ಹಾಸನ

ಜನಪರ ಆಡಳಿತಕ್ಕೆ ಕಾಂಗ್ರೆಸ್ ಬೆಂಬಲಿಸಿ

Published On :
ಜಾವಗಲ್: ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳನು ಗುರುತಿಸಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನು ಬೆಂಬಲಿಸಿ ಕಾಂಗ್ರೆಸ್ ಅಭ್ಯರ್ಥಿಯಾದ ತಮ್ಮನು ಆಯ್ಕೆ ಮಾಡಿ ಜಿಲ್ಲೆಯ ಅಭಿವೃದ್ಧಿ ಮತ್ತು ಜನ ಸೇವೆ ಮಾಡಲು ತಮಗೆ ಮತ ನೀಡುವಂತೆ ಕಾಂಗ್ರಸ್ ಅಭ್ಯರ್ಥಿ ಎ. ಮಂಜು ಮನವಿ ಮಾಡಿದರು. 
ಜಾವಗಲ್‌ನಲ್ಲಿ ಸೋಮವಾರ ಚುನಾವಣಾ ಪ್ರಚಾರ ಮಾಡುವ ಸಂದರ್ಭದಲ್ಲಿ ಮಾತನಾಡಿದ ಅವರು, ಎಚ್.ಡಿ. ದೇವೇಗೌಡರು ಮಂತ್ರಿಯಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ, ರಾಜ್ಯ ಸಭೆ ಮತ್ತು ಲೋಕಸಭೆ ಸದಸ್ಯರಾಗಿ ಹಾಗೂ ದೇಶದ ಪ್ರಧಾನಮಂತ್ರಿಯಾದರು.
ಇನು, ಅವರ ಮಗ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಮತ್ತೊಬ್ಬ ಮಗ ಎಚ್.ಡಿ. ರೇವಣ್ಣ ಮಂತ್ರಿಯಾಗಿ ಸಾಕಷ್ಟು ವರ್ಷ ಅಧಿಕಾರ ಅನುಭವಿಸಿದ್ದರೂ ಜಿಲ್ಲೆಯ ಪ್ರಗತಿಗೆ ಶ್ರಮಿಸದೆ ತಮ್ಮ ಕುಟುಂಬ ಮತ್ತು ಸಂಬಂಧಿಕರ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆಂದು ಟೀಕಿಸಿದರು. 
ಸಿಎಂ ಬಗ್ಗೆ ಹೊಟ್ಟೆಕಿಚ್ಚು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಕೂಡಲೆ ರು. 1ಗೆ 1 ಕೆಜಿಯಂತೆ ತಿಂಗಳಿಗೆ ಒಂದು ಬಡಕುಟುಂಬಕ್ಕೆ 30 ಕೆಜಿ ಅಕ್ಕಿ ನೀಡುವ ಯೋಜನೆ ಜಾರಿಗೆ ತಂದರು. ಅಲ್ಲದೇ, ಕ್ಷೀರ ಭಾಗ್ಯ, ರು. 3 ಲಕ್ಷಗಳವರೆಗೆ ಬಡ್ಡಿರಹಿತ ಸಾಲ, ಎಸ್ಸಿ ಎಸ್ಟಿ, ಅಲ್ಪಸಂಖ್ಯಾತರ ಸಾಲಾ ಮನಾ ಯೋಜನೆ ಜಾರಿಗೆ ತಂದಿದ್ದಾರೆ. ಜಿಲ್ಲೆಯ ಬೇಲೂರು, ಅರಸೀಕೆರೆ ತಾಲ್ಲೂಕುಗಳ ಕೆರೆ ಕಟ್ಟೆಗಳಿಗೆ ನೀರಾವರಿ ಒದಗಿಸುವ ಎತ್ತಿನ ಹೊಳೆ ಯೋಜನೆ ಜಾರಿಗೆ ತಂದಿದ್ದಾರೆ. ಅಭಿವೃದ್ಧಿ ಕಾರ್ಯ ಸಹಿಸದ ದೇವೇಗೌಡರು ಈಗ ಎತ್ತಿನಹೊಳೆ ಯೋಜನೆ ಅವೈಜ್ಞಾನಿಕ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು. 
ನೀರಿಗಾಗಿ ಪ್ರಾಮಾಣಿಕ ಪ್ರಯತ: ಜಾವಗಲ್ ಹೋಬಳಿ ಸೇರಿದಂತೆ ಅರಸೀಕೆರೆ ಮತ್ತು ಬೇಲೂರು ತಾಲೂಕಿನ ಜನತೆ ನೀರಾವರಿ ಸೌಲಭ್ಯವಿಲ್ಲದೆ ಬವಣೆಪಡುತ್ತಿದ್ದು. ಇದನು ತಪ್ಪಿಸಿ ನೀರಾವರಿ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ ಮಾಡುವುದಾಗಿ ತಿಳಿಸಿದರು. ಮಂಗಳೂರು ಮತ್ತು ಶಿವಮೊಗ್ಗ ಸಾಕಷ್ಟು ಅಭಿವೃದ್ಧಿ ಕಂಡರೂ ಹಾಸನ ಅಭಿವೃದ್ಧಿಯಲ್ಲಿ ಹಿನಡೆಯಾದಿರುವುದಕ್ಕೆ ದೇವೇಗೌಡರೇ ಕಾರಣ ಎಂದರು. 
ಜಾವಗಲ್, ಹಳೇಬೀಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸಿ ನಾಗರಾಜು, ಬೇಲೂರು ಪುರಸಭಾಸದಸ್ಯ ಬಿಎಲ್ ಧರ್ಮೇಗೌಡ, ಜಿಲ್ಲಾ ಸೇವಾದಳ ಅಧ್ಯಕ್ಷ ಜೆಎಸ ಶ್ರೀಕಂಠಯ್ಯ ಮಾತನಾಡಿದರು. ಶಾಸಕ ವೈ.ಎನ್. ರುದ್ರೇಶಗೌಡ, ರಾಜ್ಯಸಭೆ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ, ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, ಡಿ ಮಲ್ಲೇಶ್ ಬಿಕೆ ಚಂದ್ರಕಲಾ, ಬಿ. ಶಿವರುದ್ರಪ್ಪ, ಎಚ್.ಆರ್. ರಾಜು ಭಾಗವಹಿಸಿದ್ದರು. ಸಭೆಗೆ ಮುನ ದರ್ಗಾದಿಂದ ಹಳೇ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಲಾಯಿತು. ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.