ಹಾಸನ

ಹೆಚ್ಚುವರಿ ಬಸ್ ಸಂಚಾರಕ್ಕೆ ಆಗ್ರಹಿಸಿ ಪ್ರತಿಭಟನೆ

Published On :

ಅರಸೀಕೆರೆ: ತಾಲೂಕಿನ ಕರಗುಂದ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜುಗಳಿಗೆ ಹೋಗಲು ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳು ನಿತ್ಯವೂ ಸಂಚರಿಸಬೇಕೆಂದು   ಒತ್ತಾಯಿಸಿ ನೂರಾರು ವಿದ್ಯಾರ್ಥಿಗಳು ಕರಗುಂದ ಗ್ರಾಮದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
 ಕರಗುಂದ ಬ್ಯಾಲದಕೆರೆ, ವಡೇರಹಳ್ಳಿ, ಮಾದಾಪುರ ಹಾಗೂ ಸುತ್ತಲಿನ ವಿದ್ಯಾರ್ಥಿಗಳು ಹಾಗು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಬಸ್‌ಗೆ ಬೇಡಿಕೆ: ಅರಸೀಕೆರೆಯಿಂದ ನಿತ್ಯ ಬೆಳಗಿನ ಸಮಯದಲ್ಲಿ 4 ಬಸ್ಸುಗಳನ್ನು ಹಾಗು ಸಂಜೆ 4 ಬಸ್ಸುಗಳನ್ನು ಅರಸೀಕೆರೆ, ಹಾರನಹಳ್ಳಿ ಮಾರ್ಗ ಕರಗುಂದ ವಡೆರಹಳ್ಳಿ ದೇಶಾಣಿ ಕಡೆಗೆ ಬಸ್ಸುಗಳನ್ನು ಬಿಡಲು ಒತ್ತಾಯಿಸಿ
ಅರಸೀಕೆರೆ  ಸಾರಿಗೆ ಸಂಸ್ಥೆಯ ಘಟಕದ ಮೆಲ್ವಿಚಾರಕರಿಗೆ ಮನವಿ ಪತ್ರ ಸಲ್ಲಿಸಿದರು.  ಉತ್ತಮ ಸಾರಿಗೆ ಸೇವೆ ನೀಡಲು 4 ಬಸ್ಸುಗಳನ್ನು   ಹೆಚ್ಚುವರಿಯಾಗಿ ಬಿಡದಿದ್ದರೆ ಹಾಸನಕ್ಕೆ ಹಾರನಹಳ್ಳಿ ಮಾರ್ಗವಾಗಿ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸುಗಳನ್ನು ತಡೆಯಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.