ಹಾಸನ

ಶೇ. 73ರಷ್ಟು ರಕ್ತದ ಕೊರತೆ

Published On :

ಚನ್ನರಾಯಪಟ್ಟಣ: ಇತ್ತೀಚಿನ ದಿನಗಳಲ್ಲಿ ಜನತೆ ಆರೋಗ್ಯ ಕಳೆದುಕೊಳ್ಳುತ್ತಿರುವುದರಿಂದ ಶೇ.73ರಷ್ಟು ರಕ್ತದ ಕೊರತೆಯಿದೆ ಎಂದು ಹಾಸನದ ರಾಜೀವ್ ನರ್ಸಿಂಗ್ ಹೋಂನ  ಡಾ. ನಿತಿನ್ ತಿಳಿಸಿದರು.
ತಾಲೂಕಿನ ವೆಸ್ಟ್‌ಹಿಲ್ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಆಧುನಿಕತೆ ಬೆಳದಂತೆ ಜನತೆ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿರುವುದರಿಂದ ಆಸ್ಪತ್ರೆ ಸೇರುವ ರೋಗಿಗಳಲ್ಲಿ ಬಹುತೇಕ ಮಂದಿಗೆ ರಕ್ತದ ಕೊರತೆ ಕಾಣುತ್ತಿರುವುದರಿಂದ ಶೇ.73ರಷ್ಟು ಮಂದಿಗೆ ರಕ್ತದ ಅವಶ್ಯಕತೆ ಕಾಣುತ್ತಿದೆ ಎಂದು ತಿಳಿಸಿದರು.
ಆಧುನಿಕ ತಂತ್ರಜ್ಞಾನ ಏನೆಲ್ಲಾ ಸಂಶೋಧನೆ ನಡೆಸಿದೆ.
ಅಗತ್ಯಕ್ಕೂ ಹೆಚ್ಚಿನ ವಸ್ತುಗಳನ್ನು ಕಂಡುಹಿಡಿದರೂ, ರಕ್ತವನ್ನು ಬಿಟ್ಟು ಅದಕ್ಕೆ ಪರ್ಯಾಯವಾಗಿ ಯಾವ ಔಷಧಿ ಕಂಡುಹಿಡಿಯದಿರುವುದರಿಂದ ರಕ್ತವನ್ನು ಮಾತ್ರ ಮನುಷ್ಯನೇ ನೀಡಬೇಕಾಗಿದೆ. ಹಾಗಾಗಿ, ರಕ್ತದ ಅವಶ್ಯಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ವಿವರಿಸಿದರು.
ಕೊರತೆಯಿದೆ: 18ರಿಂದ 50ವಯಸ್ಸಿನವರಲ್ಲಿ ಆರೋಗ್ಯವಂತರಾಗಿರುವ ಎಲ್ಲರೂ ರಕ್ತವನ್ನು ನೀಡಬಹುದಾಗಿದೆ ಎಂದ ಅವರು, ಇದರಲ್ಲಿ ಯಾವುದೇ ವರ್ಣಬೇದವಿಲ್ಲ.
ಆದರೆ, ತಮ್ಮಲ್ಲಿ ಹಲವು ಮೂಡನಂಬಿಕೆಗಳಿಂದ ರಕ್ತವನ್ನು ನೀಡಲು ಮುಂದಾಗದಿರುವುದರಿಂದ ಕೆಲವರು ರಕ್ತದ ಕೊರತೆಯಿಂದ ಪ್ರಾಣಬಿಡುತ್ತಿದ್ದಾರೆ ಎಂದು ತಿಳಿಸಿದರು.
ಮೂಢನಂಬಿಕೆ: ಮನುಷ್ಯ ಪ್ರತಿ ಮೂರು ತಿಂಗಳಿಗೊಮ್ಮೆ 350 ಮಿ.ಲೀ ರಕ್ತವನ್ನು ದಾನ ಮಾಡಬಹುದಾಗಿದ್ದು, ರಕ್ತ ನೀಡುವುದರಿಂದ ಆರೋಗ್ಯ ಹಾಳಾಗುತ್ತದೆ. ದಪ್ಪ ಅಥವಾ ಸಣ್ಣದಾಗುತ್ತಾರೆ ಎಂಬ ಮೂಡನಂಬಿಕೆಯ ಮಾತಿಗೆ ಮರುಳಾಗದೆ ರಕ್ತದ ಗುಂಪು ತಿಳಿದು ರಕ್ತದಾನ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಡಾ. ರವಿ ಮಾತನಾಡಿ, ರಕ್ತದಾನದಿಂದ ಎಷ್ಟೋ ಮಂದಿಯ ಪ್ರಾಣವನ್ನು ಪರೋಕ್ಷವಾಗಿ ಉಳಿಸಿದ ಕೀರ್ತಿಗೆ ಪಾತ್ರರಾಗುತ್ತಾರೆ. ಮನುಷ್ಯ ತಾನು ಎಷ್ಟು ಬಾರಿಯಾದರೂ ರಕ್ತ ನೀಡಿದರೆ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಾಣುವುದಿಲ್ಲ ಎಂದು ತಿಳಿಸಿದರು.
ಕಾಲೇಜು ಪ್ರಾಂಶುಪಾಲರಾದ ಮಂಜುನಾಥ್, ಮುಖ್ಯ ಶಿಕ್ಷಕ ಶಾಮ್‌ಸುಂದರ್, ಮೋಹನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.