ಬಹುಭಾಷಾ ಕಲಿಕೆಯಿಂದ ಅವಕಾಶ ಹೆಚ್ಚು: ಡಾ. ಸಲೀಂ
ಕ.ಪ್ರ.ವಾರ್ತೆ ಮೈಸೂರು ಸೆ. 24
ಬಹುಭಾಷಾ ಕಲಿಕೆಯಿಂದ ಅವಕಾಶಗಳು ತೆರೆದುಕೊಳ್ಳುತ್ತವೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ನಿರಂತರ ಇಂಗ್ಲಿಷ್ ಕಲಿಕಾ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆ ಎಂಬುದು ಸಂಪರ್ಕದ ಪ್ರಮುಖ ಕೊಂಡಿ. ಇಂದಿನ ಸ್ಪರ್ಧಾತ್ಮಕ ಮತ್ತು ಜಾಗತಿಕ ಯುಗದಲ್ಲಿ ಕೇವಲ ಒಂದೆ ಭಾಷೆಗೆ ಅಂಟಿ ಕುಳಿತರೆ ಉದ್ಯೋಗಾವಕಾಶ ಕಡಿಮೆ. ಆದ್ದರಿಂದ ಇಂಗ್ಲಿಷ್ ಸೇರಿದಂತೆ ಅನೇಕ ಭಾಷೆಗಳನ್ನು ಕಲಿತರೆ ಅವಕಾಶಗಳ ಬಾಗಿಲು ತೆರೆಯುತ್ತದೆ ಎಂದು ಹೇಳಿದರು.
ಅನೇಕ ಭಾಷೆಗೆ ಮಾತೃ ಭಾಷೆ ಬೇರೆಯೆ ಆಗಿರುತ್ತದೆ. ಭಾರತದ ಬಹುಪಾಲು ಭಾಷೆಗೆ ಸಂಸ್ಕೃತ ಮಾತೃ ಇದ್ದಂತೆ. ಆದರೆ ಇಂಗ್ಲಿಷನ್ನು ಕೆಲವೆ ದೇಶಗಳು ಬಳಸುತ್ತಿದ್ದರೂ, ಅದಕ್ಕಿರುವ ಅವಕಾಶಗಳು ದೊಡ್ಡದಾಗಿದೆ. ಜರ್ಮನಿಯಲ್ಲಿ ಜರ್ಮನ್, ಜಪಾನ್ನಲ್ಲಿ ಜಪಾನಿ, ಚೀನಾದಲ್ಲಿ ಚೀನಿ ಭಾಷೆ ಮಾತನಾಡುವವರ ಸಂಖ್ಯೆಯೇ ಹೆಚ್ಚಿದೆ.
ಆದರೆ ಇಂಗ್ಲೆಂಡ್, ಅಮೆರಿಕ, ಭಾರತ ಮುಂತಾದ ದೇಶಗಳಲ್ಲಿ ಇಂಗ್ಲಿಷ್ ಭಾಷೆಗೆ ಸಾಕಷ್ಟು ಪ್ರಾಮುಖ್ಯತೆ ಇದೆ ಎಂದರು.
ಬಹಳ ಸರಳವಾದ ಮತ್ತು ಚಿಕ್ಕದಾದ ಭಾಷೆ ಎಂದರೆ ಇಂಗ್ಲಿಷ್ ಮಾತ್ರ. ಇಂಗ್ಲಿಷ್ ಅನ್ನು ಕೇವಲ ಉದ್ಯೋಗ ಅವಕಾಶಕ್ಕಾಗಿ ಮಾತ್ರ ಕಲಿಯಬೇಕಿಲ್ಲ.
ಬೇರೆ ಬೇರೆ ಅವಕಾಶಗಳೂ ದೊರೆಯುತ್ತದೆ ಎಂದು ಸಲೀಂ ಹೇಳಿದರು.ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಪಿ.ಎಸ್. ನಾಯಕ್, ಶಿಬಿರ ಸಂಯೋಜಕ ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

