ಹಾಸನ

ಶಿಕ್ಷಣದಿಂದ ಮಾತ್ರ ಬಡತನ, ನಿರುದ್ಯೋಗ ಅಳಿವು

Published On :

ಕನ್ನಡಪ್ರಭ ವಾರ್ತೆಬೇಲೂರು ಸೆ.25   
ಶಿಕ್ಷಣದಿಂದ ಮಾತ್ರ ದೇಶದ ಬಡತನ ಹಾಗೂ ನೀರುದ್ಯೋಗ ಹೋಗಲಾಡಿಸಲು ಸಾಧ್ಯ ಎಂದು ಶಾಸಕ ವೈ.ಎನ್.ರುದ್ರೇಶಗೌಡ ಹೇಳಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ವೈಡಿಡಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ವಿಭಾಗ ಆಶ್ರಯದಲ್ಲಿ ನಡೆದ ವೈಡಿಡಿ ವರ್ಷದ ವ್ಯಕ್ತಿಗೆ ಅಭಿನಂದನೆ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ದಿಸೆಯಲ್ಲಿ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಮಹತ್ವದೊಂದಿಗೆ ಶಿಕ್ಷಣ ರಂಗಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿವೆ. ರಾಜ್ಯ ಸರ್ಕಾರ ಸರ್ವ ಶಿಕ್ಷಣ ಅಭಿಯಾನ ಹಾಗೂ ಉನ್ನತ ಶಿಕ್ಷಣ ಹೆಚ್ಚು ಅನುದಾನ ನೀಡುತ್ತಿದೆ. ವಿದ್ಯಾರ್ಥಿಗಳು ಇಂತಹ ಅವಕಾಶವನ್ನು ಉಪಯೋಗಿಸಿಕೊಂಡು ದೇಶಕ್ಕೆ ಉತ್ತಮ ಹೆಸರು ತರಬೇಕು ಎಂದು ಆಶಿಸಿಸಿದರು.
ಶಿವಮೊಗ್ಗದ ಸಾಹಿತಿ ಡಾ. ಕುಮಾರ್ ಚಲ್ಯ ಮಾತನಾಡಿ, ವಿಶ್ವ ಮಟ್ಟದಲ್ಲಿ ಭಾರತದ ಪ್ರತಿಭೆಗಳನ್ನು ವಿಜ್ಞಾನ ನೆಪದಲ್ಲಿ ಮಾರಾಟ ಮಾಡುತ್ತಿದ್ದು, ಇದು ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ. ಹಿರಿಯರಲ್ಲಿ ಅತ್ಮಗೌರವ, ಕಿರಿಯರಲ್ಲಿ ಆತ್ಮವಿಶ್ವಾಸ ಇಲ್ಲವಾಗಿದೆ. ಮಾತಿನಲ್ಲಿ ಸೋಗಲಾಡಿತನ, ಅಸೂಯೆ, ನಡೆ-ನುಡಿಯಲ್ಲಿ ಇಲ್ಲದ ಶುದ್ಧತೆ, ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬ ಸೆಳೆತದಿಂದ ಕಿಲೋಮೀಟರ್‌ಗೆ ಒಂದರಂತೆ ವೃದ್ಧಾಶ್ರಮಗಳು ಹೆಚ್ಚುತ್ತಿವೆ ಎಂದ ಅವರು ಕುಟುಂಬಗಳಲ್ಲಿನ ವಿಶ್ವಾಸವನ್ನು ಜನರು ಕಳೆದುಕೊಂಡಿದ್ದಾರೆ. ವಿದ್ಯಾರ್ಥಿಗಳು ತಮ್ಮ ಮನೆ ಮನವನ್ನು ಗೆಲ್ಲುವ ಕಡೆ ಗಮನ ನೀಡಬೇಕು ಎಂದು ತಿಳಿಸಿದರು. ಆಸ್ತಿ, ಹಣ, ಅಧಿಕಾರ ದಾಹದಿಂದ ದೇಶವನ್ನು ಭ್ರಷ್ಟಚಾರಕ್ಕೆ ನೂಕಿ, ತಾವು ಮಾತ್ರ ಸ್ವಾರ್ಥ ಬದುಕಿನ ಬಂಗಲೆಯಲ್ಲಿ ಮೋಜು ಮಸ್ತಿಯಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ಇಂಗ್ಲಿಷ್ ವಿಭಾಗ ಮುಖ್ಯಸ್ಥ ಡಾ.ರಾಜಶೇಖರ್ ಮಠಪತಿ ಮಾತನಾಡಿ ವೈಡಿಡಿ ವರ್ಷದ ವ್ಯಕ್ತಿ ಕಾಯಕಕ್ಕೆ ಮಹತ್ವ ನೀಡಲಾದ ಗೌರವ ಎಂದ ಅವರು ಈ ಗೌರವ ಯಾವ ರಾಜಕೀಯವಿಲ್ಲದೆ ಅಯ್ಕೆ ಮಾಡಲಾಗಿದೆ. ಜನಪದ ರಂಗಭೂಮಿ ಹಾಗೂ ಅಡುಗೆ ಕ್ಷೇತ್ರ ಇಂತಹ ಕಾಯಕದ ಅರಿವು ವಿದ್ಯಾರ್ಥಿಗಳಲ್ಲಿ ಮೂಡಲಿ ಎಂಬ ಭಾವನೆಯಿಂದ ವರ್ಷದ ವ್ಯಕ್ತಿಯನ್ನು ಅಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.ಸಾಹಿತಿ ಬೇಲೂರು ಕೃಷ್ಣಮೂರ್ತಿ, ಪ್ರಾಂಶುಪಾಲ ಪ್ರೊ.ಡಿ.ಎಸ್.ರಾಜು, ಪ್ರೊ.ಜಯಣ್ಣಗೌಡ, ಪ್ರೊ. ಸತೀಶ್, ಮಹದೇವಪ್ಪ, ಪ್ರೊ. ಜಯರಾಮು, ಮಮತ, ರುದ್ರಮೂರ್ತಿ ಮುಂತಾದವರು ಇದ್ದರು.ಇದೇ ಸಂದರ್ಭದಲ್ಲಿ ವೈಡಿಡಿ ವರ್ಷದ ವ್ಯಕ್ತಿಯಾಗಿ ಅಡುಗೆ ನಾಗರಾಜು ಅವರನ್ನು ಶಾಸಕರು ಹಾಗೂ ಕಾಲೇಜು ಸಿಬ್ಬಂದಿ ಗೌರವಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.