ಹಾಸನ

ಎಚ್‌ಡಿಸಿಸಿ ಬ್ಯಾಂಕಿಗೆ 406.22 ಲಕ್ಷ ನಿವ್ವಳ ಲಾಭ

Published On :

ಹಾಸನ: ಜಿಲ್ಲೆಯಾದ್ಯಂತ 31 ಶಾಖೆಗಳನ್ನು ಹೊಂದಿರುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಈ ಸಾಲಿನಲ್ಲಿ 406.22 ಲಕ್ಷ ರು. ನಿವ್ವಳ ಲಾಭಗಳಿಸಿ ಆಡಿಟ್ ವರ್ಗೀಕರಣದಲ್ಲಿ ಎ. ವರ್ಗ ಪಡೆದಿರುವುದಾಗಿ ಬ್ಯಾಂಕಿನ ಅಧ್ಯಕ್ಷ ಹಾಗೂ ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಬ್ಯಾಂಕಿನ ಪ್ರಧಾನ ಕಚೇರಿಯ ದೇವೇಗೌಡ ರೈತಸಭಾ ಭವನದಲ್ಲಿ ಏರ್ಪಡಿಸಿದ್ದ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕು ರೈತರಿಗೆ ನೇರವಾಗಿ ಮತ್ತು ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ಗಳ ಮೂಲಕ ಒಟ್ಟು 24196.15 ಲಕ್ಷ ಕೆ.ಸಿ.ಸಿ. ಸಾಲ ನೀಡಿದೆ. ಬ್ಯಾಂಕಿಗೆ ಬರಬೇಕಾಗಿದ್ದ  25818.10 ಲಕ್ಷ ಸಾಲದ ಪೈಕಿ 19602.30 ರೂ. ಸಾಲ ವಸೂಲಾಗಿದ್ದು, ಶೇ.87.59 ರಷ್ಟು ಪ್ರಗತಿ ಸಾಧಿಸಿದೆ.  ಅದೇ ರೀತಿ ಕೃಷಿಯೇತರ ಹೊರ ಬಾಕಿ ಸಾಲ 18541.78 ಲಕ್ಷ ಇದ್ದು, ಈ ಪೈಕಿ ವರದಿ ಸಾಲಿನ ತಗಾದೆ  13177. 15 ಲಕ್ಷದಲ್ಲಿ  12299.15 ಲಕ್ಷ ರು. ವಸೂಲಾಗಿ ಶೇ.93.34 ರಷ್ಟು ಪ್ರಗತಿ ಸಾಧಿಸುವುದಾಗಿ  ತಿಳಿಸಿದರು.
ರಾಜ್ಯ ಸರ್ಕಾರದ 2012ರ ಸಾಲ ಮನ್ನಾ ಯೋಜನೆಯಂತೆ ಬ್ಯಾಂಕಿನಿಂದ ಹಾಗೂ ಪ್ರಾಥಮಿಕ ಕೃಷಿ ಪತ್ತಿನ  ಸಹಕಾರ ಸಂಘಗಳಿಂದ ಬೆಳೆ ಸಾಲ ಪಡೆದ ರೈತರಿಗೆ 25 ಸಾವಿರ ರು. ವರೆಗಿನ ಅಸಲು ಹಾಗೂ ಬಡ್ಡಿ ಮನ್ನಾ ಆಗಿದ್ದು ಈ ಯೋಜನೆಯಿಂದ ಜಿಲ್ಲೆಯ ಒಟ್ಟು 64 ಸಾವಿರದ 188 ರೈತ ಸದಸ್ಯರಿಗೆ 14128.45 ಲಕ್ಷ ಅಸಲು ಹಾಗೂ 1186.59 ಲಕ್ಷ ಬಡ್ಡಿ ಮನ್ನಾ ಪ್ರಯೋಜನ ಲಭಿಸಿದೆ.
ಈ ಪೈಕಿ 2011ರ  ಆಗಸ್ಟ್ 1 ರಿಂದ 2012ರ ಮಾರ್ಚ್ 31ರ ವರೆಗೆ ವಿತರಿಸಿದ ಸಾಲದ ಮನ್ನಾ ಕ್ಲೈಮ್ ಅನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಈ ಪೈಕಿ  2012ರ ಜನವರಿ ವರೆಗೆ ವಿತರಿಸಿದ ಸಾಲ ಮನ್ನಾ  ಕ್ಲೈಮ್ ಸರ್ಕಾರ ದಿಂದ ಬ್ಯಾಂಕಿಗೆ  ಜಮೆಯಾಗಿರುತ್ತದೆ. ಈವರೆಗೆ ಸರ್ಕಾರದಿಂದ ಕ್ಲೈಮು 44128 ರೈತರಿಗೆ 10666.72 ಲಕ್ಷ ಅಸಲು ಹಾಗೂ ಬಡ್ಡಿ ಸೇರಿ ಬಿಡುಗಡೆಯಾಗಿದ್ದು, ಇದನ್ನು ಈಗಾಗಲೇ ಅಯಾ ಸಂಘಗಳ ಮೂಲಕ ರೈತರಿಗೆ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ ಮಾರ್ಚ್ ವರೆಗಿನ ಕ್ಲೈಮನಲ್ಲಿ ಇನ್ನು  3680.15  ಲಕ್ಷದ ಪೈಕಿ 29 ಕೋಟಿ ಬಿಡುಗಡೆಯಾಗಿದ್ದು ಇದನ್ನು ಈಗಾಗಲೇ ಸಹಕಾರ ಸಂಘಗಳಿಗೆ ಬಿಡುಗಡೆ ಮಾಡಿರುವುದಾಗಿ ವಿವರಿಸಿದರು.
ಬ್ಯಾಂಕಿನಿಂದ  2012-13ನೇ ಸಾಲಿ ನಲ್ಲಿ 2510 ಸ್ವ-ಸಹಾಯ  ಗುಂಪು ಗಳಿಗೆ ವಿವಿಧ ಉದ್ದೇಶಕ್ಕಾಗಿ  3587. 06 ಲಕ್ಷ ಸಾಲ ನೀಡಿ ಶೇ.98ರಷ್ಟು ವಸೂಲಾತಿ ಮಾಡ ಲಾಗಿದೆ. ಕಳೆದ ಮಾರ್ಚ್ 31ಕ್ಕೆ ಸ್ವಸಹಾಯ ಸಂಘಗಳಿಗೆ ನೀಡಿದ ಸಾಲದ ಹೊರಬಾಕಿ  3741.45 ಲಕ್ಷವಿದೆ.
ಪ್ರಸಕ್ತ ಸಾಲಿನಲ್ಲಿ 306 ಜಂಟಿ ಬಾಧ್ಯತಾ  ಗುಂಪುಗಳನ್ನು ರಚನೆ ಮಾಡಿದ್ದು ಈ ಪೈಕಿ 193 ಗುಂಪು  ಗಳ 965 ಸದಸ್ಯರಿಗೆ  366.50 ಲಕ್ಷ ಮೊತ್ತದಷ್ಟು ಹೈನುಗಾರಿಕೆಗೆ ಸಾಲ ನೀಡಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.