ಹಾಸನ

ಪತ್ನಿಯಿಂದ ಕುಡುಕ ಗಂಡನ ಕೊಲೆ

Published On :

ಅರಕಲಗೂಡು: ಕುಡುಕ ಗಂಡನ ಹಿಂಸೆ ತಾಳಲಾರದೇ ಬಸವಳಿದಿದ್ದ ಪತ್ನಿ ಪತಿಯನ್ನೇ ಹೊಡೆದು ಕೊಲೆಗೈದಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.ದಿನನಿತ್ಯದ ಅವನ ಕಿರುಕುಳದಿಂದ ಸ್ವತಃ ತಂದೆಯೂ ಬೇಸತ್ತಿದ್ದು, ಸೊಸೆಯ ಈ ಕೃತ್ಯಕ್ಕೆ ಮೃತನ ತಂದೆಯೂ ಕೈಜೋಡಿಸಿದ್ದಾನೆ.
ಈ ಘಟನೆ ತಾಲೂಕಿನ ಬಸವನಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಮಂಜೇಗೌಡ (38) ಕೊಲೆಯಾದ ವ್ಯಕ್ತಿಯಾಗಿದ್ದು, ಪ್ರತಿದಿನ ಕುಡಿತ ಮತ್ತು ಇಸ್ಪೀಟ್ ಆಟದ ದಾಸನಾಗಿದ್ದ.ಇತ್ತೀಚಿಗಷ್ಟೇ ಖಾಸಗಿ ಕಂಪೆನಿಯೊಂದು ಮೈಸೂರಿಗೆ ಗ್ಯಾಸ್ ಪೈಪ್ ಮಾಡುವ ಸಂಬಂಧ ಈತನ ಜಮೀನು ಸ್ವಾಧೀನಪಡಿಸಿಕೊಂಡು ಆತನಿಗೆ ಪರಿಹಾರ ಹಣವನ್ನು ಇತ್ತೀಚಿಗಷ್ಟೇ ನೀಡಿತ್ತು. ಬಂದ ಹಣವನ್ನು ಕೊಡುವಂತೆ ಪೀಡಿಸಿ ಆಗಿಂದಾಗ್ಗೆ ಅಲ್ಪ ಸ್ವಲ್ಪ ಹಣ ಪಡೆದಿದ್ದ ಮಂಜೇಗೌಡ ಬಂದ ಹಣವನ್ನೆಲ್ಲಾ ಕುಡಿದು, ಮೋಜಿಗೆ ಕಳೆಯುತ್ತಿದ್ದ. ಕುಡಿದು ಮನೆಗೆ ಬಂದು ಹೆಂಡತಿ, ಅಪ್ಪ ಮತ್ತು ಮಕ್ಕಳ ಮೇಲೆ ತೀವ್ರ ಹಲ್ಲೆ ಮಾಡುತ್ತಿದ್ದ. ಪದೇ ಪದೇ ಹಣಕ್ಕಾಗಿ ತನ್ನ ತಂದೆಯನ್ನು ಪೀಡಿಸುತ್ತಿದ್ದ ಮಂಜೇಗೌಡನ ಬಗ್ಗೆ ರೋಸಿ ಹೋಗಿದ್ದ ಕುಟುಂಬದ ತಂದೆ ಅಣ್ಣೇಗೌಡ, ತಾಯಿ ಜಯಮ್ಮ ಮತ್ತು ಮಂಜೇಗೌಡನ ಪತ್ನಿ ಪುಟ್ಟಾಮಣಿಯ ತಮ್ಮ ತೋಪೇಗೌಡ ಎಲ್ಲರೂ ಸೇರಿ ರಾತ್ರಿ ಅವನು ಮನೆಗೆ ಬಂದ ಕೂಡಲೇ ತೆಂಗಿನ ಮರಕ್ಕೆ ಕಟ್ಟಿಹಾಕಿ ಕಾಲನ್ನು ಮಚ್ಚಿನಿಂದ ಕಡಿದು, ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ತಮ್ಮ ಮೇಲೆ ಆರೋಪ ಬರಬಾರದು ಎಂಬ ಕಾರಣಕ್ಕಾಗಿ ಮನೆಯಿಂದ ಸ್ವಲ್ಪ ದೂರದವರೆಗೆ ಮೃತನ ಶವವನ್ನು ಅದೇ ಗ್ರಾಮದ ಹೊರಭಾಗದಲ್ಲಿ ಮರದ ಕೆಳಗೆ ಎಸೆದು ಬಂದಿದ್ದಾರೆ.
ಶವ ಪತ್ತೆಯಾದ ಪೊಲೀಸರಿಗೆ ಕುಟುಂಬದವರ ಮೇಲೆ ಅನುಮಾನ ಬಂದಿತ್ತು. ಈ ಹಿನ್ನೆಯಲ್ಲಿ ತನಿಖೆ ಮಾಡಿದ ಪೊಲೀಸರಿಗೆ ನೆರವಾದ ಪೊಲೀಸ್ ನಾಯಿ ಕೊಲೆಗಡುಕನ್ನು ಪತ್ತೆ ಮಾಡಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.