ಹುಲುಗುಂಡಿಯಲ್ಲಿ ಆರ್ಥಿಕ ಸಾಕ್ಷರತಾ ಆಂದೋಲನ
ಹಾಸನ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ಕಾವೇರಿ ಗ್ರಾಮೀಣ ಬ್ಯಾಂಕ್, ಹಗರೆ ಮತ್ತು ಮುಕ್ಕಣ್ಣೇಶ್ವರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಆರ್ಥಿಕ ಸಾಕ್ಷರತಾ ಆಂದೋಲನ ಕಾರ್ಯಕ್ರಮವನ್ನು ಬೇಲೂರು ತಾಲೂಕಿನ ಹುಲುಗುಂಡಿ ಗ್ರಾಮ ಪಂಚಾಯತಿ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರು ಪ್ರಾದೇಶಿಕ ಕಚೇರಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಜಿ.ಆರ್. ಚಿಂತಾಲ ಇಂದಿಗೂ ಸಹ ಕೇವಲ ಶೇಕಡ 60 ರಷ್ಟು ಉಳಿತಾಯ ಖಾತೆ ತೆರೆದಿದ್ದು, ಇನ್ನೂ ಶೇಕಡ 40 ರಷ್ಟು ಕುಟುಂಬಗಳು ಬ್ಯಾಂಕ್ ಖಾತೆ ಹೊಂದಿಲ್ಲ.
ಆದ್ದರಿಂದ ಪ್ರತಿ ಸದಸ್ಯರೂ ಕಡ್ಡಾಯವಾಗಿ ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆದು ಆರ್ಥಿಕ ಸೇರ್ಪಡೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರಾದ ಮಂಗಳ ಮಾತನಾಡಿ, ಪ್ರತಿ ಹಳ್ಳಿಯಲ್ಲಿಯೂ ಜಂಟಿ ಬಾಧ್ಯತೆ ಗುಂಪು ಹಾಗೂ ರೈತ ಕೂಟಗಳನ್ನು ರಚನೆ ಮಾಡಿ ನಿಮ್ಮ ಗ್ರಾಮದ ರೈತರಿಗೆ ಕೃಷಿ ಬಗ್ಗೆ ತಜ್ಞರನ್ನು ಕರೆಸಿ ತರಬೇತಿ ನೀಡಿದರೆ ಆ ತರಬೇತಿ ವೆಚ್ಚವನ್ನು 5000 ರು. ಗಳವರೆಗೂ ನಮ್ಮ ಬ್ಯಾಂಕ್ ನೀಡುತ್ತದೆ ಎಂದರು.
ಹಾಸನ ಕಾವೇರಿ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ ವ್ಯವ ಸ್ಥಾಪಕ ಕೆ.ಬಿ.ಮಹದೇವಪ್ಪ ಮಾತನಾಡಿ ಇಂದು ಪ್ರತಿ ಹಳ್ಳಿಗಳಲ್ಲಿ ಖಾಸಗಿ ಸಂಸ್ಥೆಗಳು ಬಂದು ಆಮಿಷ ತೋರಿಸಿ ಸಾಲ ನೀಡಿ ಹೆಚ್ಚಿನ ಬಡ್ಡಿ ವಿಧಿಸಿ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ಆದ್ದರಿಂದ ರೈತರು ಹಾಗೂ ಸಂಘದ ಮಹಿಳೆಯರು ಎಂದೂ ಆಮಿಷಗಳಿಗೆ ಬಲಿಯಾಗದೆ ಸರ್ಕಾರದ ಬ್ಯಾಂಕ್ಗಳಲ್ಲಿ ವ್ಯವಹಾರ ನಡೆಸಿರಿ. ನಮ್ಮ ಬ್ಯಾಂಕಿನಲ್ಲಿ ರೈತರಿಗಾಗಿ ಶೇ. 3 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು, ಈ ಸಾಲವನ್ನು ಪ್ರತಿ ವರ್ಷ ಸರಿಯಾಗಿ ರಿನಿವಲ್ ಮಾಡಿಸಿ ಸಾಲದ ಸದುಪ ಯೋಗವನ್ನು ಪಡೆಯುವಂತೆ ಸಲಹೆ ನೀಡಿದರು.
ಹಾಗೆಯೇ ಯಾವುದೇ ಬ್ಯಾಂಕ್ ನೀಡದ ಹೆಚ್ಚು ಬಡ್ಡಿಯನ್ನು ನಿಮ್ಮ ಠೇವಣಿ ಮೇಲೆ ನೀಡಲು ಹೊಸದಾಗಿ ಕಾವೇರಿ ಲಕ್ಷ್ಮಿ ಎಂಬ ಹೊಸ ಠೇವಣಿ ಯೋಜನೆಯನ್ನು ಜಾರಿಗೆ ತಂದಿದೆ.
ಈ ನೂತನ ಯೋಜನೆಯಲ್ಲಿ ನೀವು ಹಣ ತೊಡಗಿಸಿದರೆ ಕೇವಲ 7 ವರ್ಷ 3 ತಿಂಗಳಲ್ಲಿ ನಿಮ್ಮ ಹಣ ದ್ವಿಗುಣ ವಾಗುತ್ತದೆ. ಆದ್ದರಿಂದ ನೀವು ಹಣ ವನ್ನು ಕಾವೇರಿ ಲಕ್ಷ್ಮಿ ಯೋಜನೆಯಲ್ಲಿ ತೊಡಗಿಸುವಂತೆ ಹೇಳಿದರು.
ಆರ್ಥಿಕ ಸಾಕ್ಷರತಾ ಆಂದೋಲನದ ಬಗ್ಗೆ ಕಲಾವಿದರಿಂದ ಬೀದಿ ನಾಟಕ ಏರ್ಪಡಿಸಲಾಗಿತ್ತು. ಕಾವೇರಿ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಆರ್.ಸಿ.ಶಿವಕುಮಾರ್, ಹಗರೆ ಬ್ಯಾಂಕ್ ವ್ಯವಸ್ಥಾಪಕ ಆರ್.ಎಂ. ಕುಮಾರಸ್ವಾಮಿ, ಗ್ರಾಮ ಪಂಚಾಯತಿ ಅಧ್ಯಕ್ಷ ರಂಗೇಗೌಡ, ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಗಂಗರಾಜೇಗೌಡ, ಇತರರು ಭಾಗವಹಿಸಿದ್ದರು.
ಸಂಸ್ಥೆಯ ನಿರ್ಮಲಾ ಸ್ವಾಗತಿಸಿದರು. ವ್ಯವಸ್ಥಾಪಕ ಆರ್.ಎಂ.ಕುಮಾರಸ್ವಾಮಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

