ಹಾಸನ

ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಸೂಚನೆ

Published On :

ಹಾಸನ: ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟವನ್ನು ಮಂಡ್ಯ ಮತ್ತು ಮೈಸೂರಿನಲ್ಲಿ  ಸಂಘಟಿಸಲಾಗುತ್ತಿದೆ. ಸೆ.26 ರಿಂದ ಪ್ರಾರಂಭವಾಗಲಿದೆ. 28 ರವರೆಗೆ  ಖೋಖೋ, ಕಬ್ಬಡಿ ಬ್ಯಾಸ್ಕೆಟ್‌ಬಾಲ್, ಹ್ಯಾಂಡ್‌ಬಾಲ್, ಈಜು, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್, ಷಟಲ್ ಬ್ಯಾಡ್ಮಿಂಟನ್, ಲಾನ್ ಟೆನ್ನಿಸ್, ಟೇಬಲ್ ಟೆನ್ನಿಸ್ ನಡೆಯಲಿದೆ. 29 ರಿಂದ ಅ.1 ರವರೆಗೆ ಮೈಸೂರಿನಲ್ಲಿ ಅಥ್ಲೆಟಿಕ್ಸ್, ಹಾಕಿ, ವಾಲಿಬಾಲ್, ಜಿಮ್ನಾಸ್ಟಿಕ್ಸ್ ನಡೆಯಲಿದೆ.  ಮೈಸೂರು ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಸೆ. 16 ರಂದು ನಡೆದ ಹಾಸನ ಜಿಲ್ಲಾ  ಮಟ್ಟದ  ದಸರಾ ಕ್ರೀಡಾ ಕೂಟದಲ್ಲಿ ತಂಡ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದವರು ಮತ್ತು ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದವರು ಮಾತ್ರ ಭಾಗವಹಿಸಲು ಅರ್ಹರು. ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸದೆ ಇರುವವರಿಗೆ ಯಾವುದೇ ರೀತಿಯ ಪ್ರಯಾಣ ಮತ್ತು ದಿನಭತ್ಯೆಯನ್ನು ನೀಡಲಾಗುವುದಿಲ್ಲ. ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ  ಮೈಸೂರಿನಲ್ಲಿ ನಡೆಯುವ ಸ್ಪರ್ಧ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳು ಸೆ. 29 ರಂದು ಸಂಜೆ 4 ರಿಂದ 7 ರವರೆಗೆ ಮೈಸೂರಿನ ನಂಜರಾಜ ಬಹದ್ದೂರು ಛತ್ರ ವಿನೋಬ ರಸ್ತೆ, ಮೈಸೂರು ಇಲ್ಲಿ ವರದಿ ಮಾಡಿ ಭಾಗವಹಿಸಬೇಕು.ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಸನ 246056 ಸಂಪರ್ಕಿಸಲು ಕೋರಿದೆ.

ಪೊಲೀಸ್ ಇಲಾಖೆಗೆ ಭರ್ಜರಿ ಸರ್ಜರಿ
ಬೆಂಗಳೂರು:
ರಾಜ್ಯ ಪೊಲೀಸ್ ಇಲಾಖೆಗೆ ಸರ್ಕಾರ ಮೇಜರ್ ಸರ್ಜರಿ ಮಾಡಿದ್ದು, 500ಕ್ಕೂ ಅಧಿಕ ಇನ್ಸ್‌ಪೆಕ್ಟರ್‌ಗಳು, 55ಕ್ಕೂ ಹೆಚ್ಚು ಡಿವೈಎಸ್ಪಿಗಳನ್ನು ವರ್ಗಾವಣೆಗೊಳಿಸಿದೆ. ಜಿಲ್ಲೆಗೆ ವರ್ಗವಾಗಿರುವ ಅಧಿಕಾರಿಗಳ ವಿವರ ಇಂತಿದೆ.
ಹೊಸ ಡಿವೈಎಸ್‌ಪಿಗಳು
ಪಿ.ಎಚ್. ಭೀಮಕ್ಕನವರ್, ಹಾಸನ ಉಪವಿಭಾಗ
ಎಸ್.ಜೆ.ಕುಮಾರಸ್ವಾಮಿಸಕಲೇಶಪುರ ಉಪವಿಭಾಗ
ಹೊಸ ಇನ್ಸ್‌ಪೆಕ್ಟರ್‌ಗಳು
ಡಿ.ಸತೀಶ್- ಅಲೂರು
ಬಿ.ಎಸ್.ನಂದಕುಮಾರ್- ಅರಸೀಕೆರೆ ನಗರ
ಕೆ.ಎಲ್.ಗಣೇಶ್- ಬೇಲೂರು
ಎಚ್.ಎಂ.ಶೈಲೇಂದ್ರ- ಚನ್ನರಾಯಪಟ್ಟಣ
ಎ.ಮಾರಪ್ಪ- ಡಿಸಿಆರ್‌ಬಿ ಹಾಸನ
ಪ್ರಭಾಕರ್ ರಾವ್ ಶಿಂಧೆ- ಡಿಎಸ್‌ಬಿ ಹಾಸನ
ಎನ್.ಜಿ.ಕೃಷ್ಣಪ್ಪ- ಹೊಳೇನರಸೀಪುರ
ಕೆ.ಟಿ.ಗುರುರಾಜ್- ಸಕಲೇಶಪುರ
ಇ.ವಿ.ವಿನಯ್- ಚೆಸ್ಕಾಂ ಹಾಸನ

ಅಮಾನತು ರದ್ದು: ಹಾಸನ ಎಸ್ಪಿ ಅವರು ಇನ್ಸ್‌ಪೆಕ್ಟರ್ ಜಯಲಕ್ಷ್ಮೀ ಅವರನ್ನು ಅಮಾನತು ಪಡಿಸಿದ್ದ ಆದೇಶವನ್ನು ದಕ್ಷಿಣ ವಲಯ ಐಜಿಪಿ ರದ್ದುಪಡಿಸಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ತಮ್ಮನ್ನು ಸೌಜನ್ಯಕ್ಕಾದರೂ ಕೇಳದೆ ಅಮಾನತು ರದ್ದು ಮಾಡಿರುವ ಬಗ್ಗೆ ಎಸ್ಪಿ ಅವರು ಐಜಿಪಿ ಬಳಿಯೇ ಅಸಮಾಧಾನ ತೋಡಿಕೊಂಡಿದ್ದರು. ಈ ನಡುವೆ ಜಯಲಕ್ಷ್ಮೀ ಅವರನ್ನು ರಾಜ್ಯ ಗುಪ್ತದಳಕ್ಕೆ ವರ್ಗಾವಣೆ ಮಾಡಿರುವುದು ಪೊಲೀಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
29ಕ್ಕೆ ಶಿಕ್ಷಕರ ಸಾಹಿತ್ಯ ಸಮ್ಮೇಳನ
ಹಾಸನ: ಕನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ ವತಿಯಿಂದ ಸೆ.29ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಅಖಿಲ ಕನಾಟಕ 3ನೇ ಶಿಕ್ಷಕರ ಸಾಹಿತ್ಯ ಸಮ್ಮೇಳ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಹಾಗೂ ಅರಸೀಕೆರೆಯ ಕ್ಷೇತ್ರ ಸಮನ್ವಯಾಧಿಕಾರಿ ಲಕ್ಷ್ಮಣ ಬಳೂಟಗಿ  ಆಯ್ಕೆಯಾಗಿದ್ದಾರೆ. ಸಮ್ಮೇಳನದಲ್ಲಿ ಹಮ್ಮಿಕೊಂಡಿರುವ ಕವಿಗೋಷ್ಠಿಯಲ್ಲಿ ಭಾಗವಹಿಸಲಿಚ್ಛಿಸುವ ಶಿಕ್ಷಕ ಕವಿಗಳನ್ನು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ಶಿಕ್ಷಕರಿಗೆ ರಾಜ್ಯಮಟ್ಟದ ಜನಪ್ರಿಯ ಶಿಕ್ಷಕ ಪ್ರಶಸ್ತಿಗೆ ಅಯ್ಕೆ ಮಾಡಲಾಗುವುದು. ಈ ದಿಸೆಯಲ್ಲಿ ಶಿಕ್ಷಕರು ನಾಯಕರಹಳ್ಳಿ ಮಂಜೇಗೌಡ, ಅರ್ಜುನನಿಧಿ ನಿಲಯ, ಅಕ್ಷಯ ಭಂಡಾರ ಹತ್ತಿರ, ಗಣಪತಿ ದೇವಸ್ಥಾನ ಬೀದಿ, ಶಾಂತಿನಗರ, ಹಾಸನ, ದೂರವಾಣಿ ಸಂಖ್ಯೆ  448318011 ಇವರನ್ನು ಸಂಪರ್ಕಿಸ ಬೇಕೆಂದು ಶಿಕ್ಷಕರ ವಿಕಾಸ ಪರಿಷತ್ತಿನ ರಾಜ್ಯಾಧ್ಯಕ್ಷ  ತಿ.ರಾಮಕೃಷ್ಣಯ್ಯ ಕೋರಿದ್ದಾರೆ.

ನಗರದಲ್ಲಿ ಆಳ್ವಾಸ್ ಸಂಸ್ಕೃತಿ ವೈಭವ
ಹಾಸನ:
ನಗರದ ಹಾಸನಾಂಬ ಕಲಾ ಕ್ಷೇತ್ರ(ಕಲಾಭವನ)ದಲ್ಲಿ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್, ಹಾಸನ ಘಟಕದ ಉದ್ಘಾಟನಾ ಸಮಾರಂಭ ಮತ್ತು ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಅಕ್ಟೋಬರ್ 4ರಂದು ಸಂಜೆ 5.45ಕ್ಕೆ  ನಡೆಯಲಿದೆ. ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಎಚ್.ಎಸ್.ಪ್ರಕಾಶ್  ಅಧ್ಯಕ್ಷತೆ ವಹಿಸುವರು. ಯು.ಪಿ. ಸಿಂಗ್, ಶ್ರೀವಿದ್ಯಾ ಭಾಗವಹಿಸುವರು. ಡಾ. ಗುರುರಾಜ ಹೆಬ್ಬಾರ್, ಪಿ.ವಿದ್ಯಾಧರ ಹೆಗಡೆ, ಎಂ.ಕೆ.ಗೋವರ್ಧನ ಕುಮಾರ್, ಸಿ.ಎಸ್.ಕೃಷ್ಣಸ್ವಾಮಿ, ಡಾ. ಎಚ್.ಎನ್.ನಾಗರಾಜ್, ಚಾಂದಮಲ್  ಖುರಾನ, ಸಾಹಿತಿ ರೂಪಾ ಹಾಸನ್ ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.