ಹೊಂಗ್ಯಮ್ಮ ದೇವಿಗೆ ಮಧುವಣಿಗೆ ಶಾಸ್ತ್ರ
ಅರಸೀಕೆರೆ: ತಾಲೂಕಿನ ಭೈರಾಂಬುದಿ ಹೊಂಗ್ಯಮ್ಮದೇವಿ ರಥೋತ್ಸವ ಏ. 11ರಂದು ಶುಕ್ರವಾರ ಬೆಳಗ್ಗೆ ನಡೆಯಲಿದ್ದು, ಜಾತ್ರೆಯ ನಿಮಿತ್ತ ಇತ್ತೀಚೆಗೆ ಸಂಕೋಡನಹಳ್ಳಿ ಗ್ರಾಮದಲ್ಲಿ ಶ್ರೀ ದೇವಿಯವರಿಗೆ ಮದುವಣಿಗೆಯ ಶಾಸ್ತ್ರ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ದಿ. ರಾಮೇಗೌಡರ ಪುತ್ರ ಪಂಚಾಕ್ಷರಿಯವರ ಮನೆಯಿಂದ ಹೊಂಗ್ಯಮ್ಮ ದೇವಿ, ಮಲ್ಲಿಗೆಮ್ಮ, ಚೆಲುವರಾಯಸ್ವಾಮಿ, ಧೂತರಾಯ ಸ್ವಾಮಿ ಹಾಗೂ ರಂಗನಾಥಸ್ವಾಮಿಯವರನ್ನು ಊರ ಮುಂಭಾಗದಲ್ಲಿರುವ ಕಲ್ಯಾಣಿಗೆ ಕರೆತಂದ ಮುತ್ತೈದೆಯರು ವಿಶೇಷ ಪೂಜೆ ನೆರವೇರಿಸಿದರು.
ನಂತರ ನಡೆಮುಡಿಯ ಮೇಲೆ ಕಳಶ ಹೊತ್ತ ತಂಡದೊಂದಿಗೆ ಹೊಂಗ್ಯಮ್ಮ ದೇವಿಯ ವಿಶೇಷ ಜಲೋತ್ಸವ, ಜಲಾಭಿಷೇಕ, ಪುಣ್ಯಾರ್ಚನೆ ಸೇರಿದಂತೆ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡುವ ಮೂಲಕ ಕಾರ್ಯಕ್ರಮ ನೆರವೇರಿಸಲಾಯಿತು.
ನಂತರ ದೇವರುಗಳನ್ನು ಗ್ರಾಮದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯುವ ಮೂಲಕ ಜಾತ್ರೆಗೆ ವಿದ್ಯುಕ್ತ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಸುತ್ತಮುತ್ತಲ ಗ್ರಾಮದ ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು.
ಸಡಗರದಿಂದ ನಡೆದ ದೇವಿರಮ್ಮ ಜಾತ್ರೆ
ಆಲೂರು: ತಾಲೂಕಿನ ಪಾಳ್ಯ ಹೋಬಳಿ ಚಿಕ್ಕ ಕಣಗಾಲು ಹೊಸಳ್ಳಿ ಗ್ರಾಮದೇವತೆ ದೇವಿರಮ್ಮನವರ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಡಗರ ಸಂಭ್ರಮದ ನಡುವೆ ಬುಧವಾರ ಮಧ್ಯಾಹ್ನ ನಡೆಯಿತು.
ಜಾತ್ರೆಯ ಅಂಗವಾಗಿ ಗ್ರಾಮದ ಬೀದಿಗಳನ್ನು ತಳಿರು ತೋರಣಗಳಿಂದ ಶಣಂಗರಿಸಿ, ಹಳ್ಳಿ ಭಾಗದ ಜನಪದ ಸಂಸ್ಕತಿಯ ಪ್ರತೀಕವಾದ ಈ ಜಾತ್ರೆಗೆ ಸುತ್ತಮುತ್ತಲ ತಾಲೂಕುಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಕಾಣಿಕೆ ಸಲ್ಲಿಸಿದರು.
ಗ್ರಾಮದ ದೇವಾಲಯದಿಂದ ದೇವಿಯನ್ನು ಊರ ಮುಂದಿನ ರಥ ಬೀದಿಗೆ ಮಂಗಲವಾದ್ಯ, ಡೊಳ್ಳುಕುಣಿತ ಹಾಗೂ ಜಾನಪದ ಕಲಾತಂಡಗಳ ಸಮೇತ ಕರೆತರಲಾಯಿತು. ನಂತರ ದೇವಿಯನ್ನು ರಥದಲ್ಲಿ ಕುಳ್ಳಿರಿಸಿ ಭಕ್ತರ ಜಯ ಘೋಷದೊಂದಿಗೆ ರಥ ಎಳೆಯಲಾಯಿತು.
ರಥ ಎಳೆಯುತ್ತಿದ್ದಂತೆ ನವ ವಧು- ವರರು ಹಾಗು ಯುವಕ ಯುವತಿಯರು ರಥದ ಕಲಷಕ್ಕೆ ಬಾಳೆ ಹಣ್ಣು ತೂರಿ, ತಮ್ಮ ಭಕ್ತಿಯನ್ನು ಮೆರೆದರು. ಮಧ್ಯಾಹ್ನ 2ಕ್ಕೆ ಸಿಡಿ ಕಾರ್ಯಕ್ರಮ ಜರುಗಿತು ಹರಕೆ ಹೊತ್ತ ಭಕ್ತರನ್ನು ಸಿಡಿ ಕಂಬಕ್ಕೆ ಕಟ್ಟಿ ತಿರುಗಿಸುತ್ತಿದ್ದ ದೃಶ್ಯ ನೆರೆದಿದ್ದ ಭಕ್ತರನ್ನು ರೋಮಾಂಚನಗೊಳಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

