ಸ್ವಚ್ಛತೆಗಾಗಿ ಪೊರಕೆ ಹಿಡಿದ ನಗರಸಭಾ ಸದಸ್ಯರು...
ಹಾಸನ: ಪೌರ ಕಾರ್ಮಿಕ ದಿನಾಚರಣೆ ಹಾಗೂ ಸ್ವಚ್ಛತಾ ಆಂದೋಲನದ ಅಂಗವಾಗಿ ಭಾನುವಾರ ನಗರಸಭೆ ಸದಸ್ಯರು ನಗರದ ಪ್ರಮುಖ ಬೀದಿಗಳನ್ನು ಸ್ಚಚ್ಛಗೊಳಿಸುವ ಕಾಯಕದಲ್ಲಿ ನಿರತರಾಗಿದ್ದರು. ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಉಪಾಧ್ಯಕ್ಷ ಇರ್ಷಾದ್ ಸೇರಿದಂತೆ ಇತರೆ ಸದಸ್ಯರು ಪೊರಕೆ ಹಿಡಿದು ನಗರದ ಎನ್.ಆರ್.ವೃತ್ತದಿಂದ ರೇಲ್ವೆ ನಿಲ್ದಾಣದವರೆಗೆ ಕಸ ಗುಡಿಸುವ ಕಾರ್ಯ ನಡೆಸಿದರು. ಇತ್ತೀಚೆಗೆ ಜನಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಕಸದ ರಾಶಿಗಳು ಹೆಚ್ಚಾಗಿ ಅನೈರ್ಮಲ್ಯ ಉಂಟಾಗುತ್ತಿದೆ. ಆದ್ದರಿಂದ ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದ ಅವರು, ಮುಂದಿನ ದಿನಗಳಲ್ಲಿ ನಗರದ ಎಲ್ಲಾ ವಾರ್ಡ್ಗಳಲ್ಲಿಯೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿ, ನಗರದ ಅನೈರ್ಮಲ್ಯ ಹೋಗಲಾಡಿಸಿ ನಿರ್ಮಲ ನಗರವನ್ನಾಗಿಸಲಾಗುತ್ತದೆ ಎಂದು ನಗರಸಭೆ ಸದಸ್ಯರು ಹೇಳಿದರು. ನಗರಸಭೆ ಸದಸ್ಯರಾದ ರಮೇಶ್ಬಾಬು, ಎಚ್.ಬಿ.ಗೋಪಾಲ್, ವಿಜಯ್ಕುಮಾರ್, ಪ್ರಸನ್ನ ಕುಮಾರ್, ಅಂಬಿಕಾ ರವಿಶಂಕರ್, ಶುಭ, ಹಿಂದುಮತಿ ಉಷಾ, ನಗರಸಭೆ ಅಧಿಕಾರಿಗಳು ಇದ್ದರು.
ವಿದ್ಯಾರ್ಥಿ ದಿಸೆಯಲ್ಲೇ ಜಾತೀಯತೆ ದೂರವಾಗಲಿ: ನಂಜುಂಡಸ್ವಾಮಿ
ಚನ್ನರಾಯಪಟ್ಟಣ: ಶಿಕ್ಷಣದಿಂದ ವಂಚಿತರಾದ ಜನಸಮುದಾಯಕ್ಕೆ ಇಂದು ಶಿಕ್ಷಣ ದೊರೆಯುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ದಿಸೆಯಿದಿಂದಲೇ ಜಾತೀಯತೆ, ಅಸ್ಪೃಶ್ಯತೆ ಮಾಡಬಾರದು ಎಂದು ಉದಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ನಂಜುಂಡಸ್ವಾಮಿ ಕಿವಿಮಾತು ಹೇಳಿದರು.
ಅವರು ಇತ್ತೀಚೆಗೆ ಸರ್ಕಾರಿ ಪ್ರಥಮ ದರ್ಜೆಕಾಲೇಜು ಕುವೆಂಪು ವೇದಿಕೆಯಲ್ಲಿ ವಿರಾಂಜನೇಯ ಯುವಕ ಸಂಘ, ಸಿ.ವಿ.ಕೆ.ಎಲ್. ಸ್ವಯಂ ಸಂಸ್ಥೆ ಹಾಗೂ ಚನ್ನರಾಯಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆದ ಅಸ್ಪೃಶ್ಯತೆ ನಿರ್ಮೂಲನೆ ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಾಂಶುಪಾಲ ಎಂ. ಕೆ. ಉಮಾನಾಥ್ ಅಧ್ಯಕ್ಷತೆ ಹಿಸಿದ್ದರು. ನವೋದಯ ವಿದ್ಯಾಸಂಸ್ಥೆ ಅಧ್ಯಕ್ಷ ಪಟೇಲ್ ಮಂಜುನಾಥ್ ಉದ್ಘಾಟನೆ ನೆರವೇರಿಸಿದರು. ಮಿಲ್ಟ್ರಿ ಮಂಜುನಾಥ್, ಲೋಹಿತ್,ಅನಸೂಯ, ಬಾಲಾಜಿಗೌಡ, ಕನ್ನಡ ಉಪನ್ಯಾಸಕ ನಂಜುಂಡಯ್ಯ, ನಂದಿನಿ, ಶಾಂಭವಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

