ಸಂಘಟನಾತ್ಮಕ ಕಾರ್ಯದಿಂದ ಯಶಸ್ಸು: ಪ್ರೊ. ಪಾಟೀಲ್
ಬೇಲೂರು: ಸಂಘಟನಾತ್ಮಕವಾಗಿ ರೂಪಿಸುವ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದು ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಪ್ರೊ. ರಾಘವೇಂದ್ರ ಪಾಟೀಲ್ ಹೇಳಿದರು.
ಪಟ್ಟಣದ ಕಸಾಪ, ಸ್ವರಸುರಭಿ ಟ್ರಸ್ಟ್, ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ಸಂಯುಕ್ತವಾಗಿ ಎಸ್ಇಎಸ್ ಶಾಲಾ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಆನಂದಕಂದ ವಿರಚಿತ ಬನ್ನಿ ನಮ್ಮ ಹಾಡಿಗೆ ಭಾವಗೀತೆಗಳ 9ನೇ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತ ಎಂಬುದು ಮನುಷ್ಯನಿಗೆ ಅತ್ಯಮೂಲ್ಯವಾದ ವಸ್ತು. ಸಂಸ್ಕತಿ ಉಳಿವಿಗೆ ಸಂಗೀತ ಶಾಸ್ತ್ರವನ್ನು ಪೂರ್ಣ ಪ್ರಮಾಣದಲ್ಲಿ ತಿಳಿದಿರಬೇಕು ಎಂದರು.
ದೈಹಿಕ ತರಬೇತಿ ಶಾಸ್ತ್ರ ಮೈಗೂಡಿಸಿಕೊಂಡರೆ ನಮ್ಮ ಸಂಸ್ಕೃತಿ ನಾಶವಾ ಗುವುದಿಲ್ಲ. ಸಂಗೀತದಲ್ಲಿ ಅತಿ ಮುಖ್ಯವಾದ ಶಾಸ್ತ್ರೀಯ ಸಂಗೀತವಾಗಿದ್ದು, ಸಂಗೀತ ಲೋಕದಲ್ಲಿ ಇದಕ್ಕೆ ತನ್ನದೇ ಸ್ಥಾನಮಾನವಿದೆ. ಇಂದು ಸುಗಮ ಸಂಗೀತ ಆಧುನಿಕವಾಗಿ ಮನೋ ವಿಜ್ಞಾನಕ್ಕೆ ಎಲ್ಲಾ ವರ್ಗಕ್ಕೂ ಅಗತ್ಯವಾಗುತ್ತಿದೆ. ಸಂಗೀತ ಶಾಸ್ತ್ರ ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಲಾಗದಿದ್ದರೂ ಸುಗಮ ಸಂಗೀತವನ್ನು ಪ್ರತಿಯೊಬ್ಬರೂ ಕರಗತ ಮಾಡಿಕೊಳ್ಳ ಬಹುದು. ಈ ಸಂಗೀತದಿಂದ ಮನುಷ್ಯನ ಮನಸ್ಥಿತಿ ಉತ್ತಮವಾಗಿ ರಲು ಸಹಕಾರಿ ಆಗಲಿದೆ ಎಂದು ಹೇಳಿದರು.
ಸ್ವರ ಸುರಭಿ ಟ್ರಸ್ಟ್ ಅಧ್ಯಕ್ಷ ಶ್ರೀಧರ್ ಅಯ್ಯರ್ ಮಾತನಾಡಿ, ಕರ್ನಾಟಕದಲ್ಲಿ ಖ್ಯಾತನಾಮರಲ್ಲಿ ಮೊದಲಿಗೆ ಕುವೆಂಪು, ಬೇಂದ್ರೆ ನಂತರ ಆನಂದಕಂದರಾಗಿದ್ದಾರೆ ಎಂದರು.
ಎಸ್ಇಎಸ್ ವಿದ್ಯಾ ಸಂಸ್ಥೆ ಅಧ್ಯಕ್ಷ ಬಿ.ಕೆ. ಭಗವಾನ್, ಸಮನ್ವಯಾಧಿಕಾರಿ ನಾರಾಯಣ್, ಅಕ್ಷರ ದಾಸೋಹ ನಿರ್ದೇಶಕ ಹೇಮಂತರಾಜ್, ಕಸಾಪ ಅಧ್ಯಕ್ಷ ಬಿ.ಎನ್. ಆನಂದ್ ಮಾತನಾಡಿದರು. ಇದೇ ಸಂದರ್ಭದಲ್ಲಿ 80 ಮಹಿಳಾ ಶಿಬಿರಾರ್ಥಿಗಳು ಗಾಯನ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಇದೇ ವೇಳೆ ಬಿ.ಕೆ. ಭಗವಾನ್, ರಾಘವೇಂದ್ರ ಪಾಟೀಲ್ ಅವರನ್ನು ಗೌರವಿಸಲಾಯಿತು. ಖ್ಯಾತ ಕಾದಂಬರಿಕಾರ ಮಲ್ಲಿಕಾರ್ಜುನ ಹಿರೇಮಠ್, ಸಂಗೀತ ನಿರ್ದೇಶಕ ಮೃತ್ಯುಂಜಯ ದೊಡ್ಡವಾಡ, ನರಹರಿ ದೀಕ್ಷಿತ್, ಸಂಶೋಧಕ ಶ್ರೀವತ್ಸ ಎಸ್.ವಟಿ, ಕರವೇ ಅಧ್ಯಕ್ಷ ಚಂದ್ರಶೇಖರ್, ಕಸಾಪ ಮಾಜಿ ಅಧ್ಯಕ್ಷ ಅನಂತರಾಜೇ ಅರಸು, ಡಾ. ರಾಜ್ ಸಂಘದ ಅಧ್ಯಕ್ಷ ಬಿ.ಆರ್. ತೀರ್ಥಂಕರ್, ಮುಖ್ಯ ಶಿಕ್ಷಕಿ ಸುನಿತಾ, ಸಂಘಟನೆಕಾರ ಜಾವಗಲ್ ಪ್ರಸನ್ನ, ಕಸಾಪ ಗೌರವ ಕಾರ್ಯದರ್ಶಿ ಮಾ.ನ. ಮಂಜೇಗೌಡ, ಪ್ರಕಾಶ್ ಸೋಂಪುರ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

