಾದರೆ ಪ್ರಚಲಿತ ಮಾರುಕಟ್ಟೆ ಮೌಲ್ಯದ 4 ಪಟ್ಟು ಹೆಚ್ಚು ದರ ನಗರ ಪ್ರದೇಶದಲ್ಲಿ ದುಪ್ಪಟ್ಟು ದರದ ಪರಿಹಾರ ಪಾವತಿ, ಸಾರಿಗೆ ಮರುವಸತಿ ಮತ್ತು ತಕ್ಷಣದ ಜೀವನೋಪಾಯ ಭತ್ಯೆಗಳನ್ನು ಮುಂದಾಗಿಯೇ ನೀಡುವುದರ ಜೊತೆಗೆ ಜಮೀನು ಕಳೆದುಕೊಳ್ಳುವ ಕುಟುಂಬದ ಸದಸ್ಯನಿಗೆ ಉದ್ಯೋಗ ನೀಡಿಕೆ ಇಲ್ಲವೆ ತಕ್ಷಣವೇ 5 ಲಕ್ಷ ರು. ಪರಿಹಾರ ಕಲ್ಪಿಸಬೇಕು ಎಂದು ತಿಳಿಸಿದರು.
ಆಹಾರ ಭದ್ರತಾ ವಿಧೇಯಕ: ಸಹಾಯಕ ಸಂಖ್ಯಾ ಸಂಗ್ರಹಣಾಧಿಕಾರಿ ವರದರಾಜು ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಜನರಿಗೆ ಹಸಿವು ನೀಗಿಸಿಕೊಳ್ಳಲು ಸರ್ಕಾರ ಆಹಾರ ಭದ್ರತಾ ವಿಧೇಯಕವನ್ನು ಜಾರಿಗೊಳಿಸಿದ್ದು, ನಿಗಧಿಪಡಿಸಿದ ದರದಲ್ಲಿ ಆಹಾರ ಧಾನ್ಯಗಳನ್ನು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸುತ್ತಿದ್ದು, ಅರ್ಹ ಫಲಾನುಭವಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ವಿವರಿಸಿದರು.
ಅಮೂಲ್ಯ ಆರ್ಥಿಕ ಸಾಕ್ಷರತಾ ಸಲಹೆಗಾರ ಕೆ.ಎಸ್.ಬಸವರಾಜು ಮಾತನಾಡಿ, ಬಯೋವುಟ್ರಿಕ್ ಪದ್ಧತಿಯ ಆಧಾರ್ ಕಾರ್ಡ್ನ್ನು ಸರ್ಕಾರ ಎಲ್ಲಾ ಜನಸಾಮಾನ್ಯರಿಗೂ ದೊರಕಿಸುವ ನಿಟ್ಟಿನಲ್ಲಿ ಹಲವಾರು ಕೇಂದ್ರಗಳನ್ನು ತೆರೆದಿದ್ದು, ಈ ಮೂಲಕ ದೇಶದ ನಾಗರಿಕನೆಂದು ಗುರುತಿಸಿಕೊಳ್ಳುವ ಹಾಗೂ ಸರ್ಕಾರದ ಹಲವಾರು ಯೋಜನೆಗಳ ಮೂಲಕ ದೊರಕುವ ಧನ ಸಹಾಯ ಪಡೆದುಕೊಳ್ಳಲು ಇದು ಸಹಕಾರಿಯಾಗಿದೆ ಎಂದರು.
ವಿಜಯ ಬ್ಯಾಂಕ್ ಅಧಿಕಾರಿ ಇಮ್ರಾನ್ ಮಾತನಾಡಿ, ನೇರ ನಗದು, ವರ್ಗಾವಣೆ ಕುರಿತು ಮಾಹಿತಿ ನೀಡಿದರು. ಹಾಗೂ ಆಧಾರ್ ಕಾರ್ಡ್ನ್ನು ತಮ್ಮ ಖಾತೆಗಳಿಗೆ ಜೋಡಿಸುವುದರ ಮೂಲಕ ಫಲಾನುಭವಿಗಳಿಗೆ ಮಧ್ಯವರ್ತಿಗಳ ಸಹಾಯವಿಲ್ಲದೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಮ್ಮ ಖಾತೆಗೆ ವರ್ಗಾಯಿಸಬಹುದಾಗಿದೆ ಎಂದು ವಿವರಿಸಿದರು.
ಹೆರಗು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಾಗಮ್ಮ ಶಿವಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಪಂ ಉಪಾಧ್ಯಕ್ಷೆ ರಾಧಮ್ಮ, ಪಂಚಾಯಿತಿ ಸದಸ್ಯರಾದ ಲಿಂಗೇಶ್, ಶಿವಣ್ಣ, ಗ್ರಾಮದ ಪ್ರಭುದೇವ್, ಚನ್ನಕೇಶವ ಗೌಡ, ಶಿವಣ್ಣ ಮುಂತಾದವರು ಹಾಜರಿದ್ದರು. ಕ್ಷೇತ್ರ ಪ್ರಚಾರ ಸಹಾಯಕ ಪ್ರಕಾಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸಿ.ಎಂ.ಎಸ್ ಸೇವಾ ಸಂಸ್ಥೆಯ ರಂಗಲಕ್ಷ್ಮಿ ಸ್ವಾಗತಿಸಿದರು. ಆಶಾ ಕಾರ್ಯಕರ್ತೆ ಬೇಬಿ ನಿರೂಪಿಸಿದರು. ಸ್ವಸಹಾಯ ಸಂಘದ ರೇಣುಕಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

