ಹಾಸನ

ಚೆನ್ನಕೇಶವ ಸ್ವಾಮಿ ದಿವ್ಯ ರಥೋತ್ಸವ

Published On :

ಬೇಲೂರು: ವಿಶ್ವ ವಿಖ್ಯಾತ ಬೇಲೂರು ಶ್ರೀ ಚೆನ್ನಕೇಶವಸ್ವಾಮಿಯ ನಾಡಿನ ದಿವ್ಯ ರಥೋತ್ಸವ ಸಹಸ್ರಾರು ಭಕ್ತರ ನಡುವೆ ಭಾನುವಾರ ಮಧ್ಯಾಹ್ನ ಅದ್ಧೂರಿಯಾಗಿ ನಡೆಯಿತು.    
ಶನಿವಾರ ನಡೆದ ದಿವ್ಯ ರಥೋತ್ಸವದ ಮರುದಿನ ಹಿಂದಿನ ಸಂಪ್ರದಾಯದಂತೆ ನಡೆಯುವ ನಾಡಿನ ರಥೋತ್ಸವವನ್ನು ಸಡಗರ ಸಂಭ್ರಮದಿಂದ ನಡೆಸಲಾಯಿತು. ಶನಿವಾರ ಸ್ವಸ್ಥಾನದಿಂದ ಚಲಿಸುವ ರಥವನ್ನು ಸಂಸ್ಕೃತ ಪಾಠಶಾಲಾ ಮುಂಭಾಗದಲ್ಲಿ ನಿಲ್ಲಿಸಿ ಪೂಜೆ ಸಲ್ಲಿಸಲಾಗುತ್ತದೆ. ನಂತರ 2ನೇ ದಿನದ ಆಚರಣೆಯನ್ನು ನಾಡಿನ ರಥೋತ್ಸವ ಎಂದು ಕರೆಯಲಾಗುತ್ತದೆ. ತಾಲೂಕಿನ ನಾನಾ ಗ್ರಾಮಗಳಿಂದ ಆಗಮಿಸುವ ನಾಡ ಪಟೇಲರು ಈ ಉತ್ಸವದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥ ಎಳೆಯಲು ಚಾಲನೆ ನೀಡಲಾಯಿತು. ನಂತರ ರಥವನ್ನು ದೇವಸ್ಥಾನದ ಸುತ್ತ 4 ಮೂಲೆಗಳಲ್ಲಿ ಎಳೆದು ಸ್ವಸ್ಥಾನಕ್ಕೆ ಸೇರಿಸುವ ಮೂಲಕ ಈ ಬಾರಿಯ ರಥೋತ್ಸವದ ಸಂಭ್ರಮ ಮಕ್ತಾಯಗೊಂಡಿತು. ಭಾನುವಾರ ನಡೆದ ನಾಡಿನ ರಥೋತ್ಸವ ಸಂದರ್ಭದಲ್ಲಿ ನಾನಾ ಸಂಘ ಸಂಸ್ಥೆಗಳು, ಜೈನ ಸಮುದಾಯದವರು ಪ್ರಸಾದ, ಮಜ್ಜಿಗೆ ಪಾನಕವನ್ನು ಭಕ್ತರಿಗೆ ನೀಡಲಾಯಿತು.

ಜಾವಗಲ್‌ನಲ್ಲಿ ನೀರಿಗೆ ಹಾಹಾಕಾರ
ಜಾವಗಲ್: ಜಾವಗಲ್ ಹೋಬಳಿಯ ಹಲವಾರು ಗ್ರಾಮಗಳಲ್ಲಿ ಹಿಂದೆಂದೂ ಕಾಣದಂತಹ ಜಲಕ್ಷಾಮ ಉಂಟಾಗಿದ್ದು, ಜನ-ಜಾನುವಾರುಗಳು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಈ ಬಗ್ಗೆ ತಾಲೂಕು ಆಡಳಿತ ವಸ್ತುಸ್ಥಿತಿ ಅರಿಯಲು ಹೋಬಳಿಯ ಕೆಲವು ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಘಟನೆ ನಡೆದಿದೆ.
ಐಎಎಸ್ ಪ್ರೊಬೇಷನರಿ ಅಧಿಕಾರಿ ರಾಮಚಂದ್ರ, ಅರಸೀಕೆರೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ  ಟಿ.ಎನ್. ಮೂರ್ತಿ, ಜಿಪಂ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಶೇಖರಪ್ಪ, ಹೋಬಳಿಯ ಉಪ್ಪಾರ ಕಾಳೇನಹಳ್ಳಿಗೆ ಭೇಟಿ ನೀಡಿದಾಗ ಅಲ್ಲಿನ ವಸ್ತುಸ್ಥಿತಿ ತಿಳಿದು ಮೂಕವಿಸ್ಮಿತರಾದರು.
ವೃದ್ಧ ಮಹಿಳೆ 15-20ದಿನ ಕಳೆದರೂ ನೀರು ಬರುವುದಿಲ್ಲ. ಅಡುಗೆ ಮಾಡಲು ತೊಂದರೆಯಾಗುತ್ತಿದ್ದು.10-15ದಿನಗಳ ಕಾಲ ಒಂದೇ ಬಟ್ಟೆ ಧರಿಸಬೇಕಾದ ಸ್ಥಿತಿಯನ್ನು ತಾನು ತೊಟ್ಟಿದ್ದ ಕೊಳಕು ಬಟ್ಟೆಯನ್ನು ತೋರಿಸಿದ್ದಾಗಿ ಇಓ ಸುದ್ದಿಗಾರರಿಗೆ ವಿವರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ ಜಾವಗಲ್ ಗ್ರಾಪಂ ನ ದ್ಯಾಮೇನಹಳ್ಳಿ ಹಟ್ಟಿ, ಹೊಸೂರು, ಬಂದೂರು ಗ್ರಾಪಂ ನ ಲಿಂಗ್ಲಾಪುರ, ಹೊಸೂರು, ಕೆಂಗನಹಳ್ಳಿ, ನಾಯಕರಹಟ್ಟಿ, ಕೋಡಿಹಳ್ಳಿ-ಧನಂಜಯಪುರ, ಉಂಡಿಗನಾಳು ಗ್ರಾಪಂನ ಉಂಡಿಗನಾಳು, ದೇಶಾಣಿ, ಡಿ. ಗೊಲ್ಲರಹಟ್ಟಿ, ಅರಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸ ಬಡಾವಣೆ, ತಾವರೆಹಳ್ಳಿ, ಚಿಕ್ಕಲಿಂಗನಹಳ್ಳಿ ಹಾಗೂ ಕೋಳಗುಂದ ಗ್ರಾಪಂ ಉಪ್ಪಾರಕಾಳೇನಹಳ್ಳಿ, ಮಾವುತನಹಳ್ಳಿಗಳಲ್ಲಿ ನೀರಿನ ತತ್ವಾರ ಅಧಿಕವಾಗಿದೆ.
ತಳಲೂರು ಸೇರಿದಂತೆ ಹಲವು ಹಳ್ಳಿಗಳಲ್ಲಿ 1000-1200ಅಡಿ ಆಳ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲವೆಂದು ವಿವರಿಸಿದರು.
ಸುಡುಬಿಸಿಲಿನ ತಾಪವು ಹೆಚ್ಚಾಗಿದ್ದು ಜನ-ಜಾನುವಾರುಗಳು ತತ್ತರಿಸುವಂತಾಗಿದೆ. ಉತ್ತಮ ಮಳೆ ಬಿದ್ದು ಪರಿಸ್ಥಿತಿ ಸುಧಾರಿಸುವ ತನಕ ಮೇಲಿನ ಎಲ್ಲಾ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನಿರಂತರವಾಗಿ ನೀರು ಸರಬರಾಜು ಮಾಡುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.