ಹಾಸನ

ರಾಮೋತ್ಸವದ ಪ್ರಯುಕ್ತ ಸಂಗೀತ ಕಾರ್ಯಕ್ರಮ

Published On :

ಹೊಳೆನರಸೀಪುರ: ಪಟ್ಟಣದ ಶ್ರೀ ಸೀತಾರಾಮ ಮಂದಿರದ ಆಶ್ರಯದಲ್ಲಿ ಶ್ರೀ ಏಕಾಂತರಾಮೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ರಾಮೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
ರಾಮೋತ್ಸವದ ಅಂಗವಾಗಿ ಇಲ್ಲಿನ ಮಹಿಳಾ ಹರಿದಾಸ ಸಂಘದ ಸದಸ್ಯರಾದ ಸುಧಾಮಣಿಗುರುರಾಜ್, ಭವಾನಿ ಪ್ರಹ್ಲಾದ್, ಪಾರ್ವತಮ್ಮ, ಇಂದಿರಾ ಬಾರಾಸು, ಪದ್ಮಿನಿ ಶ್ರೀನಿವಾಸ್, ವಾಸುಕಿ, ಮಧು ಹಾಗೂ ರಮಾಕಟ್ಟಿ ಇವರಿಂದ ದೇವರ ನಾಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ಏಕಾಂತರಾಮೇಶ್ವರ ದೇವಸ್ಥಾನದ ಸಂಚಾಲಕ ರಾಮಕೃಷ್ಣಯ್ಯ ಅವರನ್ನು ಸನ್ಮಾನಿಸಲಾಯಿತು.
 ಸಂಘದ ಅಧ್ಯಕ್ಷ ರಾಮಚಂದ್ರಪುತ್ತುರಾಯರು ಮಾತನಾಡುತ್ತಾ, ಇಂದಿನ ಕಾಲದಲ್ಲಿಯೂ ರಾಮೋತ್ಸವ ಮೊದಲಾದ ದೈವಿಕ ಆಚರಣೆಗಳು ಎಲ್ಲಾ ಭಕ್ತಾದಿಗಳಿಂದ ಯಶಸ್ವಿಯಾಗಿ ನೆರವೇರುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯದರ್ಶಿ ಬಾ.ರಾ. ಸುಬ್ಬರಾಯ ಮಾತನಾಡಿ, ಒಂದು ವಾರದಿಂದ ರಾಮೋತ್ಸವ ಕಾರ್ಯಕ್ರಮ ಯಶಸ್ವಿಯಾಗಲು ಸ್ಥಳೀಯ ಕಲಾವಿದರೆಲ್ಲರ ಸಹಕಾರ ಅತಿಮುಖ್ಯವಾಗಿತ್ತು ಎಂದರಲ್ಲದೇ, ಏಳು ದಿನಗಳೂ ಕೂಡ ಸಂಗೀತ, ಭಜನೆ, ಹರಿಕಥೆ ಮತ್ತು ದೇವರನಾಮಗಳ ಕಾರ್ಯಕ್ರಮಗಳು ಬಹಳ ಸೊಗಸಾಗಿ ಮೂಡಿಬಂದು ಪ್ರೇಕ್ಷಕರ ಮನಸೂರೆಗೊಳ್ಳಲು ಕಾರಣವಾಯಿತು ಎಂದರು.
ವೇದಿಕೆಯಲ್ಲಿ ದೇವಸ್ಥಾನದ ಅಧ್ಯಕ್ಷ ಎಂ.ಎಲ್. ರಾಮಚಂದ್ರಶೆಟ್ಟಿ, ಹೆಚ್.ವಿ ಭಗವಾನ್, ಪಟ್ಟಾಭಿರಾಮ, ಎಸ್. ವಿಶ್ವನಾಥ್, ಶ್ಯಾಮಲಾ ಭಗವಾನ್, ಅರ್ಚಕರಾದ ವೇ.ಭ್ರ.ಶ್ರೀ ವೆಂಕಟೇಶ್ ದೀಕ್ಷಿತರು ಉಪಸ್ಥಿತರಿದ್ದರು.
 ಬಾ.ರಾ.ಸುಬ್ಬರಾಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪಕ್ಕವಾದ್ಯದಲ್ಲಿ ಮೃದಂಗ ವಿದ್ವಾನ್ ಕೆ.ಆರ್. ವಿಜಯಕುಮಾರ್ ಮುತ್ತುರಾಯ ಹಾಗೂ ಹಾರ್ಮೋನಿಯಂ ವಿದ್ವಾನ್ ಗಿರೀಶ್ ಸಹಕರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.