ಯುವಕರು ಸವಾಲು ಎದುರಿಸುವ ಗುಣ ಬೆಳೆಸಿಕೊಳ್ಳಿ
ಕನ್ನಡಪ್ರಭ ವಾರ್ತೆಹಾಸನ ಸೆ. 22
ಯುವ ಜನತೆ ಹಳ್ಳಿಗಳಲ್ಲಿ ಜಾಗೃತಿ ಮೂಲಕ ಮನಪರಿವರ್ತನೆ ಮಾಡಿ ಉತ್ತಮ ಕಡೆಗೆ ಕೊಂಡೊಯ್ಯಬೇಕು ಎಂದು ಸಾಹಿತಿ ರೂಪ ಹಾಸನ ಕಿವಿಮಾತು ಹೇಳಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಸರ್ಕಾರಿ ಕಾನೂನು ಕಾಲೇಜಿನ ನೂತನ ಕಟ್ಟಡದ ಸಭಾಂಗಣದಲ್ಲಿ ವಿದ್ಯಾರ್ಥಿ ್ಥಗಳ ಸಾಂಸ್ಕತಿಕ ವೇದಿಕೆ ಮತ್ತು ಕ್ರೀಡಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಮುಂದೆ ಇರುವ ಸವಾಲುಗಳನ್ನು ಯುವ ಪೀಳಿಗೆಯು ಎದುರಿಸುವಂತೆ ಗುಣವನ್ನು ಬೆಳೆಸಿಕೊಳ್ಳುವುದು ಮುಖ್ಯ. ಭಾರತದಲ್ಲಿ ಮೂಡನಂಬಿಕೆ, ಕಂದಚಾರ ಮತ್ತು ನಂಬಿಕೆಯಿಂದ ಜೀವನ ಸಾಗಿಸುತ್ತಿದ್ದಾರೆ. ಸಂವಿಧಾನದಲ್ಲಿ ಬಂದಿರುವಂತೆ ಸರ್ವರಿಗೂ ನ್ಯಾಯಯುತವಾದ ಉತ್ತಮ ವಾತವರಣ ನಿರ್ಮಾಣವಾಗಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಸಂಸ್ಕೃತಿ ಎನ್ನುವುದು ದೇಶದಲ್ಲಿ ಬೇರೆ ಬೇರೆ ರೀತಿ ಬಳಸಲ್ಪಡುತ್ತಿದೆ. ಯಾವುದೆ ಒಂದು ಸಂಸ್ಕೃತಿಯು ಕಾನೂನಿನ ಚೌಕಟ್ಟಿನ ಒಳಗೆ ಇದ್ದರೆ ಅದು ಒಳ್ಳೆಯದಾಗಿರುತ್ತದೆ ಎಂದು ಸಲಹೆ ನೀಡಿದರು. ದೇಶದಲ್ಲಿ ಸಮಸ್ಯೆಗಳು ಹಾಗೆಯೇ ಇದ್ದು, ಯುವ ಜನತೆ ಎಚ್ಚೆತ್ತುಕೊಂಡು ಪರಿಹಾರದ ಬಗ್ಗೆ ಯೋಚನೆ ಮಾಡಿ ಅರಿವು ಮೂಡಿಸಬೇಕು ಎಂದರು.
ಯುವಶಕ್ತಿ ಮನ ಮಾಡಬೇಕು: ಬಾಲ್ಯವಿವಾಹ ಒಂದು ಆತಂಕಕಾರಿ ಬೆಳವಣಿಗೆ ಆಗಿದ್ದು, ಇದರ ವಿರುದ್ಧ ಕಾನೂನು ಕೂಡ ತರಲಾಗಿದೆ. ಮುಖ್ಯವಾಗಿ ಹಳ್ಳಿ ಹಳ್ಳಿಗೂ ಜಾಗೃತಿ ಮೂಡಿಸುವ ಮೂಲಕ ದೌರ್ಜನ್ಯ ತಡೆಗಟ್ಟಲು ಮುಂದಾಗಬೇಕು.
ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವ ಮೂಲಕ ಮೂಢನಂಬಿಕೆ ಹೋಗಲಾಡಿಸಲು ಯುವಕರು ಮುಂದೆ ಬರಬೇಕು ಎಂದು ಕಿವಿಮಾತು ಹೇಳಿದರು. ಸರ್ಕಾರಿ ಕಾನೂನು ಕಾಲೇಜು ಪ್ರಾಂಶುಪಾಲ ಮಡಿವಾಳಪ್ಪ ಮಟೊಲ್ಲಿ, ಕ್ರೀಡಾ ವಿಭಾಗದ ಎನ್.ಎಂ. ಲಕ್ಷ್ಮಣ್, ಸಾಮಾಜಿಕ ಕಾರ್ಯಕರ್ತ ಸುರೇಶ್ ಗುರೂಜಿ ಮತ್ತಿತರರು ಉಪಸ್ಥಿತರಿದ್ದರು. ಮಂಜುಳ ಪಾರ್ಥಿಸಿದರು. ವಿಜಯೇಂದ್ರ ಸ್ವಾಗತಿಸಿದರು. ಮಮತಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

