ಹಾಸನ

ಚೆಕ್‌ಪೋಸ್ಟ್‌ನಿಂದ ಅರಣ್ಯ ಸಿಬ್ಬಂದಿ ಅಪಹರಣ

Published On :

ಹನೂರು: ಮಲೆ ಮಹದೇಶ್ವರ ವನ್ಯಧಾಮ ಗಡಿ ಭಾಗದ ಪಾಲಾರ್ ಚೆಕ್‌ಪೋಸ್ಟ್‌ನಿಂದ ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿಯ ಅಪಹರಿಸಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಾಸುದೇವಮೂರ್ತಿ ದೂರು ನೀಡಿದ್ದಾರೆ.
ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿ ಜತೆ ತಾವು ತಪಾಸಣೆ ನಡೆಸುತ್ತಿದ್ದಾಗ ಶುಕ್ರವಾರ ಮಧ್ಯಾಹ್ನ 1.30ರ ಸಂದರ್ಭದಲ್ಲಿ ತಮಿಳುನಾಡಿನ ಬೈಕ್ ಸವಾರರು ಆಗಮಿಸಿದ್ದಾರೆ. ಗೇಟ್ ಹಾಕುವ ವೇಳೆ ಬೈಕ್ ಸವಾರರಿಗೆ ತಾಗಿದೆ. ಇದರಿಂದ ಅವರು ಗಲಾಟೆ ಮಾಡಿದ್ದು, ಸಿಬ್ಬಂದಿ ಜತೆ ಮಾತಿನ ಚಕಮಕಿ ನಡೆದಿದೆ. ಆಗ ಹಿಂದಿನಿಂದ ಬಂದ ತಮಿಳುನಾಡಿನ ಟೆಂಪೋದಲ್ಲಿದ್ದ ತಮಿಳರು ಕೆಳಗಿಳಿದು ಜಗಳ ಮಾಡಿದ್ದಾರೆ. ವಿಕೋಪಕ್ಕೆ ತಿರುಗಿ ಅರಣ್ಯ ರಕ್ಷಕ ರಕ್ಷಿತ್ ಮತ್ತು ಸಹಾಯಕ ನಂದೀಶ್‌ರನ್ನು ಟೆಂಪೋದಲ್ಲಿ ಎಳೆದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮುತ್ತತ್ತಿಯಲ್ಲಿ ಇಬ್ಬರು ನೀರುಪಾಲು
ಹಲಗೂರು: ಇಲ್ಲಿಗೆ ಸಮೀಪದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಈಜಲು ಹೋಗಿ ಲೋಕೇಶ (28), ಪ್ರದೀಪ(24) ಮೃತರಾದರು. ಇವರು ಬೆಂಗಳೂರಿನ ಮಲ್ಲಸಂದ್ರದವರು. ಲೋಕೇಶ ಹಾಲಿನ ವ್ಯಾಪಾರ ಮಾಡುತ್ತಿದ್ದು, ಪ್ರದೀಪ್ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಗುರುವಾರ 4 ಸ್ನೇಹಿತರು 2 ಬೈಕ್‌ನಲ್ಲಿ ಮುತ್ತತ್ತಿಗೆ ಬಂದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.