ಜಿಲ್ಲಾಸ್ಪತ್ರೆಯಲ್ಲಿ ರೇಡಿಯೋ ಥೆರಪಿ ಘಟಕ ಆರಂಭ
ಹಾಸನ: ಕ್ಯಾನ್ಸರ್ ರೋಗಿಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ರೇಡಿಯೋ ಥೆರಪಿ ಘಟಕ ಆರಂಭಿಸಲಾಗಿದೆ ಎಂದು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ. ರಾಚೇಗೌಡರು ತಿಳಿಸಿದ್ದಾರೆ.
ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಜಿಲ್ಲೆ ಮತ್ತು ಇತರ ಸ್ಥಳದ ರೋಗಿಗಳಿಗೆ ಅನುಕೂಲವಾಗುವಂತೆ ಕ್ಯಾನ್ಸರ್ ಘಟಕ ಪ್ರಾರಂಭಿಸಲು ಯೋಜನೆ ಸಿದ್ಧಪಡಿಸಿ ಇದನ್ನು ಅನುಷ್ಠಾನಕ್ಕೆ ತರಲು ಝಛಝಿಛ ಆಡ್ಟಿಟ್ಝ್ಛ ಖಜಡಜಝ್ಠ್ಛ ಈಜಟಿಡ್ಠಿಜ ಂ್ಡಟಛಿಛ್ಝ ಇವರಿಗೆ ಮನವಿ ಸಲ್ಲಿಸಿ, ಆರ್ಥಿಕ ನೆರವು ನೀಡುವಂತೆ ಕೋರಲಾಗಿತ್ತು. ಸಾರ್ವಜನಿಕ ರೋಗಿಗಳಿಗೆ ಕ್ಯಾನ್ಸರ್ಗೆ ಚಿಕಿತ್ಸೆ ನೀಡುವ ಸಂಸ್ಥೆಯ ಈ ಯೋಜನೆಯನ್ನು ಒಪ್ಪಿ ಪ್ರೋತ್ಸಾಹಿಸುವ ಸಲುವಾಗಿ ಝಛಝಿಛ ಆಡ್ಟಿಟ್ಝ್ಛ ಖಜಡಜಝ್ಠ್ಛ ಈಜಟಿಡ್ಠಿಜ ಂ್ಡಟಛಿಛ್ಝ ಇವರು 1.75 ಕೋಟಿ ರು. ದೇಣಿಗೆಯ ರೂಪದಲ್ಲಿ ಸಂಸ್ಥೆಗೆ ನೀಡಿದೆ. ಸಂಸ್ಥೆಯ ನಿರ್ದೇಶನದಂತೆ ಕಿಛಟಿಛ್ಛಜಛ ಂಜಜ್ಝ್ಛಛಟ ಖಿಝ್ಛಟ್ಟಿಟ್ಟ್ಜ್ಝಜಡ ಕಿಢಡಿ, ಔಡಿಜ. ಇಛಟ್ಜಿಛಟ್ಟ್ಠಜ ರವರಿಂದ ಖರೀದಿಸಿ ಅಳವಡಿಸಲಾಗಿದೆ. ರಾಜ್ಯ ಸರ್ಕಾರ 90.14 ಲಕ್ಷ ರು. ಅನುದಾನ ಬಿಡುಗಡೆ ಮಾಡಿದ್ದು ಒಟ್ಟು 2,65,14,000 ರು. ವೆಚ್ಚದಲ್ಲಿ ಸುಸಜ್ಜಿತ ರೇಡಿಯೋ ಥೆರಪಿ ಘಟಕ ನಿರ್ಮಾಣ ಮಾಡಿ ಸಾರ್ವಜನಿಕರ ಸೇವೆಗೆ ಅರ್ಪಿಸಲಾಗಿದೆ. ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ತಜ್ಜ ವೈದ್ಯರು ಸಿಬ್ಬಂದಿಯವರ ತೀವ್ರ ಕೊರತೆ ಇದ್ದು, ಈ ಕಾರಣಕ್ಕಾಗಿ ಸರ್ಕಾರದ ಅನುಮತಿ ಪಡೆದು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಹೆಲ್ತ್ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ ಲಿಮಿಟೆಡ್, ಬೆಂಗಳೂರು ರವರೊಂದಿಗೆ ಸಾರ್ವಜನಿಕ-ಖಾಸಗಿ- ಸಹಭಾಗಿತ್ವದಲ್ಲಿ ಒಪ್ಪಂದವಾಗಿದ್ದು, ಸದರಿ ಸಂಸ್ಥೆಯವರು ತಜ್ಞ ವೈದ್ಯರು ಮತ್ತು ತಾಂತ್ರಿಕ ಸಿಬ್ಬಂದಿಯವರನ್ನು ನೇಮಕ ಮಾಡಿ ಚಾಲನೆ ನೀಡಿದ್ದಾರೆ. ರೋಗಿಗಳಿಗೆ ಸರ್ಕಾರಿ ಕಿದ್ವಾಯಿ ಮೆಮೋರಿಯಲ್ ಇನ್ಸಿಟಿಟ್ಯೂಟ್ ಆಫ್ ಅಂಕಾಲಜಿ ಬೆಂಗಳೂರು ಇವರು ನಿಗದಿಪಡಿಸಿರುವ ದರದಲ್ಲಿಯೇ ಚಿಕಿತ್ಸೆ ನೀಡಲಾಗುವುದು ಮತ್ತು ಬಿಪಿಎಲ್ ಕಾರ್ಡ್ದಾರರಿಗೂ ಕಿದ್ವಾಯಿ ರಿಯಾಯ್ತಿ ದರದಲ್ಲಿಯೇ ಚಿಕಿತ್ಸೆ ಲಭ್ಯವಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಚಾಮರಾಜೇಂದ್ರ ಆಸ್ಪತ್ರೆಯ ಕೊಠಡಿ ಸಂಖ್ಯೆ 117 ಮೂಲಕ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ.
ರಾಜಘಟ್ಟದಿಂದ ಬಸ್ ಸೌಲಭ್ಯಕ್ಕೆ ಆಗ್ರಹ
ಹಾಸನ: ನಗರದ ಅಂಚಿನಲ್ಲಿರುವ ರಾಜಘಟ್ಟದಿಂದ ಹಾಸನಕ್ಕೆ ಬರಲು ಸೂಕ್ತ ಬಸ್ ಸೌಲಭ್ಯ ಒದಗಿಸುವಂತೆ ನಿವಾಸಿಗಳು ಆಗ್ರಹಿಸಿದ್ದಾರೆ. ರಾಜಘಟ್ಟದಲ್ಲಿ 4 ರಿಂದ 5 ಸಾವಿರ ಜನಸಂಖ್ಯೆ ಇದೆ. ಈ ಬಡಾವಣೆಯಿಂದ (ಪ್ರಗತಿನಗರ, ಭಾರತಿ ಕ್ವಾಟ್ರಸ್, ತೋಟದ ಮನೆಯಿಂದ) ಶಾಲಾ -ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಸೇರಿದಂತೆ ಪ್ರತಿದಿನ 500 ಕ್ಕೂ ಹೆಚ್ಚು ಜನರು ಹಾಸನ ನಗರಕ್ಕೆ ಬಂದು ಹೋಗುತ್ತಾರೆ. ಆದರೆ ಇಂದಿಗೂ ನೇರವಾದ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂದು ದೂರಿದ್ದಾರೆ. ಬಸ್ ಸೌಲಭ್ಯ ಇಲ್ಲದೆ ಮಕ್ಕಳು, ವಯೋವೃದ್ಧರು ರೇಲ್ವೆ ನಿಲ್ದಾಣದವರೆಗೆ ನಡೆದುಕೊಂಡೇ ಬರಬೇಕು. ಇಲ್ಲವೇ ದುಬಾರಿ ಹಣ ಖರ್ಚು ಮಾಡಿಕೊಂಡು ಆಟೋದಲ್ಲಿ ಬರಬೇಕು. ಈ ಹಿಂದೆ ಹಲವು ಬಾರಿ ಬಸ್ ಸೌಲಭ್ಯಕ್ಕಾಗಿ ಆಗ್ರಹಿಸಿದರೂ ಏನೂ ಪ್ರಯೋಜನವಾಗಿಲ್ಲ. ಇತ್ತೀಚೆಗೆ ರಾಜಘಟ್ಟ ಘಟಕ ಸಭೆ ಸೇರಿ ಈ ವಿಷಯದ ಬಗ್ಗೆ ಚರ್ಚಿಸಿ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ಬಸ್ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಬಡಾವಣೆಯ ಪವಿತ್ರ, ಸಿತಾರ ಮುಂತಾದವರು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

