ಹೇಮಾವತಿಯಿಂದ ಅಕ್ರಮ ಮರಳು ಸಾಗಣೆ: 8 ಲಾರಿ, 3 ಟ್ರ್ಯಾಕ್ಟರ್ ವಶ
ಹೊಳೆನರಸೀಪುರ: ತಾಲೂಕಿನ ನಾನಾ ಕಡೆಗಳಲ್ಲಿ ಹೇಮಾವತಿ ನದಿಯಿಂದ ಅನಧಿಕೃತವಾಗಿ ಮರಳು ತೆಗೆದು ಹೊರ ಊರುಗಳಿಗೆ ಸಾಗಿಸುತ್ತಿದ್ದ ಲಾರಿ ಹಾಗೂ ಟ್ರ್ಯಾಕ್ಟರ್ಗಳನ್ನು ಉಪ ವಿಭಾಗಾಧಿಕಾರಿ ಶರತ್ ನೇತೃತ್ವದಲ್ಲಿ ತಹಸೀಲ್ದಾರ್ ಶಿವಶಂಕರ್ ವಶಪಡಿಸಿಕೊಂಡಿದ್ದಾರೆ.
ಹೇಮಾವತಿ ನದಿಯಿಂದ ಮರಳು ತೆಗೆಯುವುದನ್ನು ನಿಷೇಧಿಸಿದ್ದರೂ, ಕಾನೂನು ಉಲ್ಲಂಘಿಸಿ ರಾಜಾರೋಷವಾಗಿಯೇ ಮರಳು ಸಾಗಿಸುತ್ತಿದ್ದ 8 ಲಾರಿ ಹಾಗೂ 3 ಟ್ರ್ಯಾಕ್ಟರ್ಗಳನ್ನು ವಶಕ್ಕೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.
ತಾಲೂಕಿನ ವಳಂಬಿಗೆ, ಯಳ್ಳೇಶಪುರ, ಹಳೇಕೋಟೆ ಹಾಗು ಹಂಗರಹಳ್ಳಿ ಬಳಿಯಲ್ಲಿ ನದಿಯಿಂದ ಲಕ್ಷಾಂತರ ರು. ಬೆಲೆಬಾಳುವ ಮರಳು ತೆಗೆದು ಸಾಗಿಸುತ್ತಿದ್ದ ವಾಹನಗಳನ್ನು ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಲಾಗಿದ್ದು, ದಂಡ ವಿಧಿಸುವ ಕುರಿತಂತೆ ಜಿಲ್ಲಾಧಿಕಾರಿ ಕ್ರಮಕ್ಕೆ ಒಪ್ಪಿಸಿರುವುದಾಗಿ ತಹಸೀಲ್ದಾರ್ ತಿಳಿಸಿದ್ದಾರೆ.
ಹೇಮಾವತಿ ನದಿ ಪಾತ್ರದಲ್ಲಿ ಮರಳು ತೆಗೆಯಲು ಯಾವುದೇ ಟೆಂಡರ್ ಕರೆಯಲಾಗಿಲ್ಲ. ಆದರೂ ಅನಧಿಕೃತವಾಗಿ ಮರಳು ಮಾಫಿಯಾದವರು ನಿತ್ಯವೂ ರಾಜಾರೋಷವಾಗಿಯೇ ನದಿಯಿಂದ ಮರಳು ತೆಗೆದು ಸಾಗಿಸುತ್ತಿದ್ದರೂ ತಾಲೂಕು, ಜಿಲ್ಲಾಡಳಿತ ಹಾಗೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಮರಳು ಲೂಟಿ ನಿರಂತರವಾಗಿ ನಡೆದೇ ಇದೆ. ಈಚೆಗೆ ತಾಲೂಕಿಗೆ ನೂತನವಾಗಿ ಬಂದಿರುವ ತಹಸೀಲ್ದಾರ್ ಶಿವಶಂಕರ್ ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶಿರಸ್ತೇದಾರ್ ಉಲಿವಾಲ ಮೋಹನ್ಕುಮಾರ್, ರಾಜಸ್ವ ನಿರೀಕ್ಷಕ ನಾಗರಾಜು ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

