ಹಾಸನ

ಎಲೆಕ್ಟ್ರಾನಿಕ್ಸ್ ವಸ್ತು ರಿಪೇರಿದಾರರ ದಿನಾಚರಣೆ

Published On :

ಹಾಸನ: ಎಲೆಕ್ಟ್ರಾನಿಕ್ಸ್ ಉಪಕರಣ ತಯಾರು ಮಾಡುವವರು ಸಾವಿರಾರು ಜನರಿದ್ದರೇ ಅದು ಕೆಟ್ಟು ಹೋದ ಸಮಯದಲ್ಲಿ ರಿಪೇರಿ ಮಾಡುವವರು ಕೆಲವೇ ಮಂದಿ ಇದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹಾಗೂ ಪತ್ರಕರ್ತ ಎಚ್.ಬಿ. ಮದನ್ ಗೌಡ ಅಭಿಪ್ರಾಯಪಟ್ಟರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಿಲ್ಲಾ ಎಲೆಕ್ಟ್ರಾನಿಕ್ಸ್ ಉಪಕರಣ ರಿಪೇರಿದಾರರ ಸಂಘದ ವತಿಯಿಂದ ಗುಗ್ಲಿಮೋ ಮಾರ್ಕೋನಿ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ಎಲೆಕ್ಟ್ರಾನಿಕ್ಸ್ ರಿಪೇರಿದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರೂ ಆ ವೃತ್ತಿಗೆ ಗೌರವ ಕೊಡುವುದು ಬಹಳ ಮುಖ್ಯ ಎಂದು ಕಿವಿಮಾತು ಹೇಳಿದರು.
ಸಲಹೆ: ತಮ್ಮ ತಮ್ಮ  ವೃತ್ತಿಯಲ್ಲಿ ಮೌಲ್ಯವನ್ನು ಕಾಪಾಡಿಕೊಳ್ಳಬೇಕು. ಉತ್ತಮ ಭಾವನೆ ಬೆಳೆಸಿಕೊಳ್ಳುವ ಮೂಲಕ ಒಂದು ಸಂಘಟನೆ ಬೆಳೆಯಲು ಎಲ್ಲರ ಸಹಕಾರ ಅತ್ಯಗತ್ಯ ಎಂದು ಸಲಹೆ ನೀಡಿದರು.
ನೆಮ್ಮದಿ: ಉಪಕರಣಗಳ ರಿಪೇರಿದಾರರು ತಮ್ಮ ವೃತ್ತಿಯಲ್ಲಿಯೇ ಸಮಯ ಕಳೆಯುವ ಕಾರಣ ಅವರು ಹೊರಗಿನ ಜ್ಞಾನ ಇರುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ಅವರು, ಸಂಘದ ಕಾರ್ಯಚಟುವಟಿಕೆ ಮೂಲಕ ಎಲ್ಲರ ಪರಿಚಯ ಆಗುವುದಲ್ಲದೇ ಮಾನಸಿಕ ನೆಮ್ಮದಿ ಕೂಡ ಲಭಿಸುತ್ತದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಆನಂದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಯುಗದಲ್ಲಿ ಡಿವಿಡಿ, ಎಲ್‌ಸಿಡಿ, ಸಿಸಿ ಕ್ಯಾಮೆರಾ ಸೇರಿದಂತೆ ಇತರೆ ಹೊಸ ಮಾದರಿಯ ಉಪಕರಣಗಳು ಜನತೆ ಕೈಗೆ ಸಿಗುತ್ತಿದೆ. ಅವಶ್ಯಕತೆಗೆ ತಕ್ಕಂತೆ ರಿಪೇರಿ ಮಾಡುವವರಿಗೂ ತರಬೇತಿ ಅಗತ್ಯವಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೆ ಮೊದಲು ಇತ್ತೀಚೆಗೆ ಸಾವನ್ನಪ್ಪಿದ ಜಹೀರ್ ಖಾನ್  ಆತ್ಮಕ್ಕೆ ಶಾಂತಿ ದೊರೆಯಲೆಂದು ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಕಾವೇರಿ ಎಲೆಕ್ಟ್ರಾನಿಕ್ಸ್ ಮಾಲೀಕ ಶಬ್ಬೀರ್ ಅಹಮದ್ ಹಾಗೂ ಹೊಳೆನರಸೀಪುರದ ಲಕ್ಷ್ಮೀ ಎಲೆಕ್ಟ್ರಾನಿಕ್ಸ್ ಮಾಲೀಕ ಮುರಳೀಧರ್ ಗುಪ್ತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್, ಹಾಸನ ಆಕಾಶವಾಣಿ ಉಪನಿರ್ದೇಶಕ ಪಿ.ಎನ್. ಸುಧಾಕರನ್, ಸಮಾಜ ಸೇವಕ ಅಗಿಲೆ ಯೋಗೇಶ್, ಜಾಹೀರ್ ಪಾಷಾ, ಸಂಘದ ಅಧ್ಯಕ್ಷ ಎ.ವಿ. ರಂಗಸ್ವಾಮಿ, ಉಪಾಧ್ಯಕ್ಷ ಹೆಚ್.ಎಸ್. ನಾಗರಾಜ್, ನಿರ್ದೇಶಕ ಮುರಳಿಧರ್ ಗುಪ್ತ, ಮಹೇಶ್ ಪೂಜಾರಿ, ಬಿ.ಪಿ.ಎಲ್. ಕುಮಾರ್ ಇತರರು ಇದ್ದರು. ನಾಗಪ್ಪಣ್ಣ ಸ್ವಾಗತಿಸಿದರು. ಧನುಶ್ರೀ ಪ್ರಾರ್ಥಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.