ಗೌಡರ ಸಂಬಂಧಿಗಳಿಂದಲೂ ಜಿಲ್ಲೆಯಲ್ಲಿ ದರ್ಬಾರು: ಮಂಜು
Published On :
ಚನ್ನರಾಯಪಟ್ಟಣ: ದೇವೇಗೌಡ ಮತ್ತು ಅವರ ಮಕ್ಕಳು ಮಾತ್ರ ಜಿಲ್ಲೆಯನ್ನು ಆಳ್ವಿಕೆ ಮಾಡಲು ಮುಂದಾಗದೆ ಅವರ ಸಂಬಂಧಿಕರೂ ಕೂಡ ಆಳ್ವಿಕೆ ಮಾಡಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಆರೋಪಿಸಿದರು.
ರೈತರಿಂದ ಸ್ಥಾಪನೆಯಾದ ಕಾರ್ಖಾನೆಯನ್ನು ಕಮಿಷನ್‌ಗಾಗಿ ಗುತ್ತಿಗೆ ನೀಡಿದರಲ್ಲದೆ ಅದರ ಆಸ್ತಿಯನ್ನು ಲಪಟಾಯಿಸಲು ಮುಂದಾದಾಗ ತಮ್ಮ ಸರ್ಕಾರ ಅದನ್ನು ತಡೆ ಹಿಡಿದಿದೆ ಎಂದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಆಸ್ತಿ ಪಟ್ಟಣದ ಹೊರವಲಯದಲ್ಲಿದ್ದು, ಆ ಪ್ರದೇಶದಲ್ಲಿ ಶಿಕ್ಷಣ ಟ್ರಸ್ಟ್ ತೆರೆಯುವ ಉದ್ದೇಶವನ್ನು ಮುಂದಿಟ್ಟುಕೊಂಡು 17ಎಕರೆ ಜಮೀನಿನಲ್ಲಿ 5 ಎಕರೆ ಪ್ರದೇಶವನ್ನು ರಿಜಿಸ್ಟರ್ ಮಾಡಿಸಿಕೊಂಡಿದ್ದರು. ಅದನ್ನು ತಡೆದು ಸರ್ಕಾರದ ಮಟ್ಟದಲ್ಲಿ ವಜಾ ಮಾಡಿಸಲಾಗಿದೆ ಎಂದು ತಿಳಿಸಿದರು. ಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯರು ಸೇರಿಕೊಂಡಂತೆ ಶಾಸಕ ಸಿ.ಎನ್. ಬಾಲಕೃಷ್ಣ ಅವರು ಟ್ರಸ್ಟ್ ತೆರೆದಿರುವ ನೆಪ ತೋರಿ ಆಸ್ತಿಯನ್ನು ಲಪಟಾಯಿಸಲು ಎಚ್.ಜಿ. ರಾಮಕೃಷ್ಣ ಹೆಸರಿನಲ್ಲಿ ರಿಜಿಸ್ಟಾರ್ ಮಾಡಿಸಿದ್ದು, ಈ ಬಗ್ಗೆ ಸರ್ವ ಸದಸ್ಯರ ಅಭಿಮುತ ಮುಖ್ಯ ಎಂಬ ಕಾರಣವನ್ನಿಟ್ಟು ಟ್ರಸ್ಟ್‌ಗೆ ನೀಡಿದ್ದ ಆಸ್ತಿಯನ್ನು ಕಾರ್ಖಾನೆಗೆ ವಾಪಸ್ ಮಾಡಲಾಗಿದೆ ಎಂದು ತಿಳಿಸಿದರು.
ಶಾಸಕ ಸಿ.ಎನ್. ಬಾಲಕೃಷ್ಣ ಮುಗ್ಧರಂತೆ ಜನತೆ ಮುಂದೆ ಮಾತನಾಡುತ್ತಾರೆ. ಆದರೆ ಅವರು 2007ರಿಂದ 2009ರವಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪಶ್ಚಿಮಘಟ್ಟ ಅಭಿವೃದ್ಧಿಗೆ ಮಂಜೂರಾದ ಹಣವನ್ನು ತಾಲೂಕಿಗೆ ವರ್ಗಾಯಿಸಿ ಯಾವ ಕಾರ್ಯಕ್ರಮ ರೂಪಿಸದೆ ವಂಚಿಸಿದ್ದಾರೆ. ಈ ಬಗ್ಗೆ ಲೋಕಾಯುಕ್ತ ಪೊಲೀಸರಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ. ಲೋಕಸಭಾ, ಹಾಗೂ ವಿಧಾನಸಭಾ ಸದಸ್ಯರ ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸಲು ಅನುದಾನವನ್ನು ಹಂಚಿಕೆ ಮಾಡಿ ಯಾವ ಕಾಮಗಾರಿ ಮಾಡಿಸದೆ ಕೋಟಿಗಟ್ಟಲೆ ಹಣವನ್ನು ಲಪಟಾಯಿಸಿದ್ದಾರೆ ಎಂದು ತಿಳಿಸಿದರು.
ಕೆಪಿಸಿಸಿ ವೀಕ್ಷಕ ಅಶ್ವಿನ್‌ಕುಮಾರ್ ರೈ, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

